ಕೊತ್ತಂಬರಿ ಸೊಪ್ಪು ಮತ್ತು ಬೀಜಗಳಿಗೆ ಭಾರತದಲ್ಲಿ ಯಾವಾಗಲೂ ಬೇಡಿಕೆ ಇರುತ್ತದೆೆ. ಕೊತ್ತಂಬರಿ ಕೃಷಿಯಲ್ಲಿ ಭಾರತವು ನಾಲ್ಕನೇ ಅತಿದೊಡ್ಡ ಉತ್ಪಾದಕ ಮತ್ತು ಗ್ರಾಹಕ ದೇಶವೂ ಹೌದು. ಭಾರತದಲ್ಲಿ ಮಧ್ಯಪ್ರದೇಶ, ಗುಜರಾತ್, ರಾಜಸ್ಥಾನ, ಬಿಹಾರ, ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರ, ಕರ್ನಾಟಕ ಮತ್ತು ಉತ್ತರ ಪ್ರದೇಶದಲ್ಲಿ ಕೊತ್ತಂಬರಿ ಹೆಚ್ಚು ಬೆಳೆಯಲಾಗುತ್ತದೆ.
ಸಾಮಾನ್ಯವಾಗಿ ಕೊತ್ತಂಬರಿ ಸೊಪ್ಪನ್ನು ಮಾರಾಟ ಮಾಡುವ ಮೂಲಕ ರೈತರು 600 - 1500 ರೂ. ಪ್ರತಿದಿನ ಒಂದು ಎಕರೆಯಿಂದ ಪಡೆಯಬಹುದು. ಕೊತ್ತಂಬರಿ ಸೊಪ್ಪು ಕೇವಲ 40 - 55 ದಿನಗಳಲ್ಲಿಯೇ ಕಟಾವಿಗೆ ಸಿದ್ಧವಾಗುತ್ತದೆ. ರೈತರು ಕೊತ್ತಂಬರಿ ಬೀಜಗಳನ್ನು (ದನಿಯ) ಮಾರಾಟ ಮಾಡುವ ಮೂಲಕ ಉತ್ತಮ ಲಾಭ ಗಳಿಸಬಹುದು. ಕೊತ್ತಂಬರಿ ಬೀಜವು 100 - 120 ದಿನಗಳಲ್ಲಿ ಕಟಾವಿಗೆ ಸಿದ್ಧವಾಗುತ್ತದೆ. ನೀರಾವರಿ ಸೌಲಭ್ಯವಿದಲ್ಲಿ ಎಕರೆಗೆ 7 ರಿಂದ 9 ಕ್ವಿಂಟಾಲ್ ಬೀಜ ಮತ್ತು 50 ರಿಂದ 80 ಕ್ವಿಂಟಾಲ್ ಸೊಪ್ಪು ಇಳುವರಿಯನ್ನು ಪಡೆಯಬಹದು. ಹಾಗು ನೀರಾವರಿ ರಹಿತ ಭೂಮಿಯಲ್ಲಿ ಎಕರೆಗೆ 3 ರಿಂದ 5 ಕ್ವಿಂಟಾಲ್ ಬೀಜ ಇಳುವರಿಯನ್ನು ಪಡೆಯಬಹುದು, ಇದರ ಮಾರುಕಟ್ಟೆ ಮೌಲ್ಯವು 7,500 – 12,000 ರೂಪಾಯಿಗಳವರೆಗೆ ಇರುತ್ತದೆ.
ಕೊತ್ತಂಬರಿ ವಿಧಗಳು:-
ಕೊತ್ತಂಬರಿ ವಿಧಗಳು:-
ಕೊತ್ತಂಬರಿ ಬೆಳೆಯನ್ನು ಮೂರು ವಿಧಗಳಾಗಿ ವಿಂಗಡಿಸಬಹುದು
1.ಕೇವಲ ಸೊಪ್ಪಿಗಾಗಿ ಬೆಳೆಸುವ ಕೊತ್ತಂಬರಿ ತಳಿಗಳು. ಉದಾಹರಣೆಗೆ ಆರ್‌ಸಿಆರ್ 41, ಗುಜರಾತ್ ಕೊತ್ತಂಬರಿ.
2.ಕೇವಲ ಬೀಜಕ್ಕಾಗಿ ಬೆಳೆಸುವ ಕೊತ್ತಂಬರಿ ತಳಿಗಳು. ಉದಾಹರಣೆಗೆ ಆರ್‌ಸಿಆರ್ 20, ಸ್ವಾತಿ, ಸಾಧನಾ.
3.ಬೀಜ ಮತ್ತು ಸೊಪ್ಪಿಗಾಗಿ ಬೆಳೆಸುವ ಕೊತ್ತಂಬರಿ ತಳಿಗಳು. ಉದಾಹರಣೆಗೆ ಪುಸಾ 360, ಪಂತ್ ಕೊತ್ತಂಬರಿ, ಸಿಂಧು ಮುಂತಾದವು. ಇವುಗಳಿಂದ 2 ರಿಂದ 3 ಬಾರಿ ಸೊಪ್ಪನ್ನು ಕಟಾವು ಮಾಡಿಕೊಂಡ ನಂತರ ಬೀಜಗಳ ಅಭಿವೃದ್ಧಿಗೆ ಬಿಡಲಾಗುತ್ತದೆ.
- ಮಲ್ಟಿಕಟಿಂಗ್ ಕೊತ್ತಂಬರಿ:- ಮಲ್ಟಿಕಟ್ ತಳಿಗಳಿಂದ ನಾವು ಹಲವಾರು ಬಾರಿ ಸೊಪ್ಪನ್ನು ಕೊಯ್ಲು ಮಾಡಬಹುದು. ಅದರ ಬಲವಾದ ಸುವಾಸನೆ, ಆಕರ್ಷಕ ಹೊಳಪು, ವಿಶಾಲ ಮತ್ತು ಹಸಿರು ಎಲೆಗಳಿಂದಾಗಿ ಉತ್ತಮ ಬೇಡಿಕೆಯಲ್ಲಿದೆ. ಸಾಮಾನ್ಯವಾಗಿ ಈ ತಳಿಗಳು ಬ್ಯಾಕ್ಟೀರಿಯಾದ ಕಾಯಿಲೆಗಳ ವಿರುದ್ಧ ರೋಗನಿರೋಧಕ ಶಕ್ತಿಯನ್ನು ಹೊಂದಿರುತ್ತವೆ. ಕೊತ್ತಂಬರಿ ಸೊಪ್ಪಿನ ಹೆಚ್ಚಿನ ಬೇಡಿಕೆಯಿಂದಾಗಿ ಈಗ ಮಲ್ಟಿಕಟ್ ತಳಿಗಳು ಹೆಚ್ಚು ಜನಪ್ರಿಯವಾಗುತ್ತಿವೆ. ಇತ್ತೀಚೆಗೆ ಐ.ಐ.ಹೆಚ್.ಅರ್. ಬೆಂಗಳೂರು ಅಭಿವೃದ್ಧಿ ಪಡಿಸಿರುವ ಅರ್ಕಾ ಇಶಾ ಎಂಬ ತಳಿಯನ್ನು ಮಲ್ಟಿಕಟ್ ಕೊತ್ತಂಬರಿಗಾಗಿ ಬೆಳೆಯಬಹುದು, ಇದನ್ನು ಹೊರತುಪಡಿಸಿ ಪಂಜಾಬ್ ವಿಶ್ವವಿದ್ಯಾಲಯವು ಸುಗಂಧ್ ಎಂಬ ತಳಿಯನ್ನು ಬಿಡುಗಡೆ ಮಾಡಿದೆ.
ಮಲ್ಟಿಕಟ್ ಕೊತ್ತಂಬರಿಯ ಪ್ರಮುಖ ಲಕ್ಷಣಗಳು
ಮಲ್ಟಿಕಟ್ ಕೊತ್ತಂಬರಿಯ ಪ್ರಮುಖ ಲಕ್ಷಣಗಳು
• ಹೆಚ್ಚಿನ ಇಳುವರಿ ನೀಡುವ, ಮಲ್ಟಿಕಟ್ ತಳಿಗಳಿಂದ ಸುಮಾರು 3 ಬಾರಿ ಕೊಯ್ಲುಗಳನ್ನೂ ತೆಗೆದುಕೊಳ್ಳಬಹುದು.
• ಸಸ್ಯಗಳು ಧಟ್ಟವಾಗಿರುತ್ತವೆ, ಅಗಲವಾದ ಎಲೆಗಳು ಮತ್ತು ಚಿಕ್ಕ ಎಲೆ ಹಾಲೆಗಳನ್ನು ಹೊಂದಿರುತ್ತವೆ.
• ತಡವಾಗಿ ಹೂಬಿಡುವಿಕೆ (ಬಿತ್ತನೆ ಮಾಡಿದ 50 ದಿನಗಳ ನಂತರ).
• ಬಿತ್ತನೆ ಮಾಡಿದ 40 ದಿನಗಳ ನಂತರ ಮೊದಲ ಕೊಯ್ಲಿಗೆ ಬರುತ್ತದೆ ಮತ್ತು ಕೊಯ್ಲಾದ 15 ದಿನಗಳ ನಂತರ ಮುಂದಿನ ಕೊಯ್ಲಿಗೆ ಬರುತ್ತದೆ.
• ಮೊದಲ ಕೊಯ್ಲಿನಲ್ಲಿ ಎಕರೆಗೆ 10- 15 ಕ್ವಿಂಟಾಲ್ ಇಳುವರಿ, ಹೀಗೆ ಮೂರ ಕೊಯ್ಲಿನಲ್ಲಿ ಎಕರೆಗ 30 ಕ್ವಿಂಟಾಲ್ ವರೆಗೆ ಇಳುವರಿ ಪಡೆಯಬಹುದು.
• ಎಲೆಗಳ ತೇವಾಂಶ 82.4%, ಒಟ್ಟು ಕರಗುವ ಘನವಸ್ತುಗಳು 17.6% ಮತ್ತು ವಿಟಮಿನ್ ಸಿ ಅಂಶ 167.05 ಮಿಗ್ರಾಂ / 100 ಗ್ರಾಂ.
• ಎಲೆಗಳ ಸಾರಭೂತ ತೈಲ ಉತ್ತಮ ಸುವಾಸನೆಯೊಂದಿಗೆ 0.083% ಇಳುವರಿ ನೀಡುತ್ತದೆ.
• ಕಡಿಮೆ ತಾಪಮಾನದಲ್ಲಿ ಪಾಲಿಥೀನ್ ಚೀಲದಲ್ಲಿಟ್ಟು ಸಂಗ್ರಹಿಸಿದಾಗ ಸುವಾಸನೆಯನ್ನು ಕಳೆದುಕೊಳ್ಳದೆ 3 ವಾರಗಳವರೆಗೆ ಇಡಬೊಹುದು ಹಾಗು ಕೋಣೆಯ ಸಾಮಾನ್ಯ ಉಷ್ಣಾಂಶದಲ್ಲಿ 3 ದಿನಗಳವರೆಗೆ ಇಡಬೊಹುದು.
ಬಿತ್ತನೆ ಸಮಯ
ಬಿತ್ತನೆ ಸಮಯ
ವರ್ಷಪೂರ್ತಿ ಕೊತ್ತಂಬರಿ ಬೇಸಾಯವನ್ನು ಮಾಡಲಾಗುತ್ತದೆ, ಬೀಜಗಳಿಗಾಗಿ ಕೃಷಿ ಮಾಡಲು ಬಯಸುವ ರೈತರು ಚಳಿಗಾಲದಲ್ಲಿ ಬಿತ್ತನೆ ಮಾಡಬೇಕು ಮತ್ತು ಸೊಪ್ಪಿಗಾಗಿ ಮಾರ್ಚ್ ಮತ್ತು ಸೆಪ್ಟೆಂಬರ್ ನಡುವೆ ಬಿತ್ತನೆ ಮಾಡಬೇಕು. ಬೇಸಿಗೆಯಲ್ಲಿ ಕೊತ್ತಂಬರಿ ಸೊಪ್ಪಿನ ಬೆಲೆ ಹೆಚ್ಚಿರುತ್ತದೆ, ಆದ್ದರಿಂದ ನೀರಾವರಿ ಸೌಲಭ್ಯದೊಂದಿಗೆ ಬೆಳೆಯುವುದು ಲಾಭದಾಯಕ.
ಜಮೀನು ಸಿದ್ಧತೆ ಮತ್ತು ಗೊಬ್ಬರದ ಪ್ರಮಾಣಗಳು
ಜಮೀನು ಸಿದ್ಧತೆ ಮತ್ತು ಗೊಬ್ಬರದ ಪ್ರಮಾಣಗಳು
ನೀರು ಇಂಗುವಿಕೆಯ ಉತ್ತಮ ಕ್ಷಮತೆಯುಳ್ಳ ಮಣ್ಣು ಸೂಕ್ತ. ಮಳೆಯಾಶ್ರಿತ ಪರಿಸ್ಥಿತಿಯಲ್ಲಿ ಬೆಳೆಸಬೇಕಾದರೆ ಕಪ್ಪು ಮಣ್ಣು ಸೂಕ್ತವಾಗಿರುತ್ತದೆ. ಬಿತ್ತನೆಯ ಮೊದಲು ಆಳವಾಗಿ ಉಳುಮೆ ಮಾಡಬೇಕು ಮತ್ತು ಎಕರೆಗೆ 2 ರಿಂದ 3 ಟನ್ ಚೆನ್ನಾಗಿ ಕೊಳೆತ ಸಗಣಿ ಗೊಬ್ಬರವನ್ನು ಹಾಕಬೇಕು. ನೀರಾವರಿ ಸೌಲಭ್ಯವಿಲ್ಲದೆ ಕೃಷಿ ಮಾಡುವುದಾದರೆ, ಎಕರೆಗೆ 20 ಕೆಜಿ ಸಾರಜನಕ, 10 ಕೆಜಿ ಗಂಧಕ, 10 ಕೆಜಿ ಪೊಟ್ಯಾಶ್ ಅನ್ನು ಬಳಸಿ ಹಾಗು ನೀರಾವರಿ ಸೌಲಭ್ಯ ಲಭ್ಯವಿದ್ದರೆ 30 ಕೆಜಿ ಸಾರಜನಕ, 10 ಕೆಜಿ ಗಂಧಕ, 10 ಕೆಜಿ ಪೊಟ್ಯಾಶ್ ಬಳಸಿ. ಹೊಲದ ಅಂತಿಮ ಉಳುಮೆಯ ಸಮಯದಲ್ಲಿ ಗೊಬ್ಬರವನ್ನು ಹಾಕಿ.
ಬಿತ್ತನೆ ಮಾಡುವ ವಿಧಾನ
ಬಿತ್ತನೆ ಮಾಡುವ ವಿಧಾನ
ಕೊತ್ತಂಬರಿ ಬೀಜವನ್ನು ನೇರವಾಗಿ ಹೊಲಗಳಲ್ಲಿ ಬಿತ್ತನೆ ಮಾಡಲಾಗುತ್ತದೆ. ಆದರೆ ಬಿತ್ತನೆ ಮಾಡುವ ಮೊದಲು ಬೀಜವನ್ನು ನೀರಿನಲ್ಲಿ ನೆನೆಸಬೇಕು, ನಂತರ ಬೀಜಗಳನ್ನು ಕಾರ್ಬಂಡಿಜ್ ನಂತಹ ಶಿಲೀಂಧ್ರನಾಶಕದಿಂದ ಬೀಜೋಪಚಾರ ಮಾಡಬೇಕು.
ನೀರಾವರಿ ಜಮೀನಿನಲ್ಲಿ ಬೀಜಗಳನ್ನು 1 ರಿಂದ 2.5 ಸೆಂ.ಮೀ. ಆಳದಲ್ಲಿ ನೆಡಬೇಕು ಹಾಗು ನೀರಾವರಿ ರಹಿತ ಜಮೀನಿನಲ್ಲಿ ಬೀಜಗಳನ್ನು 5 ರಿಂದ 7 ಸೆಂ.ಮೀ ಆಳದಲ್ಲಿ ನೆಡಬೇಕು. ಸಸ್ಯಗಳ ನಡುವೆ 4-10 ಸೆಂ.ಮೀ ಮತ್ತು ಸಾಲುಗಳ ನಡುವೇ 25 - 30 ಸೆಂ.ಮೀ ಅಂತರವನ್ನು ಸಹ ಕಾಪಾಡಿಕೊಳ್ಳಬೇಕು. ಬಿತ್ತನೆ ಸಮಯದಲ್ಲಿ, 3 ರಿಂದ 5 ದಿನಗಳ ಮಧ್ಯಂತರದೊಂದಿಗೆ ಬಿತ್ತನೆ ಮಾಡುವ ಮುಕಾಂತರ ಕೊತ್ತಂಬರಿ ಸೊಪ್ಪು ಪ್ರತಿದಿನ ಕೊಯ್ಲು ಮಾಡಲು ಸಿಗುತ್ತದೆ.
ಕಳೆ ನಿರ್ವಹಣೆ
ಕಳೆ ನಿರ್ವಹಣೆ
ಬಿತ್ತನೆಯ 25 - 35 ದಿನಗಳ ನಂತರ, ಕಳೆಗಳನ್ನು ಕೈಯಿಂದ ತೆಗೆದುಹಾಕಬೇಕು.
ರೋಗ ಮತ್ತು ಕೀಟ ನಿರ್ವಹಣೆ
ರೋಗ ಮತ್ತು ಕೀಟ ನಿರ್ವಹಣೆ
ರಸ ಹೀರುವ ಕೀಟ: ಕೊತ್ತಂಬರಿ ಬೆಳೆಯಲ್ಲಿ ರಸ ಹೀರುವ ಕೀಟಗಳು ತುಂಬಾ ನಷ್ಟವನ್ನುಂಟು ಮಾಡುತ್ತವೆ, ಗಿಡ ಹೇನು ಗಳಂತಹ ರಸ ಹೀರುವ ಕೀಟಗಳು ಸಸ್ಯಗಳ ಎಲ್ಲಾ ಮೃದು ಭಾಗಗಳಿಂದ ರಸವನ್ನು ಹೀರುತ್ತವೆ, ಇದರಿಂದ ಕೊತ್ತಂಬರಿ ಸೊಪ್ಪಿನ ಗುಣಮಟ್ಟವು ಹದಗೆಡುತ್ತದೆ. ಈ ಕೀಟವನ್ನು ನಿಯಂತ್ರಿಸಲು ಶಿಫಾರಸು ಮಾಡಿರುವ ಸಿಸ್ಟೆಮಿಕ್ ಕೀಟನಾಶಕಗಳನ್ನು ಬಳಸಿ.
ಬೂದು ರೋಗ
ಬೂದು ರೋಗ
ಬೂದು ರೋಗ : ಮುಖ್ಯವಾಗಿ ಕೊತ್ತಂಬರಿ ಸೊಪ್ಪಿಗಾಗಿ ಕೃಷಿ ಮಾಡುವಾಗ ಈ ರೋಗವು ತುಂಬಾ ಹಾನಿಕಾರಕವಾಗಿದೆ, ಏಕೆಂದರೆ ಇದು ಎಲೆಯ ಗುಣಮಟ್ಟವನ್ನು ಹದಗೆಡಿಸುತ್ತದೆ. ಇದನ್ನು ತಡೆಗಟ್ಟಲು, ಅಜೋಕ್ಸಿಸ್ಟ್ರೋಬಿನ್ ನಂತಹ ಶಿಲೀಂಧ್ರನಾಶಕಗಳನ್ನು 15 ದಿನಗಳ ಮಧ್ಯಂತರದಲ್ಲಿ ಸಿಂಪಡಿಸಿ.
ಕೊಯ್ಲು
ಕೊಯ್ಲು
ತಳಿಗಳ ಆಧಾರದ ಮೇಲೆ, ಬೆಳೆ ಸುಮಾರು 30 - 40 ದಿನಗಳಲ್ಲಿ ಮೊದಲ ಕೊಯ್ಲಿಗೆ ಸಿದ್ಧವಾಗುತ್ತದೆ, ಬೆಳೆ 6 -10 ಇಂಚುಗಳಷ್ಟು ಎತ್ತರವಾದಾಗ ಕೊಯ್ಲು ಮಾಡಬಹುದು. ಮಾರುಕಟ್ಟೆ ಬೇಡಿಕೆಗೆ ಅನುಗುಣವಾಗಿ ದಿನನಿತ್ಯ ಕೊತ್ತುಂಬರಿ ಸೊಪ್ಪನ್ನು ಕೊಯ್ಲು ಮಾಡಿ ಸರಬರಾಜು ಮಾಡಬಹುದು, ಕೊತ್ತುಂಬರಿ ಬೀಜಗಳಿಗೆ ಮಸಾಲೆ ಪದಾರ್ಥದ ಮಾರುಕಟ್ಟೆಯಲ್ಲಿ ಎಂದಿಗೂ ಬೇಡಿಕೆ ಇರುತ್ತದೆ, ಕೊತ್ತುಂಬರಿ ಎಣ್ಣೆಯನ್ನು ಸೌಂದರ್ಯ ಉತ್ಪನ್ನಗಳನ್ನು ತಯಾರಿಸಲು ಸಹ ಬಳಸಲಾಗುತ್ತದೆ. ಕೊತ್ತುಂಬರಿ ಸೊಪ್ಪನ್ನು ಮಾರಾಟ ಮಾಡುವ ಮೂಲಕ ಪ್ರತಿ ಕೆಜಿಗೆ 60 - 120 ರೂಪಾಯಿ, ಪ್ರತಿ ಕೆಜಿ ಕೊತ್ತುಂಬರಿ ಬೀಜಕ್ಕೆ 120- 200 ರೂಪಾಯಿ ಮತ್ತು ಪ್ರತಿ ಕೆಜಿ ತೈಲಕ್ಕೆ 1200- 1500 ರೂಪಾಯಿವರೆಗೂ ಪಡೆಯಬಹುದು.
ಈ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು, ಲೇಖನವನ್ನು ಇಷ್ಟಪಡಲು ನೀವು ♡ ಐಕಾನ್ ಕ್ಲಿಕ್ ಮಾಡಿದ್ದೀರಿ ಮತ್ತು ಲೇಖನವನ್ನು ಈಗ ನಿಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಹಂಚಿಕೊಳ್ಳುತ್ತೇವೆ ಎಂದು ನಾವು ಭಾವಿಸುತ್ತೇವೆ!
ಬಿತ್ತನೆ ಸಮಯ
ಬಿತ್ತನೆ ಸಮಯ