ಹಿಂದೆ
ತಜ್ಞರ ಲೇಖನಗಳು
ಉತ್ತರ ಭಾರತದಲ್ಲಿ ಗೋದಿಯ ಹೊಲದಲ್ಲೆ ಬೀಜ ಚಿಕಿತ್ಸೆಯ ಯಾಂತ್ರಿಕತೆ

ಮಾನವ ಆಹಾರ ಪದ್ದತಿಯ ಮುಖ್ಯವಾದ ನಾರು ಆಹಾರಗಳಲ್ಲಿ ಒಂದೆಂದರೆ ಅದು ಗೋಧಿ ಮತ್ತು ಅದನ್ನು ಸರಿಸುಮಾರು ಪ್ರಪಂಚದ ಎಲ್ಲಾ ಉಷ್ಣ ಮತ್ತು ಉಪೋಷ್ಣವಲಯಗಳಲ್ಲಿ ಬೆಳೆಯಲಾಗುತ್ತದೆ. ಉತ್ತರ ಭಾರತವು ಗೋಧಿ ಬೆಳೆಯುವ ಭಾರತದ ಪ್ರದೇಶಗಳಲ್ಲಿ ಅತಿ ಮುಖ್ಯವಾದುದು. ರೈತರು ಬೀಜಕ್ಕೆ-ಉದ್ಭವಿಸುವ ರೋಗಗಳಿಂದ ಮತ್ತು ಶೀಘ್ರ ಇಳುವರಿಯ ನಷ್ಟದಂತಹ ಸಮಸ್ಯೆಗಳನ್ನು ಎದುರಿಸುತ್ತಾರೆ ಮತ್ತು ಕಾಲಕ್ಕೆ ಮುಂಚೆ ಬಂದಂತಹ ಕೀಟಗಳ ಪ್ರಸಂಗಗಳು ಗೋಧಿ ಬೆಳೆಯ ಉತ್ಪಾದಕತೆ ಮತ್ತು ಬೆಳವಣಿಗೆಯ ಮೇಲೆ ಭಾರಿ ಪ್ರಭಾವ ಬೀರಿದಂತೆ ಕಾಣುತ್ತದೆ. ಬೀಜದಲ್ಲಿ ಉದ್ಭವಿಸುವ ರೋಗಕಾರಕಗಳು ಬೀಜಗಳೊಂದಿಗೆ ಬಾಹ್ಯವಾಗಿ ಅಥವಾ ಆಂತರಿಕವಾಗಿ ವಿಷಪೂರಿತ ಮಾಡುತ್ತವೆ ಮತ್ತು ಹಲವು ಬಗೆಯ ರೋಗಗಳಿಗೆ ಕಾರಣವಾಗುತ್ತವೆ.

ಬೀಜಗಳ ಚಿಕಿತ್ಸೆಯ ಲಾಭಗಳು

ಬೀಜಗಳ ಚಿಕಿತ್ಸೆಯ ಲಾಭಗಳು

undefined

ಬೀಜಗಳ ಚಿಕಿತ್ಸೆಯು ಬೆಳೆಯ ರಕ್ಷಣೆಗಾಗಿ ಅತ್ಯಂತ ನಿಗದಿತವಾದ, ಪರಿಣಾಮಕಾರಿಯಾದ, ಪ್ರಾಯೋಗಿಕವಾದ, ಅಗ್ಗದ ಮತ್ತು ಪರಿಸರ ಸ್ನೇಹಿ ಮಾರ್ಗಗಳನ್ನು ಒದಗಿಸುತ್ತದೆ. ಅದು ಬಿತ್ತನೆಯ ಸಮಯದಿಂದ ಬೆಳೆಯನ್ನು ರಕ್ಷಿಸುತ್ತದೆ ಹಾಗೂ ಬಹುಮುಖ್ಯವಾದ ಬೀಜಾಂಕುರದ ಮತ್ತು ಆರಂಭದ ಬೆಳವಣಿಗೆ ಹಂತದ ಮೂಲಕ ಅದನ್ನು ರಕ್ಷಣೆಯಲ್ಲೆ ಇರಿಸುತ್ತದೆ. ಸಕ್ರಿಯವಾದ ಪದಾರ್ಥವು ಪ್ರತಿ ಬೀಜದ ಮೇಲ್ಮೈಯನ್ನು ಮುಚ್ಚುತ್ತದೆ, ಹಾಗಾಗಿ ಅದು ಎಲ್ಲಿ ಅಗತ್ಯವೋ ಅಲ್ಲಿ ಯಾವಾಗಲು ಇರುತ್ತದೆ.

ಬೀಜಗಳ ಚಿಕಿತ್ಸೆಯಲ್ಲಿನ ಸವಾಲುಗಳು

ಬೀಜಗಳ ಚಿಕಿತ್ಸೆಯಲ್ಲಿನ ಸವಾಲುಗಳು

ಸಮರೂಪದ ಬೀಜಗಳ ಚಿಕಿತ್ಸೆಯು ಬೀಜ ಚಿಕಿತ್ಸೆ ಉತ್ಪನ್ನದ ಉದ್ದೇಶಿತ ಪರಿಣಾಮಕಾರಿತ್ವವನ್ನು ಖಾತರಿಪಡಿಸುತ್ತದೆ. ರೈತರು ಅಸಮಾನ ಬೀಜ ಚಿಕಿತ್ಸೆ, ನೌಕರ ದುಬಾರಿ ವೆಚ್ಚಗಳು, ನೌಕರರ ಕೊರತೆ ಹಾಗೂ ತಾವಾಗಿಯೇ ಮಾಡುವ ಬೀಜ ಚಿಕಿತ್ಸೆಯ ಅನಾನುಕೂಲತೆಗಳಂತಹ ಸವಾಲುಗಳನ್ನು ಎದುರಿಸುತ್ತಾರೆ. ತಾವಾಗಿಯೇ ಮಾಡುವ ಬೀಜ ಚಿಕಿತ್ಸೆಯ ಮೂಲಕ, ರೈತರು ಬೀಜ ಚಿಕಿತ್ಸೆ ಉತ್ಪನ್ನಗಳ ಸಂಪೂರ್ಣ ಸಾಮರ್ಥ್ಯವನ್ನು ಮನಗಾಣಲು ಸಾಧ್ಯವಾಗುತ್ತಿಲ್ಲ ಏಕೆಂದರೆ ಬೀಜಗಳ ಮೇಲೆ ಉತ್ಪನ್ನಗಳ ಅಸಮರ್ಪಕ ಕೋಟಿಂಗ್ ಇದಕ್ಕೆ ಕಾರಣ.

ಬೇಯರ್ ಏನು ಮಾಡುತ್ತಿದ್ದಾನೆ?

ಬೇಯರ್ ಏನು ಮಾಡುತ್ತಿದ್ದಾನೆ?

ಬೇಯರ್ ಬೀಜ ಬೆಳವಣಿಗೆಯು ಮಾತ್ರವೇ ಬೀಜಗಳ-ಮೇಲೆ ಅನ್ವಯಿಕೆಯ ಉತ್ಪನ್ನಗಳನ್ನು, ಸೇವೆಗಳನ್ನು, ಕೋಟಿಂಗ್ ಗಳನ್ನು ಮತ್ತು ಉಪಕರಣಗಳನ್ನು ಹೊಂದಿರುವ “ಏಕಮಾತ್ರ” ಸಂಪೂರ್ಣವಾಗಿ ಅಂತರ್ಗತ ವ್ಯವಸ್ಥೆಯಾಗಿದೆ. ಬೇಯರ್ ಕ್ರಾಪ್ ಸೈನ್ಸ್ ಇಂಡಿಯಾ ಬೀಜ ಚಿಕಿತ್ಸೆ ಪೋರ್ಟ್ ಫೋಲಿಯೊ ಒದಗಿಸುತ್ತದೆ ಅದರ ಜೊತೆಯಲ್ಲಿ ಪಂಜಾಬ್, ಹರಿಯಾಣ ಮತ್ತು ರಾಜಸ್ಥಾನದಂತಹ ರಾಜ್ಯಗಳಲ್ಲಿ ಗೋಧಿ ಬೆಳೆಗಾರರಿಗೆ ಯಾಂತ್ರಿಕ ಬೀಜ ಚಿಕಿತ್ಸೆಗಳ ಸೇವೆಯನ್ನು ಒದಗಿಸುತ್ತದೆ.

ಐದು ವರ್ಷಗಳ ಹಿಂದೆ, ಬೇಯರ್ ಕಂಪನಿಯು CF35 ಅನ್ನು - ಎಂದರೆ ಬೆಯರ್ ಕ್ರಾಪ್ ಸೈನ್ಸ್ ಯುಎಸ್ಎ ಕಂಪನಿಯ ಸ್ವಯಂಚಾಲಿತ ಬೀಜ ಚಿಕಿತ್ಸೆ ಯಂತ್ರಗಳನ್ನು ಆಮದು ಮಾಡುವ ಮೂಲಕ ಈ ರಾಜ್ಯಗಳಲ್ಲಿ ಬೀಜ ಚಿಕಿತ್ಸೆ ಯಾಂತ್ರಿಕತೆ ಕಾರ್ಯಕ್ರಮವನ್ನು ಆರಂಭಿಸಿತು ಮತ್ತು ಸ್ಥಳೀಯವಾಗಿ ಬೀಜ ಚಿಕಿತ್ಸೆ ಯಂತ್ರಗಳನ್ನು ಖರೀದಿಸಿತು, ಹಾಗಾಗಿ ಗೋಧಿ ರೈತರು ತಮ್ಮ ಬೀಜಗಳನ್ನು ಒಂದು ಸಾಬೀತಾದ ಫಂಗಿಸೈಡ್ - ರಾಕ್ಸಿಲ್ ಈಜಿ ನೊಂದಿಗೆ ಚಿಕಿತ್ಸೆ ಮಾಡಲು ಸಮರ್ಥರನ್ನಾಗಿಸಲು ಶ್ರಮಿಸಿತು.

ರೈತರು ಏನನ್ನು ಪಡೆಯುತ್ತಾರೆ?

ರೈತರು ಏನನ್ನು ಪಡೆಯುತ್ತಾರೆ?

ರೈತರು ಗೋಧಿ ಬೀಜಗಳ ಪರಿಣಾಮಕಾರಿ ಚಿಕಿತ್ಸೆಯಂತಹ, ನೌಕರರ ಕೊರತೆಯನ್ನು ನೀಗಿಸುವಂತಹ, ಕಾರ್ಯನಿರ್ವಹಣೆಯ ಅನುಕೂಲತೆ ಮತ್ತು ಮೌಲ್ಯಯುತ ಸಮಯವನ್ನು ಕಾಪಾಡುವಂತಹ ಲಾಭಗಳನ್ನು ಪಡೆಯುತ್ತಿದ್ದಾರೆ. CF35 ಯಂತ್ರಗಳು ಹೊಲದಲ್ಲಿ ಉಳಿಸಿದ ಬೀಜಗಳನ್ನು ಬಿತ್ತನೆ ಮಾಡುವ ರೈತರಿಗೆ ವರದಂತೆ ಸಾಬೀತಾಗಿವೆ ಏಕೆಂದರೆ ಯಂತ್ರವು ಹಳ್ಳಿಗಳಲ್ಲಿಯೂ ಲಭ್ಯವಿವೆ.

ಬೀಜ ಚಿಕಿತ್ಸೆ ಪರಿಕಲ್ಪನೆ ಮತ್ತು ಬೀಜ ಚಿಕಿತ್ಸೆ ಯಾಂತ್ರಿಕತೆಯ ಪ್ರಚಾರ?

ಬೀಜ ಚಿಕಿತ್ಸೆ ಪರಿಕಲ್ಪನೆ ಮತ್ತು ಬೀಜ ಚಿಕಿತ್ಸೆ ಯಾಂತ್ರಿಕತೆಯ ಪ್ರಚಾರ?

undefined

ಬೀಜ ಚಿಕಿತ್ಸೆ ಪ್ರದರ್ಶನಗಳ ಕಾರ್ಯಕ್ರಮಗಳನ್ನು ಮತ್ತು ರೈತರ ಸಭೆಗಳನ್ನು ಹಳ್ಳಿಗಳಲ್ಲಿ, ಕೃಷಿ ಉತ್ಪನ್ನ ಮಾರುಕಟ್ಟೆ ಅಂಗಳಲ್ಲಿ ಮತ್ತು ಮಾರುಕಟ್ಟೆ ಸ್ಥಳದಲ್ಲಿ ಆಯೋಜಿಸಿ ಯಾಂತ್ರಿಕ ಬೀಜ ಚಿಕಿತ್ಸೆಯ ಬಗ್ಗೆ ಜಾಗೃತಿಯನ್ನು ಸೃಷ್ಟಿಸಲಾಗುತ್ತಿದೆ. ಈ ಕಾರ್ಯಕ್ರಮಗಳಲ್ಲಿ, ರೈತರು CF35 ನ ಕಾರ್ಯವೈಖರಿ - ಸುಲಲಿತತೆ, ವೇಗ ಮತ್ತು ಚಿಕಿತ್ಸೆಯ ಗುಣಮಟ್ಟವನ್ನು ಕಣ್ಣಾರೆ ನೋಡಿದರು.

ಅಂತೆಯೇ ಸರ್ಕಾರಿ ಬೀಜ ಚಿಕಿತ್ಸೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು ಮತ್ತು ರೈತರಿಗೆ ಬೀಜ ಚಿಕಿತ್ಸೆಗಳ ಬಗ್ಗೆ ಜಾಗೃತಿಯನ್ನು ಸೃಷ್ಠಿಸಲು ಯಾಂತ್ರಿಕ ಬೀಜ ಚಿಕಿತ್ಸೆಯ ಲಾಭಗಲನ್ನು ತೋರಿಸಿದರು.

2018ರ ಮಳೆಗಾಲದಲ್ಲಿ, ಪಂಜಾಬ್, ಹರಿಯಾಣ ಮತ್ತು ರಾಜಸ್ಥಾನದಲ್ಲಿನ ಗೋಧಿ ಬೆಳೆಗಾರರು CF35 ಯಂತ್ರಗಳ ಸೇವೆಗಳಿಂದ ಲಾಭಗಳನ್ನು ಪಡೆದು 250,000 ಎಕರೆ ಭೂಮಿಗೆ ಬೀಜಗಳನ್ನು ಚಿಕಿತ್ಸೆ ಮಾಡಿದರು. ರೈತರು ಹಾಗೆಯೇ ಮೆಕ್ಕೆಜೋಳ, ಬತ್ತ ಮತ್ತು ಸೊರಗಮ್ ಬೆಳೆಗಳ ಬೀಜಗಳನ್ನು ಈ ಯಂತ್ರಗಳನ್ನು ಬಳಸಿ ಮುಂಗಾರಿನ ಕಾಲದಲ್ಲಿ ಬಿಕಿತ್ಸೆ ಮಾಡಿದರು.

ಬೀಜಗಳ ಚಿಕಿತ್ಸೆಯ ಲಾಭಗಳು

ಬೀಜಗಳ ಚಿಕಿತ್ಸೆಯ ಲಾಭಗಳು

ನಮ್ಮ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿ

ಫಾರ್ಮ್ ಆನ್-ದಿ-ಗೋ: ನಮ್ಮ ಆ್ಯಪ್ ನಲ್ಲಿ ಯಾವುದೇ ಸಮಯದಲ್ಲಿ, ಎಲ್ಲಿಂದಲಾದರೂ ಮಾರುಕಟ್ಟೆಯ ದಿನನಿತ್ಯದ ಮಾಹಿತಿಯನ್ನು ಪಡೆಯಿರಿ. ಇದು ನಿಮ್ಮ ಭಾಷೆಯಲ್ಲಿಯೂ ಲಭ್ಯವಿದೆ.

google play button