ಹಿಂದೆ
ತಜ್ಞರ ಲೇಖನಗಳು
ಪಪ್ಪಾಯಿ ಬೆಳೆ ಬೆಳೆಯಲು ಉತ್ತಮ ಅಭ್ಯಾಸಗಳು

ಪಪ್ಪಾಯಿ ಜನಪ್ರಿಯ ಹಣ್ಣು ಇದು ಪೌಷ್ಠಿಕಾಂಶ ಮತ್ತು ಔಷಧೀಯ ಮೌಲ್ಯಗಳಿಗೆ ಹೆಸರುವಾಸಿಯಾಗಿದೆ. ಸಸಿ ನೆಟ್ಟ ನಂತರ ಹಣ್ಣು ಬಿಡಲು, ಪಪ್ಪಾಯಿ ಇತರ ಯಾವುದೇ ಹಣ್ಣಿನ ಬೆಳೆಗಳಿಗಿಂತ ಬಹಳ ಕಡಿಮೆ ಅವಧಿ ತೆಗೆದುಕೊಳ್ಳುತ್ತದೆ, ಒಂದು ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ ಹಣ್ಣುಗಳನ್ನು ಉತ್ಪಾದಿಸುತ್ತದೆ ಮತ್ತು ಪ್ರತಿ ಯೂನಿಟ್ ಪ್ರದೇಶಕ್ಕೆ ಬರುವ ಹಣ್ಣಿನ್ನ ಉತ್ಪಾದನೆಯಲ್ಲಿ ಪಪ್ಪಾಯಿ ಹಣ್ಣಿನ ಉತ್ಪಾದನೆಯು ಬೇರೆ ಹಣ್ಣು ಬೆಳೆಗಳ ಉತ್ಪಾದನೆಯ ತುಲನೆಯಲ್ಲಿ ಅಧಿಕವಾಗಿರುತ್ತದೆ.

ಮಣ್ಣು ಮತ್ತು ಹವಾಗುಣ

ಮಣ್ಣು ಮತ್ತು ಹವಾಗುಣ

undefined

ಇದು ಉಷ್ಣವಲಯದ ಹಣ್ಣಾಗಿದ್ದು, ಬೇಸಿಗೆಯ ಉಷ್ಣತೆಯು 35°C - 38°C ವರೆಗಿನ ಪ್ರದೇಶಗಳಲ್ಲಿ ಚೆನ್ನಾಗಿ ಬೆಳೆಯುತ್ತದೆ. ಚಳಿಯನ್ನು ಸಹಿಸಿಕೊಳ್ಳುತ್ತದೆ ಮತ್ತು ಸಮುದ್ರ ಮಟ್ಟದಿಂದ 1200 ಮೀಟರ್ ಎತ್ತರದವರೆಗಿನ ಪ್ರದೇಶಗಳಲ್ಲಿ ಬೆಳೆಯುತ್ತದೆ. ಸಮನಾದ ಕಣಗಳನ್ನು ಹೊಂದಿರುವ ನೀರು ಚೆನ್ನಾಗಿ ಬಸಿದು ಹೋಗುವ ಮಣ್ಣು ಈ ಬೆಳೆಗೆ ಬಹಳ ಸೂಕ್ತ, ಇದು ಕಾಲರ್ ರಾಟ್ ನಂತಹ ರೋಗಗಳು ಬರುವ ಸಂಭವವನ್ನು ಕಡಿಮೆ ಮಾಡುತ್ತದೆ.

undefined
undefined

ನಾಟಿ ಮತ್ತು ಋತು:

ಭಾರತದಲ್ಲಿ ಪಪ್ಪಾಯಿಯನ್ನು ಕೆಳಗೆ ಸೂಚಿಸಿದ ಕಾಲಮಾನಗಳಲ್ಲಿ ಬೆಳೆಯಬಹುದು.

➥ ವಸಂತ ಋತು (ಫೆಬ್ರವರಿ -ಮಾರ್ಚ್)

➥ ಮುಂಗಾರು ಋತು (ಜೂನ್-ಜುಲೈ)

➥ ಶರತ್ಕಾಲದ ಋತು (ಅಕ್ಟೋಬರ್-ನವೆಂಬರ್)

ತಳಿಗಳು

ತಳಿಗಳು

ಅತ್ಯುತ್ತಮವಾದ ತಳಿಗಳೆಂದರೆ, ತೈವಾನ್ 786, ಪೂಸ ನನ್ಹ, 15 ನಂಬರ್, ರೆಡ್ ಚಿಲ್ಲಿ, ಗ್ರೀನ್ ಬೆರ್ರಿ, ಐಸ್ ಬೆರ್ರಿ, ರಾಸ್ಪ್ ಬೆರ್ರಿ, ಮೇರಿವಾಲಾ.

ವಾಣಿಜ್ಯವಾಗಿ ಪಪ್ಪಾಯವನ್ನು ಬೀಜಗಳಿಂದ ಸಂತಾನಾಭಿವೃದ್ಧಿ ಮಾಡಲಾಗುತ್ತದೆ. ಅಂಗಾಂಶ ಕೃಷಿ ತಂತ್ರದ (ಟಿಶ್ಯೂ ಕಲ್ಚರ್) ಸಸಿಗಳು ಉತ್ತಮವಾಗಿರುತ್ತವೆ ಆದರೆ ಅವು ಟಿಶ್ಯೂ ಕಲ್ಚರ್ ಲ್ಯಾಬ್ ಮತ್ತು ಸಂಶೋಧನಾಲಯಗಳ ಹತ್ತಿರ ಮಾತ್ರವೇ ದೊರೆಯುತ್ತವೆ. ಬೀಜಗಳು ಅಲ್ಪಾವಧಿ ಜೀವಕಾಲವನ್ನು ಹೊಂದಿರುತ್ತವೆ ಆದ್ದರಿಂದ ಬೀಜಗಳನ್ನು ನೆಡುವಮುನ್ನ ಒಂದು ಋತುವಿಗಿಂತ ಹೆಚ್ಚು ಕಾಲ ಸಂಗ್ರಹಿಸಬಾರದು.

undefined
undefined

ಅಂತರ

ಅಂತರ

1.8 x 1.8 ಮೀ ಅಂತರವನ್ನು ಸಾಮಾನ್ಯವಾಗಿ ಅನುಸರಿಸಲಾಗುತ್ತದೆ. ಆದಾಗ್ಯೂ 1.5 x 1.5 m ಅಂತರದೊಂದಿಗೆ ಹೆಚ್ಚಿನ ಸಾಂದ್ರತೆಯ ಕೃಷಿಯನ್ನು ರೈತರಿಗೆ ಶಿಫಾರಸು ಮಾಡಲಾಗುತ್ತದೆ ಈದು ಆದಾಯವನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿದೆ.

undefined
undefined

ವಿಶೇಷ ತೋಟಗಾರಿಕಾ ಪದ್ಧತಿಗಳು

ವಿಶೇಷ ತೋಟಗಾರಿಕಾ ಪದ್ಧತಿಗಳು

ಆರಂಭದಲ್ಲಿ 3 - 4 ಗಿಡಗಳನ್ನು ಪ್ರತಿ ಗುಂಡಿಗಳಲ್ಲಿ ನೆಡಬಹುದು ಮತ್ತು ನಂತರ ಗಿಡಗಳ ಬೆಳವಣಿಗೆ ಮತ್ತು ಗಂಡು ಹಾಗು ಹೆಣ್ಣು ಗಿಡಗಳ ಸಂಖ್ಯೆಯನ್ನು ಆದರಿಸಿ ಪ್ರತಿ ಗುಂಡಿಗೆ ಕೇವಲ ಒಂದು ಗಿಡವನ್ನು ಇಟ್ಟುಕೊಳ್ಳಬೇಕು ಮತ್ತು ಹಾಗೆ ಮಾಡುವಾಗ ತೋಟದಲ್ಲಿ ಒಟ್ಟು 10% ಗಂಡು ಗಿಡಗಳನ್ನು ಪರಾಗಸ್ಪರ್ಶ ಮಾಡಲು ಮತ್ತು ಉಳಿದ 90% ಹೆಣ್ಣು ಗಿಡಗಳು ಹಣ್ಣು ಬಿಡುವ ಸಲುವಾಗಿ ಇಟ್ಟುಕೊಳ್ಳಬೇಕು.

undefined
undefined

ಆಂತರಿಕ ಬೇಸಾಯ ಕಾರ್ಯಾಗಳು

ಆಂತರಿಕ ಬೇಸಾಯ ಕಾರ್ಯಾಗಳು

ಈ ಕಾರ್ಯಾಚರಣೆಯನ್ನು ಮುಖ್ಯವಾಗಿ ಬೆಳವಣಿಗೆಯ ಆರಂಭಿಕ ಅವಧಿಯಲ್ಲಿ ಕಳೆಗಳನ್ನು ತೆಗೆಯಲು ಮಾಡಲಾಗುತ್ತದೆ. ಕಳೆ ತೆಗೆಯಲು ಮತ್ತು ಬೇರು ವಲಯದಲ್ಲಿ ಉತ್ತಮವಾದ ಗಾಳಿಯ ಸಂಚಾರಕ್ಕಾಗಿ, ಸಾಲುಗಳ ನಡುವೆ ಉಳುಮೆ ಮಾಡಿ ಮಣ್ಣನ್ನು ಬಿಡಿಸಬೇಕು. ಕೆಲವು ಉದಯ-ಪೂರ್ವ ಕಳೆನಾಶಕಗಳನ್ನು ಸಹ ಕಳೆ ನಿರ್ವಹಣೆಗೆ ಬಳಸಬಗುದು.

undefined
undefined

ಹೂಬಿಡುವಿಕೆ

ಹೂಬಿಡುವಿಕೆ

ಪಪ್ಪಾಯಿ ಗಿಡಗಳನ್ನು ಅವುಗಳು ಉತ್ಪಾದಿಸುವ ಹೂವಿನ ಪ್ರಕಾರವನ್ನು ಆಧರಿಸಿ ಗಂಡು, ಹೆಣ್ಣು ಅಥವಾ ದ್ವಿಲಿಂಗ ಮರಗಳಾಗಿ ವಿಂಗಡಿಸಬಹುದು. ಮರದ ಪ್ರಕಾರ, ಹೂವುಗಳು ಮತ್ತು ಹಣ್ಣುಗಳ ಕಾರ್ಯ ಮತ್ತು ಗಾತ್ರ ವಿಭಿನ್ನವಾಗಿರುತ್ತದೆ. ಸಾಮಾನ್ಯವಾಗಿ ಬೆಳವಣಿಗೆಯ ಹಂತಗಳಲ್ಲಿ ತಾಪಮಾನವನ್ನು ಅವಲಂಬಿಸಿ ಪಪ್ಪಾಯ ಗಿಡಗಳ ಲಿಂಗ ಬದಲಾಗಬಹುದು.

undefined
undefined
undefined
undefined

ನೀರಾವರಿ

ನೀರಾವರಿ

ಉತ್ತಮ ಬೆಳವಣಿಗೆ, ಉತ್ಪಾದನೆ ಮತ್ತು ಗುಣಮಟ್ಟಕ್ಕಾಗಿ, ಬೆಳೆ ಬೆಳವಣಿಗೆ ಮತ್ತು ಮಣ್ಣಿನ ಪ್ರಕಾರವನ್ನು ಅವಲಂಬಿಸಿ, ಬೆಳೆಗೆ ಸರಿಯಾಗಿ ನೀರುಣಿಸುವ ಮೂಲಕ ಮಣ್ಣಿನ ತೇವಾಂಶವನ್ನು ಸದಾ ಕಾಪಾಡಿಕೊಳ್ಳಬೇಕು. ಆದರೆ ಯಾವುದೇ ಸಂದರ್ಭದಲ್ಲಿಯೂ, ಗಿಡಗಳ ಬೇರಿನ ಜಾಗದಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು, ಹಾಗಾದಲ್ಲಿ ಬೇರು ಮತ್ತು ಕಾಂಡದ ಕೊಳೆತ ಉಂಟಾಗಿ ಬೆಳೆಗೆ ಬಹಳ ಹಾನಿಯಾಗುತ್ತದೆ. ಹನಿ ನೀರಾವರಿ ಪದ್ದತಿಯು ಪ್ರಯೋಜನಕಾರಿಯಾಗಿದೆ ಮತ್ತು ಪ್ರತಿ ಗಿಡಕ್ಕೆ ದಿನಕ್ಕೆ ನೀಡಬೇಕಾದ ನೀರಿನ ಮತ್ತು ಗೊಬ್ಬರದ ಪ್ರಮಾಣವನ್ನು ನಿರ್ಣಾಯಕವಾಗಿ ಪರಿಗಣಿಸಬೇಕು.

undefined
undefined

ಗೊಬ್ಬರ ಮತ್ತು ರಸಗೊಬ್ಬರಗಳ ಅಳವಡಿಕೆ

ಗೊಬ್ಬರ ಮತ್ತು ರಸಗೊಬ್ಬರಗಳ ಅಳವಡಿಕೆ

ಪ್ರತಿ ಎಕರೆಗೆ ತಲಾ 200 ಕೆಜಿ ಎನ್. ಪಿ.ಕೆ., ಜೊತೆಗೆ 8-10 ಟನ್ ಕೊಟ್ಟಿಗೆ ಗೊಬ್ಬರ, 20 ರಿಂದ 40 ಕೆಜಿ ಸೂಕ್ಷ್ಮ ಪೋಷಕಾಂಶ ಮಿಶ್ರಣ ಮತ್ತು ಸೀವೀಡ್ ಸಾರದ ಕಣಕವನ್ನು ಅನ್ವಯಿಸಬೇಕು.

ಕೀಟಗಳು ಮತ್ತು ರೋಗಗಳು

ಕೀಟಗಳು ಮತ್ತು ರೋಗಗಳು

ಮೈಟ್ಸ್ (ನುಸಿ)

ಮೈಟ್ಸ್ (ನುಸಿ)

ಹುಳಗಳು ಎಲೆಗಳ ರಸವನ್ನು ಹೀರುತ್ತವೆ ಮತ್ತು ಎಲೆಯ ಮೇಲ್ಬಾಗದಲ್ಲಿ ಹಳದಿ ಕಲೆಗಳು ಕಾಣಿಸಿಕೊಳ್ಳುತ್ತವೆ. ಹಾನಿಗೊಂಡಿರುವ ಎಲೆಗಳು ಅಂತಿಮವಾಗಿ ಒಣಗಿ ಅಕಾಲಿಕವಾಗಿ ಉದುರುತ್ತವೆ.

undefined
undefined

ಮೀಲಿಬಗ್

ಮೀಲಿಬಗ್

ಮೀಲಿಬಗ್‌ಗಳು ಸಸ್ಯಗಳಿಂದ ದೀರ್ಘವಾಗಿ ರಸವನ್ನು ಹೀರುತ್ತವೆ. ಕೀಟಗಳ ಪ್ರಮಾಣ ಹೆಚ್ಚಿದರೆ ಬಹಳ ಹಾನಿ ಉಂಟುಮಾಡುತ್ತದೆ. ಸಸ್ಯದ ಬೆಳವಣಿಗೆ ಕಡಿಮೆಯಾಗುತ್ತದೆ ಮತ್ತು ಹಣ್ಣಿನ ಗುಣಮಟ್ಟವು ಕಳಪೆಯಾಗುತ್ತದೆ.

undefined
undefined

ಬಿಳಿ ನೊಣ

ಬಿಳಿ ನೊಣ

ಬಿಳಿ ನೊಣಗಳು ಬೇಸಿಗೆ ಕಾಲದಲ್ಲಿ ವಿನಾಶಕಾರಿಯಾಗಿರುತ್ತವೆ. ಅವು ಎಲೆಗಳಿಂದ ರಸವನ್ನು ಹೀರುತ್ತವೆ. ಸಾಮಾನ್ಯವಾಗಿ ಅವು ಎಲೆಗಳ ಹಿಂಭಾಗದ ನಾಳಗಳ ನಡುವಿನಲ್ಲಿ ಗುಂಪಾಗಿ ಕೂತಿರುತ್ತವೆ. ಹಾನಿಗೊಳಗಾದ ಎಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ, ಮತ್ತು ಕೆಳಮುಖವಾಗಿ ಸುರುಳಿಯಾಗಿರುತ್ತವೆ. ಈ ಬಿಳಿ ನೊಣಗಳ ಕಾರಣದಿಂದಾಗಿಯೇ ವೈರಸ್ ರೋಗವು ಗಿಡಗಳಿಗೆ ಬಂದು ತೋಟದ ತುಂಬಾ ಹರಡುತ್ತದೆ.

undefined
undefined

ಡ್ಯಾಂಪಿಂಗ್-ಆಫ್

ಡ್ಯಾಂಪಿಂಗ್-ಆಫ್

ಡ್ಯಾಂಪಿಂಗ್-ಆಫ್ ರೋಗವು ಸೋಂಕಿನಿಂದ ಉಂಟಾಗುತ್ತದೆ ಮತ್ತು ಹೆಚ್ಚಿನ ತೇವಾಂಶ, ಅಥವಾ ಕಡಿಮೆ ತೇವಾಂಶದಿಂದಲೂ ಸಹ ಉಂಟಾಗುತ್ತದೆ. ಹೆಚ್ಚಿನ ತೇವಾಂಶವು ಶಿಲೀಂಧ್ರ ಮತ್ತು ಇತರ ರೋಗಕಾರಕಗಳನ್ನು ಸಹ ಬೆಂಬಲಿಸುತ್ತದೆ. ಮೊಳಕೆಗಳು ಹೊರಹೊಮ್ಮುವ ಪೂರ್ವ ಮತ್ತು ಹೊರಹೊಮ್ಮಿದ ನಂತರದ ಸ್ಥಿತಿಯಲ್ಲಿಯೂ ರೋಗಲಕ್ಷಣಗಳು ಸಾಮಾನ್ಯವಾಗಿ ಕಂಡುಬರುತ್ತವೆ.

undefined
undefined

ಎಲೆ ಚುಕ್ಕೆ ರೋಗ

ಎಲೆ ಚುಕ್ಕೆ ರೋಗ

ಶಿಲೀಂಧ್ರದಿಂದ ಈ ಎಲೆ ಚುಕ್ಕೆ ರೋಗವು ಸಂಭವಿಸುತ್ತದೆ. ತಂಪಾದ ತಾಪಮಾನ ಮತ್ತು ಮಳೆಗಾಲದಲ್ಲಿ ಈ ರೋಗವು ಹೆಚ್ಚು ತೀವ್ರವಾಗಿರುತ್ತದೆ. ಹಳೆಯ ಎಲೆಗಳ ಮೇಲೆ ಎಲೆ ಚುಕ್ಕೆಗಳು ಹೆಚ್ಚಾಗಿ ಕಂಡುಬರುತ್ತವೆ, ಈ ಎಲೆಗಳು ನಂತರ ಹಳದಿ ಬಣ್ಣಕ್ಕೆ ತಿರುಗುತ್ತವೆ. ಸೋಂಕಿತ ಗಿಡಗಳಲ್ಲಿ ಹೂವು ಉದುರುವುದು ಕಂಡುಬರುತ್ತದೆ.

undefined
undefined

ಪಪ್ಪಾಯ ರಿಂಗ್ ಸ್ಪಾಟ್ ವೈರಸ್

ಪಪ್ಪಾಯ ರಿಂಗ್ ಸ್ಪಾಟ್ ವೈರಸ್

ಮಮೇಲ್ಬಾಗದ ಎಳೆಯ ಎಲೆಗಳ ಮೇಲೆ ಹಳದಿ ಮೊಸಾಯಿಕ್ ರಚನೆಯು ಹಾಗು ಎಲೆಯ ತೊಟ್ಟುಗಳು ಮತ್ತು ಕಾಂಡದ ಮೇಲೆ ಎಣ್ಣೆಯುಕ್ತ ಗೆರೆಗಳು ಕಾಣಿಸಿಕೊಳ್ಳುತ್ತವೆ. ಹೂವು ಮತ್ತು ಹಣ್ಣುಗಳ ಮೇಲೆ ರಿಂಗ್ಆಕಾರದ ಮಚ್ಚೆಗಳು ಕಾಣಿಸಿಕೊಳ್ಳುತ್ತವೆ. ಈ ವೈರಸ್ ರೋಗವು 5-100% ನಷ್ಟು ಉತ್ಪಾದನಾ ನಷ್ಟವನ್ನು ಉಂಟುಮಾಡಬಲ್ಲದು. ಗಿಡದಿಂದ ಗಿಡಕ್ಕೆ ಗಿಡಹೇನುಗಳಿಂದ ಇದು ಹರಡುತ್ತದೆ.

undefined
undefined
undefined
undefined

ಪಪ್ಪಾಯ ಎಲೆ ಸುರುಳಿ

ಪಪ್ಪಾಯ ಎಲೆ ಸುರುಳಿ

ಇದು ತಂಬಾಕು ಎಲೆ ಸುರಳಿ ವೈರಸ್ ನಿಂದಾಗುತ್ತದೆ. ಎಲೆಗಳು ತೀವ್ರವಾಗಿ ಬಾಧಿತವಾಗುತ್ತವೆ ಮತ್ತು ನಾಳಗಳು ಹಳದಿಯಾಗುತ್ತದೆ ಮತ್ತು ಎಲೆಗಳು ಸುರುಳಿಯಾಗಿ, ಸುಕ್ಕುಗಟ್ಟುತ್ತವೆ ಮತ್ತು ವಿರೂಪಗೊಳ್ಳುತ್ತವೆ ಹಾಗು ಗಾತ್ರದಲ್ಲಿ ಇಳಿಕೆಹೊಂದುತ್ತವೆ. ಬಾಧಿತ ಸಸ್ಯಗಳು ಹೂ ಬಿಡುವುದಿಲ್ಲ ಅಥವಾ ಕೆಲವೆ ಹಣ್ಣುಗಳನ್ನು ಮಾತ್ರ ಬಿಡಬಲ್ಲದು.

undefined
undefined

ಸಲಹೆ: ಶಿಫಾರಸು ಮಾಡಿದ ಕೀಟನಾಶಕಗಳು ಮತ್ತು ಶಿಲೀಂಧ್ರನಾಶಕಗಳನ್ನು ಕೀಟ ಮತ್ತು ರೋಗಗಳನ್ನು ನಿಯಂತ್ರಿಸಲು ಬಳಕೆಮಾಡಿ.

ಸಲಹೆ: ಶಿಫಾರಸು ಮಾಡಿದ ಕೀಟನಾಶಕಗಳು ಮತ್ತು ಶಿಲೀಂಧ್ರನಾಶಕಗಳನ್ನು ಕೀಟ ಮತ್ತು ರೋಗಗಳನ್ನು ನಿಯಂತ್ರಿಸಲು ಬಳಕೆಮಾಡಿ.

ಕೊಯ್ಲು ಮತ್ತು ಇಳುವರಿ

ಕೊಯ್ಲು ಮತ್ತು ಇಳುವರಿ

ಬಿತ್ತನೆ ಮಾಡಿದ 9 ರಿಂದ 10 ತಿಂಗಳ ನಂತರ ಸಾಮಾನ್ಯವಾಗಿ ಕಟಾವು ಆರಂಭವಾಗುತ್ತದೆ. ಹಳದಿ ಬಣ್ಣದ ಗೆರೆಗಳು ಹಣ್ಣುಗಳ ಮೇಲೆ ಮೂಡಲು ಆರಂಭವಾದ ನಂತರ ಕೊಯ್ಲು ಮಾಡಲಾಗುತ್ತದೆ. ಪಪ್ಪಾಯಿ ಮರಗಳು ಹೆಚ್ಚು ಎತ್ತರವಿಲ್ಲದ ಕಾರಣ, ಕೈಗಳಿಂದ ತೆಹೆಯಬಹುದು. 25 ಕೆಜಿ/ಗಿಡದಿಂದ ಕೆಲವು ತಳಿಗಳಲ್ಲಿ 75-100 ಕೆಜಿಯವರೆಗೂ ಇಳುವರಿ ಬರುತ್ತದೆ.

undefined
undefined

ಈ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು, ಲೇಖನವನ್ನು ಇಷ್ಟಪಡಲು ನೀವು ♡ ಐಕಾನ್ ಕ್ಲಿಕ್ ಮಾಡಿದ್ದೀರಿ ಮತ್ತು ಲೇಖನವನ್ನು ಈಗ ನಿಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಹಂಚಿಕೊಳ್ಳುತ್ತೇವೆ ಎಂದು ನಾವು ಭಾವಿಸುತ್ತೇವೆ!

ನಮ್ಮ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿ

ಫಾರ್ಮ್ ಆನ್-ದಿ-ಗೋ: ನಮ್ಮ ಆ್ಯಪ್ ನಲ್ಲಿ ಯಾವುದೇ ಸಮಯದಲ್ಲಿ, ಎಲ್ಲಿಂದಲಾದರೂ ಮಾರುಕಟ್ಟೆಯ ದಿನನಿತ್ಯದ ಮಾಹಿತಿಯನ್ನು ಪಡೆಯಿರಿ. ಇದು ನಿಮ್ಮ ಭಾಷೆಯಲ್ಲಿಯೂ ಲಭ್ಯವಿದೆ.

google play button