ಹಿಂದೆ
ತಜ್ಞರ ಲೇಖನಗಳು
ಬೇವು : ಬೇವಿನ ಬೀಜಗಳ ಸಾರದ ಬಳಕೆ, ಪ್ರಯೋಜನ ಮತ್ತು ಸಿದ್ಧತೆ

ಬೇವಿನ ಮರ ಭಾರತದಲ್ಲಿ ಹುಟ್ಟಿಕೊಂಡಿದೆ. ಬೇವನ್ನು ಕೃಷಿ ಕ್ಷೇತ್ರದಲ್ಲಿ ಅನೇಕ ರೀತಿಯಲ್ಲಿ ಬಳಸಲಾಗುತ್ತದೆ:

a. ಬೇವಿನ ಎಣ್ಣೆಯನ್ನು ಬೇವಿನ ಬೀಜಗಳಿಂದ ಹಿಂಡಿ ಸಾರ ತೆಗೆಯಲಾಗುತ್ತದೆ ಮತ್ತು ಅದು ಕೀಟನಾಶಕ ಮತ್ತು ಔಷಧೀಯ ಗುಣಗಳನ್ನು ಹೊಂದಿದ್ದು ಅದರಿಂದಾಗಿ ಅದನ್ನು ಅನೇಕ ಬೆಳೆಗಳಿಗೆ ಕೀಟ ನಿಯಂತ್ರಣಕ್ಕಾಗಿ ಬಳಸಲಾಗುತ್ತದೆ. ಬೇವಿನ ಎಣ್ಣೆ ಕೀಟಗಳ ವ್ಯವಸ್ಥೆಯಲ್ಲಿ ಪ್ರವೇಶಿಸುತ್ತದೆ ಮತ್ತು ಅವುಗಳು ಮಾಡುವ ಕೆಲಸವನ್ನು ತಡೆಗಟ್ಟುತ್ತದೆ. ಕೀಟಗಳು ತಿನ್ನುವುದಿಲ್ಲ, ಸಂಗಾತಿಯೊಂದಿಗೆ ಸಮಾಗಮ ಹೊಂದುವುದಿಲ್ಲ ಮತ್ತು ಮೊಟ್ಟೆ ಇಡುವುದಿಲ್ಲವಾದ್ದರಿಂದ ಅವುಗಳ ಜೀವನ ಚಕ್ರದಲ್ಲಿ ಏರುಪೇರಾಗುತ್ತದೆ.

undefined

b. ಬೇವಿನ ಬೀಜಗಳ ಹಿಂಡಿ (ಎಣ್ಣೆ ತೆಗೆದ ನಂತರ ಉಳಿಯುವ ಬೇವಿನ ಬೀಜಗಳ ತ್ಯಾಜ್ಯ) ಮಣ್ಣಿನ ಸುಧಾರಣೆಗೆ ಬಳಸಿದಾಗ ಅಥವಾ ಮಣ್ಣಿನಲ್ಲಿ ಬೆರೆಸಿದಾಗ, ಜೈವಿಕ ವಸ್ತುವಿನೊಂದಿಗೆ ಮಣ್ಣನ್ನು ಉತ್ಕೃಷ್ಟಗೊಳಿಸುವುದಷ್ಟೇ ಅಲ್ಲ ನೈಟ್ರೀಕರಣವನ್ನು ತಡೆಯುವ ಮೂಲಕ ಸಾರಜನಕದ ನಷ್ಟವನ್ನು ಕಡಿಮೆ ಮಾಡುತ್ತದೆ.

c. ಬೇವಿನ ಎಲೆಗಳನ್ನು ಹಸಿರು ಎಲೆಗೊಬ್ಬರವನ್ನಾಗಿ ಮತ್ತು ಗೊಬ್ಬರ ತಯಾರಿಸುವುದಕ್ಕೆ ಬಳಸಲಾಗುತ್ತದೆ. ಬೇವಿನ ಎಲೆಗಳನ್ನು ಧಾನ್ಯಗಳ ಸಂಗ್ರಹಣೆಗೂ ಸಹಿತ ಬಳಸಲಾಗುತ್ತದೆ. ಬೇವಿನ ಎಳೆ ಟೊಂಗೆಗಳನ್ನು ಕೊಳೆಸಿ ಹಸಿರು ಗೊಬ್ಬರವನ್ನಾಗಿ ಬಳಸಲಾಗುತ್ತದೆ ಮತ್ತು ಭೂಮಿಗಳಲ್ಲಿ ವ್ಯಾಪಕವಾಗಿ ಒಳಸೇರಿಸಲಾಗುತ್ತದೆ.

d. ಬೇವಿನ (ಎಲೆ ಮತ್ತು ಬೀಜ) ಸಾರಗಳು (ಹಿಂಡಿಗಳು) ಕೀಟನಾಶಕ ಗುಣಗಳನ್ನು ಹೊಂದಿರುವುದಾಗಿ ಕಂಡುಬಂದಿವೆ. ಇದನ್ನು ಭತ್ತದ ಕೃಷಿಯಲ್ಲಿ ಎಲೆಗಳಿಗೆ ಸಿಂಪಡಿಸಲು ಮತ್ತು ಬೀಜಗಳನ್ನು ಚಿಕಿತ್ಸೆಗೊಳಿಸಲು ಬಳಸಲಾಗುತ್ತದೆ.

e. ಬೇವಿನ ತೊಗಟೆ ಮತ್ತು ಬೇರುಗಳು ಸಹಿತ ಔಷಧೀಯ ಗುಣಗಳನ್ನು ಹೊಂದಿರುತ್ತವೆ. ತೊಗಟೆ ಮತ್ತು ಬೇರುಗಳನ್ನು ಪೌಡರ್ ರೂಪದಲ್ಲಿ ಸಹಿತ ಭತ್ತದ ಕೃಷಿಯಲ್ಲಿ ಚಿಗಟ ಮತ್ತು ಹೀರುವ ಕೀಟಗಳ ನಿಯಂತ್ರಣಕ್ಕಾಗಿ ಬಳಸಲಾಗುತ್ತದೆ.

f. ಪ್ರಸ್ತುತ, ನಷ್ಟವನ್ನು ತಡೆಗಟ್ಟಲು ಮತ್ತು ಪೋಷಕಗಳನ್ನು ಗರಿಷ್ಠ ಪ್ರಮಾಣದಲ್ಲಿ ಬಿಡುಗಡೆ ಮಾಡಲು ಬೇವಿನಿಂದ ಸಂಸ್ಕರಿಸಿದ ಯೂರಿಯಾವನ್ನು ಸಹ ಬಳಕೆ ಮಾಡಲಾಗುತ್ತಿದೆ. ಬೇವಿನ ಭಾಗಗಳ ಮೇಲೆ ನಡೆಸಿದ ಇತ್ತೀಚಿನ ಅಧ್ಯಯನಗಳ ಪ್ರಕಾರ, ಬೇವಿನ ಬೀಜದ ಸಾರಗಳಲ್ಲಿ ಅಜಾಡಿರಾಕ್ಟಿನ್ ಇರುವುದು ಕಂಡುಬಂದಿದ್ದು, ಇದು ಎಳಸು ಕೀಟಗಳ ಬೆಳವಣಿಗೆಯನ್ನು ತಡೆಯುವ ಕಾರ್ಯನಿರ್ವಹಿಸುತ್ತದೆ.

ಬೇವಿನ ಬೀಜದ ತಿರುಳಿನ ಸಾರವನ್ನು ತೆಗೆಯುವುದು ಸುಲಭ ಮತ್ತು ರೈತರು ತಮ್ಮದೇ ಆದ ಬೇವಿನ ಬೀಜದ ಹಿಂಡಿದ ಸಾರವನ್ನು ಕೆಳಗಿನ ವಿಧಾನದಿಂದ ತಯಾರಿಸಬಹುದು.

undefined
undefined

ಸಿಂಪರಣಾ ದ್ರಾವಣ ತಯಾರಿಸುವುದು

ಸಿಂಪರಣಾ ದ್ರಾವಣ ತಯಾರಿಸುವುದು

◙ ಪ್ರತಿ ಟ್ಯಾಂಕಿಗೆ (10 ಲೀಟರ್ ಸಾಮರ್ಥ್ಯ) ಬೇವಿನ ತಿರುಳಿನ ಸಾರಗಳು (500 ನಿಂದ 2000 ಮಿಲಿ) ಬೇಕಾಗುತ್ತವೆ. ಒಂದು ಎಕರೆಗೆ 3-5 ಕಿಲೊ ಬೇವಿನ ಬೀಜ ತಿರುಳು ಬೇಕು. ಬೀಜದ ಹೊರ ಪದರನ್ನು ತೆಗೆಯಿರಿ ಮತ್ತು ತಿರುಳನ್ನು ಮಾತ್ರ ಬಳಸಿ ಬೀಜಗಳು ತಾಜಾ ಆಗಿದ್ದರೆ 3 ಕಿಲೊ ಬೀಜ ತಿರುಳುಗಳು ಸಾಕು ಬೀಜಗಳು ಹಳೆಯವಾಗಿದ್ದರೆ, 5 ಕಿಲೊ ಬೇಕಾಗುತ್ತವೆ.

◙ ಬೀಜದ ತಿರುಳನ್ನು ನಯವಾಗಿ ಕುಟ್ಟಿ ಮತ್ತು ತೆಳು ಬಟ್ಟೆಯಲ್ಲಿ ಸಡಿಲಾಗಿ ಕಟ್ಟಿ. 10 ಲೀಟರ್ ನೀರಿನ ಪಾತ್ರೆಯಲ್ಲಿ ರಾತ್ರಿ ಇಡೀ ನೆನೆಸಿ. ಇದರ ನಂತರ, ಅದನ್ನು ಸೋಸಿ.

◙ ಸೋಸಿದ ನಂತರ, 6-7 ಲೀಟರ್ ಸಾರ ಪಡೆಯಬಹುದು. 500-1000 ಮಿಲಿ ಸಾರವನ್ನು 9 ಅಥವಾ 9½ ಲೀಟರ್ ನೀರಿನಲ್ಲಿ ತೆಳುವುಗೊಳಿಸಿ. ಸಿಂಪಡಿಸುವ ಮೊದಲು ಸಾರವು ಎಲೆಗಳ ಮೇಲೆ ಚೆನ್ನಾಗಿ ಅಂಟಿಕೊಳ್ಳಲು ಸಾರದಲ್ಲಿ 10 ಮಿಲಿ/ಲೀಟರ್ ಪ್ರಮಾಣದಲ್ಲಿ ಸಾಬೂನು ದ್ರಾವಣವನ್ನು ಸೇರಿಸಿ.ಈ ಸಾರದ ಸಾರತೆಯನ್ನು ಕೀಟ ದಾಳಿಯ ತೀವ್ರತೆಯ ಆಧಾರದ ಮೇಲೆ ಹೆಚ್ಚಿಸಬಹುದು ಅಥವಾ ಕಡಿಮೆಗೊಳಿಸಬಹುದು.

◙ ಬಟ್ಟೆಯ ಚೀಲದ ಮೂಲಕ ನೀರನ್ನು ಸೇರಿಸಿ ಮತ್ತು ಬಕೆಟ್ ನಲ್ಲಿ ಸಾರವನ್ನು ಹಿಡಿಯಿರಿ.

undefined
undefined
undefined

ಕಾಳಜಿ ವಹಿಸಬೇಕಾದ ಅಂಶಗಳು

ಕಾಳಜಿ ವಹಿಸಬೇಕಾದ ಅಂಶಗಳು

◙ ಬೇವಿನ ಕಾಯಿಗಳನ್ನು ಹಣ್ಣಾಗುವ ಕಾಲದಲ್ಲಿ ಸಂಗ್ರಹಿಸಿ ಮತ್ತು ನೆರಳಿನಲ್ಲಿ ಗಾಳಿಯೊಂದಿಗೆ ಒಣಗಿಸಿ.

◙ ಒಂಭತ್ತು ತಿಂಗಳಿಗಿಂತ ಹಿಂದಿನ ಬೀಜಗಳನ್ನು ಬಳಸಬೇಡಿ. ಈ ಅವಧಿಯ ಆಚೆ ಈಚೆ ಸಂಗ್ರಹಿಸಲಾದ ಬೀಜಗಳು ತಮ್ಮ ಸತ್ವಗಳನ್ನು ಕಳೆದುಕೊಳ್ಳುತ್ತವೆ ಮತ್ತು ಎನ್.ಎಸ್.ಕೆ.ಇ. ಸಿದ್ಧತೆಗೆ ಯೋಗ್ಯವಾಗಿರುವುದಿಲ್ಲ.

◙ ಯಾವಾಗಲೂ ತಾಜ ಬೇವಿನ ಬೀಜಗಳ ತಿರುಳಿನ ಸಾರವನ್ನೇ (ಎನ್.ಎಸ್.ಕೆ.ಇ.) ಬಳಸಿ.

◙ ಪರಿಣಾಮಕಾರಿ ಫಲಿತಾಂಶಕ್ಕಾಗಿ ಸಂಜೆ 4 ಗಂಟೆ ನಂತರ ಸಾರವನ್ನು ಸಿಂಪರಣೆಮಾಡಿ.

◙ ಕೀಟ ಮುತ್ತುವಿಕೆ ಮತ್ತು ಕೀಟಗಳನ್ನು ತಪ್ಪಿಸಲು ಸೂಕ್ತ ಅಂತರಗಳಲ್ಲಿ ಈ ದ್ರಾವಣವನ್ನು ಪುನರಾವರ್ತಿಸಬಹುದು.

◙ ಬೇವಿನ ಸಾರವು ನಷ್ಟ ಪೂರ್ವ ಹಂತಗಳಲ್ಲಿ ಪರಿಣಾಮಕಾರಿ ಎಂಬುದನ್ನು ದಯವಿಟ್ಟು ಗಮನಿಸಿ. ಕೀಟಗಳ ತೀವ್ರತೆ ಹೆಚ್ಚಿದ್ದರೆ, ಉತ್ತಮ ನಿಯಂತ್ರಣಕ್ಕೆ ಇತರ ರಾಸಾಯನಿಕಗಳನ್ನು ಬಳಸುವುದು ಉತ್ತಮ. ಕೀಟ ನಿರ್ವಹಣೆಯ ವೆಚ್ಚವನ್ನು ಕಡಿಮೆ ಮಾಡಲು ಬೇವಿನ ಕೀಟನಾಶಕಗಳನ್ನು ಇತರ ರಾಸಾಯನಿಕಗಳೊಂದಿಗೆ ಪರ್ಯಾಯವಾಗಿ ಬಳಸಬಹುದು.

ಈ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು, ಲೇಖನವನ್ನು ಇಷ್ಟಪಡಲು ನೀವು ♡ ಐಕಾನ್ ಕ್ಲಿಕ್ ಮಾಡಿದ್ದೀರಿ ಮತ್ತು ಲೇಖನವನ್ನು ಈಗ ನಿಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಹಂಚಿಕೊಳ್ಳುತ್ತೇವೆ ಎಂದು ನಾವು ಭಾವಿಸುತ್ತೇವೆ!

ಈ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು, ಲೇಖನವನ್ನು ಇಷ್ಟಪಡಲು ನೀವು ♡ ಐಕಾನ್ ಕ್ಲಿಕ್ ಮಾಡಿದ್ದೀರಿ ಮತ್ತು ಲೇಖನವನ್ನು ಈಗ ನಿಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಹಂಚಿಕೊಳ್ಳುತ್ತೇವೆ ಎಂದು ನಾವು ಭಾವಿಸುತ್ತೇವೆ!

ನಮ್ಮ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿ

ಫಾರ್ಮ್ ಆನ್-ದಿ-ಗೋ: ನಮ್ಮ ಆ್ಯಪ್ ನಲ್ಲಿ ಯಾವುದೇ ಸಮಯದಲ್ಲಿ, ಎಲ್ಲಿಂದಲಾದರೂ ಮಾರುಕಟ್ಟೆಯ ದಿನನಿತ್ಯದ ಮಾಹಿತಿಯನ್ನು ಪಡೆಯಿರಿ. ಇದು ನಿಮ್ಮ ಭಾಷೆಯಲ್ಲಿಯೂ ಲಭ್ಯವಿದೆ.

google play button
app_download
stars ಇತರ ಉಚಿತ ವೈಶಿಷ್ಟ್ಯಗಳು stars
ಈಗಲೇ ಆ್ಯಪ್ ಡೌನ್‌ಲೋಡ್ ಮಾಡಿ