ಹಿಂದೆ
ತಜ್ಞರ ಲೇಖನಗಳು
ನಾನು ಕೃಷಿ ಹೊಂಡವನ್ನು ನಿರ್ಮಿಸಿದ ವಿಧಾನ- ಪ್ರಗತಿಪರ ರೈತ

ನನ್ನ ಹೆಸರು ಪಾಂಡುರಂಗ ಇನಾಮಿ, ನಾನು ಔರಂಗಾಬಾದಿನಿಂದ 30 ಕೀಲೋಮೀಟರ್ ದೂರದಲ್ಲಿರುವ ಪೈತಾನ್ ತಾಲೋಕಿನಲ್ಲಿ ವಾಸವಾಗಿದ್ದೇನೆ. ನಮ್ಮದು ಬಹಳ ಶುಷ್ಕ ಪ್ರದೇಶ ಆದರೂ ಹತ್ತಿ, ಮೆಕ್ಕೆಜೋಳ ಮತ್ತು ಗಜನಿಂಬೆಯಂತಹ ಬೆಳೆಗಳಿಗೆ ಸಾಕಾಗುವಷ್ಟು ಮಳೆ ಬೀಳುತ್ತದೆ. ನಾನು 2000 ದಿಂದ 2003ರ ಅವಧಿಯಲ್ಲಿ ನೀರಿನ ಅಭಾವದ ತೀವ್ರತೆಯನ್ನು ಎದುರಿಸಿದೆ. ಅಂತರ್ಜಲವು ಸಹ ಕೊರತೆಯಾಗಿ ಬೇಸಿಗೆಯಲ್ಲಿ ಒಣಗುತ್ತಿತ್ತು. ಹಾಗಾಗಿ ನಾನು ಮಳೆ ನೀರನ್ನು ಶೇಖರಿಸಲು ಒಂದು ಕೃಷಿ ಹೊಂಡವನ್ನು ನಿರ್ಮಿಸಲು ಮತ್ತು ಅಂತೆಯೇ ಬೋರ್ವೆಲ್ ನಿಂದ ಅಂತರ್ಜಲವನ್ನು ಹೆಚ್ಚಿಸಲು ಸಹ ಆಲೋಚಿಸಿದೆ. ಈ ಅವಧಿಯಲ್ಲಿ ನಾನು ಹೈದರಾಬಾದಿನ ಇಕ್ರಿಸ್ಯಾಟ್ ನ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದೆ ಅಲ್ಲಿ ನಾನು ನೀರನ್ನು ಶೇಖರಿಸುವ ಪರಿಣಾಮಕಾರಿ ಮಾರ್ಗವೆಂದರೆ ಕೃಷಿ ಹೊಂಡ ನಿರ್ಮಿಸುವುದು ಎಂದು ಹಾಗೂ ಮಳೆಗಾಲದ ನಂತರವು ಹೊಲಕ್ಕೆ ನೀರಾವರಿ ಒದಗಿಸಲು ಬಳಸಬಹುದು ಎಂದು ಕಲಿತುಕೊಂಡೆ.

ಅವರುಗಳನ್ನೇ ಉದಾಹರಣೆಯಾಗಿ ತೆಗೆದುಕೊಂಡು, ನಾನು ಕೃಷಿ ಹೊಂಡವನ್ನು ನಿರ್ಮಿಸಲು ಆರಂಭಿಸಿದೆ. ಯಾವುದೇ ಒಂದು ಕೃಷಿ ಹೊಂಡವನ್ನು ನಿರ್ಮಿಸಲು, ನೀರನ್ನು ಸುಲಭವಾಗಿ ಸಾಗಿಸಬಹುದಾದ ಪ್ರದೇಶದಲ್ಲಿ ಹೊಂಡವನ್ನು ತೆರೆಯುವುದು ಮತ್ತು ಬೆಳೆಗಳಿಗೆ ಹಾಯಿಸಲು ಸುಲಭವಾದ ಸ್ಥಳದಲ್ಲಿರಬೇಕಾದದ್ದು ಬಹಳ ಮುಖ್ಯವಾಗಿರುತ್ತದೆ. ಭೂಮಿಯ ಉತ್ಖನನ ಮತ್ತು ಸಾಗಾಣಿಕೆ ಕೆಲಸಗಳನ್ನು ಸಾಮಾನ್ಯ ನೌಕರರು ಅಥವಾ ಎಕ್ಸಕವೇಟರುಗಳು ಮತ್ತು ಟ್ರಾಕ್ಟರುಗಳಂತಹ ಯಂತ್ರಗಳ ಸಂಯೋಜನೆಯಲ್ಲಿ ಪೂರೈಸಬಹುದು." ರೈತ ಪಾಂಡರುಂಗ್ ಹೇಳಿದರು.

undefined
undefined
undefined

ಟ್ರಾಕ್ಟರ್-ಚಾಲಿತ ಲೆವೆಲರ್ ಸಹಾಯದಿಂದ ಮಣ್ಣನ್ನು ಪರಿಣಾಮಕಾರಿಯಾಗಿ ಅಗೆಯ ಬಹುದಾಗಿರುತ್ತದೆ. ಮಣ್ಣನ್ನು ಅಗೆಯುವ ಕೆಲಸವನ್ನು ಹೊಂಡದ ಒಂದು ತುದಿಯಿಂದ ಆರಂಭಿಸಬೇಕು. ಅಗತ್ಯವಿರುವ ಆಳದ ವರೆಗೂ ಮಣ್ಣನ್ನು ಹೊರತೆಗೆಯಬೇಕು. ಸರ್ವೀಸ್ ರಿಸರ್ವಾಯರಿನ ತಳದಿಂದ ಮಣ್ಣನ್ನು ಸಂಪೂರ್ಣವಾಗಿ ಹೊರ ತೆಗೆದ ನಂತರ, ರಿಸರ್ವಾಯರಿನ ಆಕಾರ ಸರಿ ಮಾಡಲು ಮಣ್ಣನ್ನು ತುಂಬಿಸುವ ಬದಲಿಗೆ ಅಗೆದು ತೆಗೆಯುವುದು ಉತ್ತಮ. ಇದು ಉತ್ತಮವಾದ ಹೊಂಡದ ಬದುಗಳನ್ನು ಒದಗಿಸುತ್ತದೆ.

ಒಂದು 100x100x12 ಕ್ಯುಬಿಕ್ ಅಡಿಯಷ್ಟು ಹೊಂಡವನ್ನು ಅಗೆಯಲು ಇರುವಂತಹ ಮಾರುಕಟ್ಟೆ ದರವೆಂದರೆ ರೂ. 80,000 ದಿಂದ ರೂ. 90,000 ಇರಬಹುದು ಆದರೆ ರೈತರಿಗೆ ಕೆಲವು ಯೋಜನೆಗಳ ಅಡಿಯಲ್ಲಿ ಸಹಾಯಧನವನ್ನು ಸಹ ಪಡೆಯಲಿದ್ದಾರೆ. ನನ್ನ ಕೃಷಿ ಹೊಂದದ ಅಳತೆಯು 250 ಅಡಿ X 250 ಅಡಿ X 28 ಅಡಿ ಗಳಿವೆ. ನನಗೆ ಮಹಾರಾಷ್ಟ್ರ ಸರ್ಕಾರದಿಂದ 100% ಸಹಾಯಧನ ಸಿಕ್ಕಿತು ಮತ್ತು ಪ್ರಸ್ತುತ ಈ ಸಹಾಯಧನವು ಪಾಲಿಥೀನ್ ಶೀಟಿನ ದರದ 50%ದಷ್ಟಿದೆ.

undefined
undefined

ಹನಿ ನೀರಾವರಿಯ ಸಹಾಯದಿಂದ ಈ ಕೃಷಿ ಹೊಂಡದಲ್ಲಿರುವ ನೀರು ಸರಿ ಸುಮಾರು 20 ಎಕರೆ ಭೂಮಿಗೆ ಸಾಕಾಗುವಷ್ಟಿರುತ್ತದೆ. ಪ್ರಸ್ತುತುವಾಗಿ ನಾನು ಕಬ್ಬು, ಸಪೋಟ ಮತ್ತು ಮೂಸಂಬಿಗಳನ್ನು ಈ ನೀರಿನ ಸಹಾಯದಿಂದ ಬೆಳೆದಿದ್ದೇನೆ. ಒಮ್ಮೆ ನಿರ್ಮಿಸಿದ ನಂತರ, ಹೊಂದಕ್ಕೆ ಕನಿಷ್ಟ ಮಟ್ಟದ ನಿರ್ವಹಣೆ ಮತ್ತು ದುರಸ್ಥಿ ಮಾಡಿದರೆ ಸಾಕಾಗುತ್ತದೆ. ನೀರಿನ ಮೂಲದಿಂದ ಸೋರಿಕೆ ಮತ್ತು ಇತರೆ ನಷ್ಟಗಳನ್ನು ತಪ್ಪಿಸಲು, ಹೊಂಡಕ್ಕೆ ಅತ್ಯಧಿಕ ಸಾಂದ್ರತೆಯ ಪಾಲಿಥೀನ್ ಪದಾರ್ಥದಿಂದ ಮುಚ್ಚಬೇಕು. ನಾನು ಡಿಪಿ ಪ್ಲಾಸ್ಟಿಕ್ ರಾಟ್ಲಂನಿಂದ ಎಚ್.ಡಿ.ಪಿ ಪದಾರ್ಥವನ್ನು ಬಳಸಿದೆ ಆ ಸಮಯದಲ್ಲಿ ಅದು 10ವರ್ಷಗಳಿಗೂ ಹೆಚ್ಚು ಬಾಳಿಕೆ ಬಂದಿತ್ತು.

ಹೊಂಡಕ್ಕೆ ಸೂಕ್ತವಾದ ಲೈನಿಂಗ ಮಾಡಿದ ನಂತರ, ಹೋರಿಕೆ ನಷ್ಟ ಕಡಿಮೆಯಾಗಿತ್ತದೆ. ಪ್ಲಾಸ್ಟಿಕ್ ಅನ್ನು ಸಹ ಬಳಸಿಕೊಂಡು ಹೊಂಡದ ಲೈನಿಂಗ್ ಅನ್ನು ಪರಿಣಾಮಕಾರಿಯಾಗಿ ಮಾಡಬಹುದು. ಆದರೆ, ಪ್ಲಾಸ್ಟಿಕ್ಸ್ ನಿಂದ ಹೊಂಡದ ಲೈನಿಂಗ ಮಾಡುವಾಗ ಸರಿಯಾದ ಪದಾರ್ಥವನ್ನು ಅಯ್ಕೆ ಮಾಡುಕೊಳ್ಳುವಲ್ಲಿ ಮತ್ತು ಪ್ಲಾಸ್ಟಿಕ್ ವಸ್ತುವನ್ನು ಹಾಸುವಾಗ ಹಾಗೂ ಹಾನಿಯಿಂದ ಕಾಪಾಡುವಲ್ಲಿ ಅತ್ಯಂತ ಕಾಳಜಿಯನ್ನು ವಹಿಸಬೇಕು. ಪಾಲಿಥಾನ್ ರೋಲ್ ಗಳನ್ನು ಎಳೆದಾಡಬೇಡಿ ಅಥವಾ ಒರಟಾಗಿ ನಿರ್ವಹಿಸಬೇಡಿ, ಏಕೆಂದರೆ ಈ ಕೆಲಸ ಮಾಡುವಾಗ ಫಿಲ್ಮ್ ಹಾನಿಯಾಗಬಹುದು. ಲೈನಿಂಗ್ ಕೆಲಸ ನಡೆಯುವಾಗ ಕೆಲಸಗಾರರು ಪಾಲಿಥೀನ್ ಮೇಲೆ ನಡೆದಾಡದಂತೆ ನೋಡಿಕೊಳ್ಳಿ ಏಕೆಂದರೆ ಆಗ ಫಿಲ್ಮ್ ಪಂಚರ್ ಆಗಬಹುದು. ನಡೆದಾಡಲೇ ಬೇಕಾದಾಗ, ಅವರು ಬರಿಗಾಲಲ್ಲಿ ಇದ್ದರೆ ಒಳ್ಳೆಯದು. ಹೊಂದ ಸ್ಥಾಪನೆಯಾದ ಮೇಲೆ, ಕಾಲಕಾಲಕ್ಕೆ ಅದನ್ನು ತಪಾಸಣೆ ಮಾಡಿದರೆ ಹೊಂಡದ ಬಾಳಿಕೆಗೆ ಉತ್ತಮವಾಗಿರುತ್ತದೆ. ಹಾಗಾಗಿ ದೀರ್ಘವಾದ ಬಾಳಿಕೆಗೆ ಮುಖ್ಯವಾದ ಅಂಶವೆಂದರೆ ಸಮಯೋಚಿತವಾದ ನಿರ್ವಹಣೆ. ಇದರಲ್ಲಿ ತಪಾಸಣೆ ಮಾಡುವುದು, ಸಮಸ್ಯೆ ತೆಗೆದುಹಾಕುವುದು, ಹಾನಿಗಳನ್ನು ದುರಸ್ಥಿ ಮಾಡುವುದು ಸಹ ಒಳಗೊಂಡಿರುತ್ತದೆ. ಹಾಳಾದ ಜಾಗವನ್ನು ಪರೀಕ್ಷಿಸಿ ಉದ್ದೇಶಿತ ದುರಸ್ಥಿಯನ್ನು ತಕ್ಷಣವೇ ಮಾಡಿದರೆ ಮುಂದಿನ ಹಾನಿಗಳಿಂದ ಕಾಪಾಡಬಹುದು.

undefined
undefined

ಕೃಷಿ ಹೊಂಡದ ಉತ್ತಮ ನಿರ್ವಹಣೆಗಾಗಿ ನಿಮಗೆ ತಿಳಿದರಬೇಕಾದ ಕೆಲವು ಅತಿ ಮುಖ್ಯ ಅಂಶಗಳು ಈ ಕೆಳಗಿನಂತಿವೆ:

1.ಹೊಂಡದ ಪ್ರದೇಶವನ್ನು ಪ್ರಾಣಿಗಳ ದಾಳಿಯಿಂದ ಕಾಪಾಡಲು ಸೂಕ್ತವಾದ ಬೇಲಿಯನ್ನು ಹಾಕಬೇಕು.

2.ಹೊಂಡದಲ್ಲಿ ಮೀನು ಸಾಕಾಣಿಕೆ ಮಾಡಿದರೆ ಆದಾಯ ಹೆಚ್ಚಿಸಬಹುದು. ನಾನು ಕಿಲೋಗ್ರಾಂಗೆ ರೂ. 120 ಕೊಡುವಂತಹ ರೊಹು, ಕಟ್ಲಾದಂತಹ ಸಿಹಿನೀರು ಮೀನುಗಳನ್ನು ಸಾಕಿದ್ದೇನೆ. ಆನಂತರ ಎಂಟು-ತಿಂಗಳ ಬೆಳವಣಿಗೆಯಾದ ಮೇಲೆ ನಾನು ಅವುಗಳನ್ನು ಕೊಯ್ಲು ಮಾಡುತ್ತೇನೆ, ನನಗೆ ಸುಮಾರು ರೂ. 80,000 ಸಿಗುತ್ತದೆ.

ಕ್ಷಾಮವನ್ನು ಕಡಿಮೆ ಮಾಡುವ ಪರಿಣಾಮಕಾರಿ ಮಾರ್ಗವೆಂದರೆ ಕೃಷಿ ಹೊಂಡ ಮತ್ತು ಅದು ಕೃಷಿಯ ಆದಾಯಾವನ್ನು ಸಹ ಹೆಚ್ಚಿಸುತ್ತದೆ. ರೈತರು ನೀರನ್ನು ಸಂರಕ್ಷಿಸುವ ಮತ್ತು ಉತ್ಪಾದಕತೆ ಹೆಚ್ಚಿಸುವ ದಿಕ್ಕನೆಡೆಗೆ ಆಲೋಚಿಸಬೇಕು.

ನಮ್ಮ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿ

ಫಾರ್ಮ್ ಆನ್-ದಿ-ಗೋ: ನಮ್ಮ ಆ್ಯಪ್ ನಲ್ಲಿ ಯಾವುದೇ ಸಮಯದಲ್ಲಿ, ಎಲ್ಲಿಂದಲಾದರೂ ಮಾರುಕಟ್ಟೆಯ ದಿನನಿತ್ಯದ ಮಾಹಿತಿಯನ್ನು ಪಡೆಯಿರಿ. ಇದು ನಿಮ್ಮ ಭಾಷೆಯಲ್ಲಿಯೂ ಲಭ್ಯವಿದೆ.

google play button