ಹಿಂದೆ
ತಜ್ಞರ ಲೇಖನಗಳು
ಭತ್ತದಲ್ಲಿ ದುಂಡಾಣು ಮಚ್ಚೆ ರೋಗಗಳನ್ನು ನಿಯಂತ್ರಿಸುವುದು ಹೇಗೆ?

ದುಂಡಾಣು ಮಚ್ಚೆ ರೋಗ (BLB)

ದುಂಡಾಣು ಮಚ್ಚೆ ರೋಗ (BLB)

ಈ ದುಂಡಾಣು ಮಚ್ಚೆ ರೋಗವು ಭತ್ತದ ಅತ್ಯಂತ ಗಂಭೀರ ರೋಗಗಳಲ್ಲಿ ಒಂದಾಗಿದೆ. ರೋಗದ ತೀವ್ರತೆ ಮತ್ತು ತಳಿಯ ರೋಗನಿರೋಧಕ ಶಕ್ತಿಯನ್ನು ಅವಲಂಬಿಸಿ ಮಾಚ್ಚೆ ರೋಗದಿಂದ 6-60% ಇಳುವರಿ ನಷ್ಟ ಆಗಬೋಹುದು. ಇಳುವರಿಯ ನಷ್ಟಕ್ಕೆ ಕಾರಣ ವೆಂದರೆ ಜೊಳ್ಳು ಭತ್ತದ ಪ್ರಮಾಣ ಹೆಚ್ಚುವುದು, ಧಾನ್ಯದ ತೂಕ ಹಾಗು ತೆನೆಗಳ ಸಂಖ್ಯೆಯಲ್ಲಿ ಇಳಿಕೆ ಮತ್ತು ತೆನೆಬಿಡುವ ಹಂತದಲ್ಲಿ ಗಿಡದ ಬೆಳವಣಿಗೆ ಮೇಲೆ ಕೊಳೆರೋಗದಿಂದಾಗುವ ಗಂಭೀರ ಹನಿ.

ಈ ರೋಗವು ಪೈರು ಮತ್ತು ತೆನೆ ಬಿಡುವ ಹಂತದಲ್ಲಿ ಸಂಭವಿಸಬಹುದು

undefined

ರೋಗ ಹರಡಲು ಅನುಕೂಲವಾಗುವ ಪರಿಸ್ಥಿತಿಗಳು

ರೋಗ ಹರಡಲು ಅನುಕೂಲವಾಗುವ ಪರಿಸ್ಥಿತಿಗಳು

➥ ಹೆಚ್ಚಿನ ಆರ್ದ್ರತೆ (>90%) ಮತ್ತು ಸಾಧಾರಣ ತಾಪಮಾನವು (26-30°C) ರೋಗದ ಬೆಳವಣಿಗೆಗೆ ಅನುಕೂಲಕರವಾಗಿದೆ.

➥ ಭಾರೀ ಮಳೆ, ಮತ್ತು ಚಂಡಮಾರುತದಿಂದ ವುಂಟಾಗುವ ಕಡಿಮೆ ತೀವ್ರತೆಯಲ್ಲಿ ಮತ್ತೆ ಮತ್ತೆ ಬರುವ ತುಂತುರು ಮಳೆಗಳು ರೋಗದ ಉಲ್ಬಣಕ್ಕೆ ಅನುಕೂಲಕರವಾಗಿವೆ.

➥ ರೋಗವು ನೀರಾವರಿಗೆ ಬಳಸುವ ನೀರಿನ ಮೂಲಕ ಹರಡುತ್ತದೆ.

➥ ಹೆಚ್ಚಿನ ಪ್ರಮಾಣದ ಸಾರಜನಕ ಗೊಬ್ಬರ ಹಾಕುವುದು, ಮತ್ತು ಕಡಿಮೆ ಅಂತರದಲ್ಲಿ ಸಸಿ ನಾಟಿ ಮಾಡುವುದು ರೋಗ ಉದ್ಭವ ವಾಗಲು ಬೆಂಬಲವಾಗುತ್ತದೆ.

➥ ಜಮೀನಿನಲ್ಲಿರುವ ಕಳೆಗಳ ಹಾಗು ಸೋಂಕಿತ ಹುಲ್ಲಿನ ಮೊಂಡುಗಳು ಸೋಂಕಿನ ಮೂಲವಾಗಿದ್ದು ನಂತರ ಹೊಸ ಬೆಳೆಗೆ ಹರಡುತ್ತದೆ.

ರೋಗದ ಲಕ್ಷಣಗಳು

ರೋಗದ ಲಕ್ಷಣಗಳು

ಬ್ಯಾಕ್ಟೀರಿಯವು ಸಸ್ಯಗಳ ಬಾಡುವಿಕೆ ಅಥವಾ ಎಲೆ ಕೊಳೆರೋಗವನ್ನು ಪ್ರೇರೇಪಿಸುತ್ತದೆ.

ಸಸಿ ಬಾಡುವಿಕೆ

ಸಸಿ ಬಾಡುವಿಕೆ

➥ ‘ಕ್ರೆಸೆಕ್’ ಎಂದು ಕರೆಯಲ್ಪಡುವ ಗಿಡ ಬಾಡಿವಂತಹ ರೋಗಲಕ್ಷಣವು ಸಂಭವಿಸುತ್ತದೆ ಮತ್ತು ಗಂಭೀರ ಹಾನಿಯನ್ನು ಉಂಟುಮಾಡುತ್ತದೆ. ಇದು ಸಾಮಾನ್ಯವಾಗಿ ಭತ್ತದ ಸಸಿ ನಾಟಿ ಮಾಡಿದ 3-4 ವಾರಗಳಲ್ಲಿ ಸಂಭವಿಸುತ್ತದೆ.

➥ ಸೋಂಕು ಇಡೀ ಸಸ್ಯಗಳ ಸಾವಿಗೆ ಅಥವಾ ಕೆಲವು ಎಲೆಗಳು ಬಾಡಲು ಕಾರಣವಾಗುತ್ತದೆ

undefined
undefined

ದುಂಡಾಣು ಮಚ್ಚೆ ರೋಗ

➥ ಎಲೆಯ ಮೇಲೆ ಹಳದಿ ಕಿತ್ತಳೆ ಬಣ್ಣದ ಪಟ್ಟೆಗಳು ಕಾಣಿಸಿಕೊಳ್ಳುತ್ತವೆ. ಈ ಕಲೆಗಳ ಸುತ್ತಲೂ ಅಲೆಯಾಕಾರದ ಅಂಚುಗಳು ಹೊಂದಿರುತ್ತವೆ ಮತ್ತು ಅವು ಎಲೆಯ ಕೆಳ ಭಾಗದ ಕಡೆಗೆ ಹರಡುತ್ತದೆ.

➥ ಕಲೆಗಳು ಇಡೀ ಎಲೆಗೂ ಹರಡಿ ಬಿಳಿ ಬಣ್ಣವಾಗುತ್ತದೆ ಮತ್ತು ನಂತರ ಬೂದು ಬಣ್ಣಕ್ಕೆ ತಿರುಗುತ್ತದೆ.

➥ ಬ್ಯಾಕ್ಟೀರಿಯಾದಿಂದ ಉದ್ಭವವಾದ ಬಿಳಿ ಇಬ್ಬನಿಯಂತಹ ಹನಿಯು ಮುಂಜಾನೆಯ ಸಮಯದಲ್ಲಿ ಸಣ್ಣಗಿನ ಹೊಸ ಕಲೆಗಳ ಮೇಲೆ ಕಂಡುಬರುತ್ತವೆ.

undefined
undefined
undefined
undefined

ಮಚ್ಚೆ ರೋಗವು ಇತರೆ ರೋಗ ಗಳಿಗಿಂತ ಹೇಗೆ ಭಿನ್ನವಾಗಿದೆ

ಮಚ್ಚೆ ರೋಗವು ಇತರೆ ರೋಗ ಗಳಿಗಿಂತ ಹೇಗೆ ಭಿನ್ನವಾಗಿದೆ

undefined
undefined

ಹೊಸದಾಗಿ ಸೋಂಕಿತವಾದ ಎಲೆಯನ್ನು ಅಡ್ಡಲಾಗಿ ಕತ್ತರಿಸಿ ಮತ್ತು ಶುದ್ಧ ನೀರನ್ನು ತುಂಬಿದ ಒಂದು ಪಾರದರ್ಶಕ ಗಾಜಿನ ಪಾತ್ರೆಯಲ್ಲಿ ಇರಿಸಿ, ಕೆಲವು ನಿಮಿಷಗಳ ನಂತರ, ಈ ಪಾತ್ರೆಯನ್ನು ಬೆಳಕಿನ ವಿರುದ್ಧ ಹಿಡಿದುಕೊಳ್ಳಿ ಮತ್ತು ಎಲೆಯ ಕತ್ತರಿಸಿದ ತುದಿಯಿಂದ ದಪ್ಪಗಿನ ಗೆರೆ ಆಕಾರದಲ್ಲಿ ದ್ರವವು ಬರುವುದನ್ನು ಗಮನಿಸಬಹುದು, ಇದನ್ನು ಬ್ಯಾಕ್ಟೀರಿಯಾ ಓಜ್ ಎಂದು ಕರೆಯಲಾಗುತ್ತದೆ. ಶಿಲೀಂಧ್ರ ರೋಗಗಳು ಮತ್ತು ಪೌಷ್ಟಿಕಾಂಶದ ಕೊರತೆಯಿಂದಾದ ರೋಗಲಕ್ಷಣಗಳಲ್ಲಿ ಈ ರೀತಿ ಆಗುವುದಿಲ್ಲ.

ಶಿಫಾರಸುಗಳು

ಶಿಫಾರಸುಗಳು

➥ ಅರೈಜ್ ಬ್ರಾಂಡ್ ನ ರೋಗನಿರೋಧಕ ಶಕ್ತಿಯುಳ್ಳ ರೈಸ್ ಹೈಬ್ರಿಡ್ ಗಳನ್ನು ಬಳಸಿ. ಅರೈಜ್ 6129 ಗೋಲ್ಡ್ (115-120 ದಿನಗಳು), ಅರೈಜ್ ತೇಜ್ ಗೋಲ್ಡ್ (121-130 ದಿನಗಳು) , ಅರೈಜ್ 6444 ಗೋಲ್ಡ್ ಮತ್ತು AZ 8433DT (131-140 ದಿನಗಳು), AZ ಧನಿ DT (141-145 ದಿನಗಳು) ಮಚ್ಚೆ ರೋಗದಿಂದ ಉಂಟಾಗುವ ನಷ್ಟವನ್ನು ಕಡಿಮೆ ಮಾಡಲು ಬೆಳೆಸಬಹುದು.

undefined
undefined

➥ ಹೆಚ್ಚು ಸಾರಜನಕ ರಸಗೊಬ್ಬರ ಬಳಕೆಯನ್ನು ನಿಲ್ಲಿಸಿ ಮತ್ತು ಒಂದೇ ಸರಿ ಎಲ್ಲಾ ರಸಗೊಬ್ಬರವನ್ನು ಹಾಕುವಬದಲಾಗಿ ಬೆಳೆಯ ಕಾಲಚಕ್ರದುದ್ದಕೂ ವಿಭಜಿತಗೊಳಿಸಿದ ಸಣ್ಣ ಪ್ರಮಾಣದಲ್ಲಿ ನೀಡಿರಿ.

➥ ರೋಗ ಬೆಳವಣಿಗೆಗೆ ಹವಾಮಾನ ಪೂರಕವಾಗಿದ್ದಲ್ಲಿ ಪೊಟ್ಯಾಶ್ ರಸಗೊಬ್ಬರವನ್ನು ಹೆಚ್ಚಿನ ಪ್ರಮಾಣದಲ್ಲಿ ಮತ್ತು ಸಾರಜನಕ ರಸಗೊಬ್ಬರವನ್ನು ಕಡಿಮೆ ಪ್ರಮಾಣದಲ್ಲಿ ನೀಡಿರಿ.

➥ ಹೊಲವನ್ನು ಸ್ವಚ್ಛವಾಗಿಡಿ. ಅಂಚುಗಳು ಮತ್ತು ನೀರಿನ ಕಾಲುವೆಗಳಿಂದ ಕಳೆಗಳನ್ನು ತೆಗೆದುಹಾಕಿ.

➥ ರೋಗ ಹರಡಲು ಕಾರಣವಾಗುವ ಮಣ್ಣು ಮತ್ತು ಸಸ್ಯಗಳ ಮೊಂಡುಗಳನ್ನು ನಿಗ್ರಹಿಸುಲು ನಟಿಯಮುನ್ನ ಹಲವಾರು ದಿನಗಳಕಾಲ ಚನ್ನಾಗಿ ಬಿಸಿಲಿಗೆ ಒಣಗಲು ಬಿಡಬೇಕು.

➥ ತಾಮ್ರದ ಅಂಶವಿರುವ ರಾಸಾಯನಿಕಗಳು ಮತ್ತು ಪ್ರತಿಜೀವಕಗಳನ್ನು ಸಿಂಪಡಿಸಿ. ಕಾಪರ್ ಆಕ್ಸಿಕ್ಲೋರೈಡ್ (ಸಿಒಸಿ) ಮತ್ತು ಸ್ಟ್ರೆಪ್ಟೋಸೈಕ್ಲಿನ್ ನ ಮಿಶ್ರವನ್ನು ಸಿಂಪಡಿಸುವುದು ಉತ್ತಮ ನಿಯಂತ್ರಣ ಒದಗಿಸುತ್ತದೆ. ಇದು ಸೋಂಕು ಹರಡುವುದನ್ನು ತಪ್ಪಿಸಲು ಸಹಾಯ ಮಾಡುತ್ತದೆ.

undefined
undefined

ಈ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು, ಲೇಖನವನ್ನು ಇಷ್ಟಪಡಲು ನೀವು ♡ ಐಕಾನ್ ಕ್ಲಿಕ್ ಮಾಡಿದ್ದೀರಿ ಮತ್ತು ಲೇಖನವನ್ನು ಈಗ ನಿಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಹಂಚಿಕೊಳ್ಳುತ್ತೇವೆ ಎಂದು ನಾವು ಭಾವಿಸುತ್ತೇವೆ!

ಈ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು, ಲೇಖನವನ್ನು ಇಷ್ಟಪಡಲು ನೀವು ♡ ಐಕಾನ್ ಕ್ಲಿಕ್ ಮಾಡಿದ್ದೀರಿ ಮತ್ತು ಲೇಖನವನ್ನು ಈಗ ನಿಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಹಂಚಿಕೊಳ್ಳುತ್ತೇವೆ ಎಂದು ನಾವು ಭಾವಿಸುತ್ತೇವೆ!

ನಮ್ಮ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿ

ಫಾರ್ಮ್ ಆನ್-ದಿ-ಗೋ: ನಮ್ಮ ಆ್ಯಪ್ ನಲ್ಲಿ ಯಾವುದೇ ಸಮಯದಲ್ಲಿ, ಎಲ್ಲಿಂದಲಾದರೂ ಮಾರುಕಟ್ಟೆಯ ದಿನನಿತ್ಯದ ಮಾಹಿತಿಯನ್ನು ಪಡೆಯಿರಿ. ಇದು ನಿಮ್ಮ ಭಾಷೆಯಲ್ಲಿಯೂ ಲಭ್ಯವಿದೆ.

google play button