ಹಿಂದೆ
ತಜ್ಞರ ಲೇಖನಗಳು
ಕೃಷಿ ಬಳಕೆಗಾಗಿ ಮಳೆ ನೀರನ್ನು ಸಂಗ್ರಹಿಸಿ ಶೇಖರಿಸುವುದು ಹೇಗೆ ?

ಭಾರತದ ಹೆಚ್ಚಿನ ಭಾಗಗಳಲ್ಲಿ ಮಳೆ ಬರುತ್ತಿರುವುದರಿಂದ ಮತ್ತು ರೈತರು ದಾಖಲೆ ಪ್ರಮಾಣದ ಪ್ರದೇಶದಲ್ಲಿ ವಿವಿಧ ಬೆಳೆಗಳನ್ನು ನಾಟಿ ಮಾಡಿದ್ದಾರೆೆ. ಪ್ರತಿ ರೈತ ಮತ್ತು ರೈತ ಸಂಘಟನೆಗಳು ಈ ಅಮೂಲ್ಯವಾದ ಮಳೆನೀರನ್ನು ಸಂಗ್ರಹಿಸುವ ವಿಧಾನಗಳ ಬಗ್ಗೆ ಕೆಲಸ ಮಾಡುವುದು ಬಹಳ ಮುಖ್ಯವಾಗಿದೆ. ಮಳೆನೀರನ್ನು ಸಂಗ್ರಹಿಸುವ ಮತ್ತು ಶೇಖರಿಸುವ ವಿಧಾನವನ್ನು ಮಳೆನೀರು ಕೊಯ್ಲು ಎಂದು ಕರೆಯಲಾಗುತ್ತದೆ.

ಮಳೆನೀರು ಕೊಯ್ಲು ಮಾಡುವುದರಿಂದ ಏನು ಪ್ರಯೋಜನ?

ಮಳೆನೀರು ಕೊಯ್ಲು ಮಾಡುವುದರಿಂದ ಏನು ಪ್ರಯೋಜನ?

undefined

1 ಮಳೆ ನೀರು ಸ್ವಚ್ಛವಾಗಿರುತ್ತದೆ ಮತ್ತು ರೈತ ಇದನ್ನು ಉಚಿತವಾಗಿ ಪಡೆಯುತ್ತಾನೆ.

2 ನಿಮ್ಮ ನೀರು ಸರಬರಾಜಿನ ಮೇಲೆ ನಿಮಗೆ ಸಂಪೂರ್ಣ ನಿಯಂತ್ರಣವಿರುತ್ತದೆ.

3 ಮಳೆ ನೀರು ಕೊಯ್ಲು ಸಾಮಾಜಿಕವಾಗಿ ಸ್ವೀಕೃತವಾದ ಪರಿಸರ ಸ್ನೇಹಿ ವಿಧಾನ.

4 ಇದು ಸ್ವಾವಲಂಬನೆಯನ್ನು ಉತ್ತೇಜಿಸುತ್ತದೆ ಮತ್ತು ನೀರನ್ನು ಸಂರಕ್ಷಿಸಲು ಸಹಾಯ ಮಾಡುತ್ತದೆ.

5 ಇದು ಕಡಿಮೆ ಖರ್ಚಿನಲ್ಲಿ ಸುಲಭವಾಗಿ ನಿರ್ಮಿಸಬಲ್ಲ ಸರಳ ತಂತ್ರಗಳನ್ನು ಬಳಸುತ್ತದೆ.

6 ಇದನ್ನು ನೇರವಾಗಿ ನೀರಾವರಿಗೆ ಉಪಯೋಗಿಸಬಹುದು ಅಥವಾ ಬಾವಿಗಳು ಮತ್ತು ಕಾಲುವೆಗಳನ್ನು ತುಂಬಿಸಲು ಬಳಸಬಹುದು.

ಎರಡು ವಿಧಾನಳನ್ನು ನೀರಿನ ಸಂರಕ್ಷಣೆಗೆ ಪ್ರಯೋಜನಕಾರಿ ಮತ್ತು ಸುಲಭವೆಂದು ಪರಿಗಣಿಸಲಾಗಿದೆ.

ಎರಡು ವಿಧಾನಳನ್ನು ನೀರಿನ ಸಂರಕ್ಷಣೆಗೆ ಪ್ರಯೋಜನಕಾರಿ ಮತ್ತು ಸುಲಭವೆಂದು ಪರಿಗಣಿಸಲಾಗಿದೆ.

1 ಮೇಲ್ಮೈ ನೀರಿನ ಸಂಗ್ರಹ

2 ಚಾವಣಿ ವಿಧಾನ

ಮೇಲ್ಮೈ ನೀರಿನ ಸಂಗ್ರಹ: -

ಮೇಲ್ಮೈ ನೀರಿನ ಸಂಗ್ರಹ: -

ನೆಲದ ಮೇಲೆ ಬಿದ್ದು ತಗ್ಗು ಪ್ರದೇಶಕ್ಕೆ ಹರಿಯುವ ಮಳೆ ನೀರನ್ನು ಚರಂಡಿಗೆ ಸೇರುವ ಮೊದಲು, ಅದನ್ನು ತಡೆದು ಶೇಖರಿಸುವ ಪ್ರಕ್ರಿಯೆಯನ್ನು ಮೇಲ್ಮೈ ನೀರಿನ ಸಂಗ್ರಹ ಎಂದು ಕರೆಯಲಾಗುತ್ತದೆ. ಈ ವಿಧಾನವನ್ನು ಹೆಚ್ಚಾಗಿ ಗ್ರಾಮೀಣ ಪ್ರದೇಶದಲ್ಲಿ ಬಳಸಬಹುದು, ಅಲ್ಲಿ ಬಾವಿಗಳು, ಕೊಳಗಳು ಮತ್ತು ಕೊಳವೆ ಬಾವಿಗಳು ಮುಖ್ಯ ನೀರಿನ ಮೂಲಗಳಾಗಿವೆ. ಅಂತರ್ಜಲವನ್ನು ಆಧಾರಿಸಿ ಕೊಂಡಿರುವರ ನಿರಂತರ ಬಳಕೆಯಿಂದಾಗಿ ಅಂತರ್ಜಲದ ಮಟ್ಟ ಕುಸಿಯುತ್ತಿದೆ, ಇದನ್ನು ಮಳೆನೀರು ಸಂಗ್ರಹದಿಂದ ಹೆಚ್ಚಿಸಬಹುದು.

undefined
undefined

ಶಾಶ್ವತ ಹೊಂಡ ಮಾಡುವ ಮೂಲಕ: -

ಶಾಶ್ವತ ಹೊಂಡ ಮಾಡುವ ಮೂಲಕ: -

ಪ್ರತಿವರ್ಷ ಹೊಲದಲ್ಲಿಯೇ ಸಾಕಷ್ಟು ನೀರು ವ್ಯರ್ಥವಾಗುವುದರಿಂದ, ತಗ್ಗಿನ ಪ್ರದೇಶದಲ್ಲಿ ಹೊಂಡ ನಿರ್ಮಾಣ ಮಾಡಿ ಹೊಲದ ಉಳಿದ ಭಾಗದಲ್ಲಿ ಚರಂಡಿಯನ್ನು ನಿರ್ಮಿಸಿ, ಬಿದ್ದ ಮಳೆ ನೀರು ಹರಿದು ಹೊಂಡವನ್ನು ಸೇರುವಂತೆ ಮಾಡುವ ಮೂಲಕ ಕನಿಷ್ಠ ವೆಚ್ಚದಲ್ಲಿ ಸಾಕಷ್ಟು ನೀರನ್ನು ಶೇಖರಿಸಬಹುದು. ಸುಮಾರು 50 * 50 ಮೀಟರ್ ವಿಸ್ತೀರ್ಣದ ಕೃಷಿ ಹೊಂಡ ಅಥವಾ ಕೊಳ ನಿರ್ಮಾಣ ಮಾಡಿ ಹೊಲದಲ್ಲಿ ಬಿದ್ದ ಮಳೆನೀರನ್ನು ಶೇಖರಿಸುವುದು ಅನೇಕ ಪ್ರದೇಶಗಳಲ್ಲಿ ನೀರು ಕೊಯ್ಲು ಮಾಡುವ ಪರಿಣಾಮಕಾರಿ ವಿಧಾನವಾಗಿದೆ. ಇದರಿಂದ ರೈತರು ತಮ್ಮ ಕೃಷಿ ನೀರಾವರಿ ಸಮಸ್ಯೆಗಳನ್ನು ಪರಿಹರಿಸಬಹುದು, ಜೊತೆಗೆ ತಮ್ಮ ಆದಾಯವನ್ನೂ ಹೆಚ್ಚಿಸಬಹುದು.

undefined
undefined

ಅಂತರ್ಜಲ ಮರುಪೂರಣ ಅಥವಾ ಡೀಪ್ ಲೀಕೇಜ್:-

ಅಂತರ್ಜಲ ಮರುಪೂರಣ ಅಥವಾ ಡೀಪ್ ಲೀಕೇಜ್:-

ತೆರೆದ ಪ್ರದೇಶಗಳಲ್ಲಿ, ಮಳೆನೀರು ಭೂಮಿಯಲ್ಲಿ ಇಂಗದೆ ವೇಗವಾಗಿ ಹರಿಯುತ್ತದೆ, ಅಂತಹ ಪ್ರದೇಶಗಳಲ್ಲಿ ನೀರು ಹರಿಯುವ ವೇಗವನ್ನು ಕಡಿಮೆಗೊಳಿಸಿ ನೀರು ಅಲ್ಲಲಿ ನಿಂತು ನಿದಾನವಾಗಿ ಹರಿಯುವಂತೆ ಮಾಡಬೇಕು. ಇದರಿಂದ ಭೂಮಿಯಲ್ಲಿ ಇಂಗುವ ನೀರಿನ ಪ್ರಮಾಣ ಹೆಚ್ಚಾಗುತ್ತದೆ ಮತ್ತು ಜಾಸ್ತಿ ಆಳದ ವರೆಗೆ ನೀರು ಇಂಗುತ್ತದೆ ಹಾಗು ಅಂತರ್ಜಲವನ್ನು ಹೆಚ್ಚಿಸುತ್ತದೆ. ಭಾರತದಲ್ಲಿ ಇನ್ನೂ ಹೆಚ್ಚಿನ ಕೃಷಿ ಭೂಮಿಯು ಮಳೆಯಾಶ್ರಿತವಾಗಿದ್ದು, ಬಾವಿ ಮತ್ತು ಕೊಳವೆ ಬಾವಿಗಳು ಕೃಷಿ ನೀರಾವರಿಗೆ ಮುಖ್ಯ ಮುಲವಾಗಿದೆ. ಆದರೆ ದೀರ್ಘಕಾಲೀನ ಬಳಕೆಯಿಂದಾಗಿ, ಈಗ ಅಂತರ್ಜಲ ಮಟ್ಟ ಕಡಿಮೆಯಾಗುತ್ತಿದೆ, ಮತ್ತು ಪ್ರತಿವರ್ಷ ಮಳೆ ಕೂಡ ಸರಿಯಾದ ಸಮಯದಲ್ಲಿ ಬರುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಮಳೆನೀರಿನಿಂದ ಅಂತರ್ಜಲ ಮಟ್ಟವನ್ನು ಹೆಚ್ಚಿಸುವುದು ಬಹಳ ಮುಖ್ಯವಾಗಿದೆ.

undefined
undefined

ಅಂತರ್ಜಲ ಮರುಪೂರಣದ ಪ್ರಯೋಜನಗಳು: -

ಅಂತರ್ಜಲ ಮರುಪೂರಣದ ಪ್ರಯೋಜನಗಳು: -

1 ಮಣ್ಣಿನ ಸವೆತವನ್ನು ಕಡಿಮೆ ಮಾಡಬಹುದು.

2 ಬತ್ತಿಹೋದ ಬಾವಿಗಳು, ಕೊಳವೆ ಬಾವಿಗಳನ್ನು ಕಡಿಮೆ ವೆಚ್ಚದಲ್ಲಿ ಮರುಬಳಕೆ ಮಾಡಬಹುದು.

3 ಬರಗಾಲದ ಪರಿಣಾಮವನ್ನು ಕಡಿಮೆ ಮಾಡಬಹುದು.

4 ರೈತರ ಆರ್ಥಿಕ ಸ್ಥಿತಿಯೂ ಸುಧಾರಿಸಬಹುದು.

ಪರ್ಕೋಲೇಷನ್ ಎಂದರೆ ಜಲ ಸಂಪನ್ಮೂಲಗಳನ್ನು ಪುನಃ ತುಂಬಿಸುವ ಒಂದು ಪ್ರಕ್ರಿಯೆಯಾಗಿದೆ, ಅನೇಕ ದೇಶಗಳು ನೀರಿನ ಕೊರತೆಯನ್ನು ನಿರ್ವಹಿಸಲು ನೈಸರ್ಗಿಕ ನೀರು ಸಂಗ್ರಹ ರಚನೆಗಳು ಮತ್ತು ಘಟಕಗಳು ಮಹತ್ವದ ಸಂಪನ್ಮೂಲವೆಂದು ಪರಿಗಣಿಸಿವೆ.

ತಡೆ ಅಣೆಕಟ್ಟು: -

ತಡೆ ಅಣೆಕಟ್ಟು: -

ತಡೆ ಅಣೆಕಟ್ಟು ಒಂದು ಸಣ್ಣ ತಾತ್ಕಾಲಿಕ ಅಥವಾ ಶಾಶ್ವತ ತಡೆ ಗೋಡೆಯಾಗಿದ್ದು, ಇದನ್ನು ಹಳ್ಳ, ರಸ್ತೆ, ಕಾಲುವೆ, ಸಣ್ಣ ನದಿಯ ಸುತ್ತಲೂ ನಿರ್ಮಿಸಲಾಗುತ್ತದೆ, ಇದನ್ನು ನೀರನ್ನು ಸಂಗ್ರಹಿಸಲು ಮತ್ತು ಪ್ರವಾಹದ ನೀರಿನ ಹರಿವನ್ನು ನಿಯಂತ್ರಿಸಲು ಬಳಸಲಾಗುತ್ತದೆ. ಮರ, ಕಲ್ಲು, ಸಣ್ಣ ಜಲ್ಲಿಕಲ್ಲು ಮತ್ತು ಮಣ್ಣು ತುಂಬಿದ ಚೀಲಗಳು ಅಥವಾ ಇಟ್ಟಿಗೆ ಮತ್ತು ಸಿಮೆಂಟ್ ನ ಸಂಯೋಜನೆಯನ್ನು ತಡೆ ಅಣೆಕಟ್ಟಿನ ನಿರ್ಮಾಣಕ್ಕೆ ಭಾರತದಲ್ಲಿ ವ್ಯಾಪಕವಾಗಿ ಬಳಸಲಾಗುತ್ತಿದೆ. ಈ ರಚನೆಗಳು ಕಡಿಮೆ ವೆಚ್ಚದಾಗಿರುತ್ತವೆ ಮತ್ತು 2-5 ವರ್ಷಗಳವರೆಗೆ ಇರುತ್ತದೆ.

undefined
undefined

ತಡೆ ಅಣೆಕಟ್ಟುಗಳ ಪ್ರಯೋಜನಗಳು: -

ತಡೆ ಅಣೆಕಟ್ಟುಗಳ ಪ್ರಯೋಜನಗಳು: -

  1. ಒಂದು ತಡೆ ಅಣೆಕಟ್ಟಿನ ಬೆಲೆ ಅದರ ಗಾತ್ರ ಹಾಗು ಎತ್ತರವನ್ನು ಅವಲಂಬಿಸಿ ಸುಮಾರು 7,000 ರಿಂದ 70,000 ರೂಪಾಯಿಗಳವರೆಗೆ ಇರುತ್ತದೆ.

  2. ತಡೆ ಅಣೆಕಟ್ಟುಗಳು ನೀರಿನ ಹರಿವನ್ನು ಕಡಿಮೆ ಮಾಡುತ್ತದೆ ಮತ್ತು ಮಣ್ಣಿನ ಸವೆತವನ್ನು ಕಡಿತ ಗೊಳ್ಳಿಸುತ್ತದೆ.

  3. ಸಣ್ಣ ಮತ್ತು ಕಡಿಮೆ ಆಳವಾದ ಬಾವಿಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗುತ್ತದೆ.

  4. ನೀರಿನಲ್ಲಿನ ಉಪ್ಪಿನಂಶವನ್ನು ತಡೆ ಅಣೆಕಟ್ಟುಗಳಲ್ಲಿ ಶೇಖರಿಸಿದ ಮಳೆನೀರಿನಿಂದ ಕಡಿಮೆ ಮಾಡಬಹುದು.

ಚಾವಣಿ ವಿಧಾನ: -

ಚಾವಣಿ ವಿಧಾನ: -

ಮನೆಗಳು ಮತ್ತು ಇತರ ಕಟ್ಟಡಗಳಿಂದ ಒಗ್ಗೂಡಿಸಿದ ಮಳೆನೀರು ಒಣಗಿದ ಬಾವಿಗಳು ಮತ್ತು ಕೊಳವೆ ಬಾವಿಗಳಿಗೆ ಹರಿಯುವುದರ ಜೊತೆಗೆ, ಹೆಚ್ಚುವರಿ ನೀರನ್ನು ಕೊಳಗಳು ಮತ್ತು ನದಿಗಳಿಗೆ ಸರಿಯಾದ ಪೈಪ್ ಗಳ ವ್ಯವಸ್ಥೆಯನ್ನು ಬಳಸಿ ಸಾಗಿಸಬಹುದು.

ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಚಾವಣಿ ವಿಧಾನವನ್ನು ಬಳಸಬಹುದು, ಇದರಲ್ಲಿ ಕಟ್ಟಡಗಳು ಮತ್ತು ಮನೆಗಳ ಚಾವಣಿ ಮೇಲೆ ಬೀಳುವ ಮಳೆನೀರನ್ನು ಕಟ್ಟಡದ ಕೆಳಗಿರುವ ಅಂಡರ್ಗ್ರೌಂಡ್ ಟ್ಯಾಂಕ್‌ಗೆ ಅಥವಾ ಕಟ್ಟಡದ ಹತ್ತಿರದಲ್ಲಿ ನಿರ್ಮಿಸಿದ ಟ್ಯಾಂಕ್‌ಗೆ ಹರಿಯುವಂತೆ ಮಾಡಬಹುದು. ಟ್ಯಾಂಕ್ ಗಾತ್ರವನ್ನು ಆಧರಿಸಿ ಇದರ ನಿರ್ಮಾಣಕ್ಕೆ 10 ರಿಂದ 18 ಸಾವಿರ ವೆಚ್ಚವಾಗಬಹುದು. ಇದು ಬಹಳ ಕಡಿಮೆ-ವೆಚ್ಚದ ವಿಧಾನವಾಗಿದ್ದು, ಸಂಗ್ರಹಿಸಿದ ನೀರನ್ನು ದೈನಂದಿನ ಮನೆಯ ಬಳಕೆಗಾಗಿ ಮತ್ತು ಕೃಷಿ ಕೆಲಸಗಳಿಗೆ ಬಳಸಬಹುದು.

undefined
undefined

ಈ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು, ಲೇಖನವನ್ನು ಇಷ್ಟಪಡಲು ನೀವು ♡ ಐಕಾನ್ ಕ್ಲಿಕ್ ಮಾಡಿದ್ದೀರಿ ಮತ್ತು ಲೇಖನವನ್ನು ಈಗ ನಿಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಹಂಚಿಕೊಳ್ಳುತ್ತೇವೆ ಎಂದು ನಾವು ಭಾವಿಸುತ್ತೇವೆ!

ನಮ್ಮ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿ

ಫಾರ್ಮ್ ಆನ್-ದಿ-ಗೋ: ನಮ್ಮ ಆ್ಯಪ್ ನಲ್ಲಿ ಯಾವುದೇ ಸಮಯದಲ್ಲಿ, ಎಲ್ಲಿಂದಲಾದರೂ ಮಾರುಕಟ್ಟೆಯ ದಿನನಿತ್ಯದ ಮಾಹಿತಿಯನ್ನು ಪಡೆಯಿರಿ. ಇದು ನಿಮ್ಮ ಭಾಷೆಯಲ್ಲಿಯೂ ಲಭ್ಯವಿದೆ.

google play button