ಹಿಂದೆ
ತಜ್ಞರ ಲೇಖನಗಳು
ಭಾಗ 2- ರೂಟ್ ಸ್ಟಾಕ್ ಹಾಗೂ ಕಸಿಮಾಡಿದ ಸಸ್ಯಗಳ, ರೋಗ ನಿರ್ವಹಣೆ ಮತ್ತು ಆರೈಕೆ

ರೂಟ್ ಸ್ಟಾಕ್ ಆರೈಕೆ

ರೂಟ್ ಸ್ಟಾಕ್ ಆರೈಕೆ

ರೂಟ್ ಸ್ಟಾಕ್ ನ ಹೊಸ ಬೆಳವಣಿಗೆ, ನೆಟ್ಟ 10-15 ದಿನಗಳ ನಂತರ ಪ್ರಾರಂಭವಾಗುತ್ತದೆ. ಗಿಡದ ಈ ಹಂತದಲ್ಲಿ ಆಹಾರ ಬೇರುಗಳು ಮಣ್ಣಿನ ಮೇಲಿನ ಪದರದಲ್ಲಿ ಕೇಂದ್ರೀಕೃತವಾಗಿರುವುದರಿಂದ ಆಗಾಗ್ಗೆ ನೀರನ್ನು ಹಾಯಿಸುವುದು ಬಹು ಮುಖ್ಯ.

undefined
undefined
undefined

ರೂಟ್ ಸ್ಟಾಕ್ ಸಸ್ಯಗಳ ಕೀಟ ಮತ್ತು ರೋಗ ನಿರ್ವಹಣೆ

ರೂಟ್ ಸ್ಟಾಕ್ ಸಸ್ಯಗಳ ಕೀಟ ಮತ್ತು ರೋಗ ನಿರ್ವಹಣೆ

ರೂಟ್ ಸ್ಟಾಕ್ ಸಸ್ಯಗಳಿಗೆ, ಸಾಮಾನ್ಯವಾಗಿ ಉಳಿದ ಜನಪ್ರಿಯ ವಾಣಿಜ್ಯ ತಳಿಗಳಿಗೆ ಬರುವ ಕಾಯಿಲೆಗಳಿಂದ ಹೆಚ್ಚಾಗಿ ಪ್ರಭಾವಿತವಾಗುವುದಿಲ್ಲ. ಆದರೂ ರಸ್ಟ್ ರೋಗವು ದೊಡ್ಡ ಸಮಸ್ಯೆಯಾಗಬಹುದು. ಸಸಿಗಳನ್ನು ನೆಟ್ಟ ಸುಮಾರು 3 ತಿಂಗಳಲ್ಲಿ ಹಳೆಯ ಎಲೆಯ ಮೇಲೆ ತುಕ್ಕಿನಂತಹ ರೋಗ ಲಕ್ಷಣಗಳು ಕಂಡುಬರುತ್ತದೆ. ರೋಗ ಜೀವಿಗಳು ಪ್ರಬುದ್ಧ ಎಲೆಯಿಂದ ರಸಸಾರವನ್ನು ಹೀರಿಕೊಂಡು ಸಸ್ಯವನ್ನು ದುರ್ಬಲಗೊಳಿಸುತ್ತದೆ. ಆದ್ದರಿಂದ, “ಬ್ಲೂ ಕಾಪರ್” 2 ಗ್ರಾಂ / ಲೀಟರ್ ಮತ್ತು “ಬಾವಿಸ್ಟಿನ್” 1 ಗ್ರಾಂ / ಲೀಟರ್ ನಂತಹ ಶಿಲೀಂಧ್ರನಾಶಕಗಳನ್ನು 15 ದಿನಗಳ ಮಧ್ಯಂತರದಲ್ಲಿ ಸಿಂಪಡಿಸುವ ಮೂಲಕ ತುಕ್ಕು ರೋಗವನ್ನು ನಿಯಂತ್ರಿಸ ಬಹುದು. ಇದಲ್ಲದೆ, ಕಪ್ಪು ಜೀರುಂಡೆ ಹಾನಿಯುಂಟುಮಾಡಬಹುದು. ಜೀರುಂಡೆ ಹುಳವನ್ನು ನಿರ್ವಹಿಸಲು ದಯವಿಟ್ಟು ಶಿಫಾರಸು ಮಾಡಿದ ಕೀಟನಾಶಕವನ್ನು ಸಿಂಪಡಿಸಿ.

undefined
undefined

ರೂಟ್ ಸ್ಟಾಕ್ ಸಸ್ಯಗಳ ಕಟಿಂಗ್

ರೂಟ್ ಸ್ಟಾಕ್ ಸಸ್ಯಗಳ ಕಟಿಂಗ್

ರೂಟ್ ಸ್ಟಾಕ್ ಸಸ್ಯಗಳ ಎಲ್ಲಾ ಚಿಗುರುಗಳ ಬೆಳವಣಿಗೆ ಏಕರೂಪವಾಗಿರುವುದಿಲ್ಲ, ಆದ್ಧರಿಂದ ಸಸ್ಯಗಳ ಬೆಳವಣಿಗೆಯ ಆರಂಭಿಕ ಹಂತದಲ್ಲಿ, ಎಲ್ಲಾ ಚಿಗುರುಗಳನ್ನು ಬೆಳೆಯಲು ಬಿಡಬೇಕು, ಇದರಿಂದ ಸರಿಯಾದ ಬೇರಿನ ಬೆಳವಣಿಗೆಯಾಗುತ್ತದೆ, ಏಕೆಂದರೆ ಚಿಗುರು ಮತ್ತು ಬೇರುಗಳ ಬೆಳವಣಿಗೆಯಲ್ಲಿ ಸಮತೋಲನವಿರುತ್ತದೆ.

undefined
undefined

ಹೊಸ ಚಿಗುರುಗಳ ನಿರ್ವಹಣೆ

ಹೊಸ ಚಿಗುರುಗಳ ನಿರ್ವಹಣೆ

ರೂಟ್ ಸ್ಟಾಕ್ ಸಸ್ಯಗಳ ಬೇರು ಚನ್ನಾಗಿ ಬೆಳೆದ ನಂತರ, ಎಲ್ಲಾ ಚಿಗುರುಗಳನ್ನು ಕತ್ತರಿಸಬೇಕು. ಕತ್ತರಿಸಿದ ನಂತರ ಗಿಡದಲ್ಲಿ, ವೇಗವಾಗಿ ಮೊಗ್ಗು ಮೊಳಕೆ ಬರುತ್ತವೆ. ಪ್ರತಿ ಸಸ್ಯದಲ್ಲಿ 5-6 ಕ್ಕೂ ಹೆಚ್ಚು ಹೊಸ ಚಿಗುರು ಬೆಳೆಯುತ್ತವೆ. ಇದರಲ್ಲಿ ಕೇವಲ ಎರಡು ಚಿಗುರುಗಳಲ್ಲಿ ಕಸಿ ಮಾಡಲಾಗುತ್ತದೆ

undefined
undefined
undefined
undefined

ಕಸಿ ಮಾಡುವ ಸಮಯೆ

ಕಸಿ ಮಾಡುವ ಸಮಯೆ

ಜನವರಿ - ಫೆಬ್ರವರಿಯಲ್ಲಿ ನೆಟ್ಟ ಬೇರುಕಾಂಡ (ರೂಟ್ ಸ್ಟಾಕ್) ಆಗಸ್ಟ್ - ಸೆಪ್ಟೆಂಬರ್ ಅವಧಿಯಲ್ಲಿ ಕಸಿ ಮಾಡಲು ಸಿದ್ಧವಾಗಿರುತ್ತದೆ. ಈ ಅವಧಿಯಲ್ಲಿ, ತಾಪಮಾನವು ಸುಮಾರು 30 ರಿಂದ 35 °C ಆಗಿರುತ್ತದೆ ಮತ್ತು ವಾತಾವರಣದ ತೇವಾಂಶ 80% ಕ್ಕಿಂತ ಹೆಚ್ಚಿರುತ್ತದೆ, ಇದರಿಂದ ಸಸ್ಯದ ರಸಸಾರ (ಸ್ಯಾಪ್) ಸಕ್ರಿಯವಾಗಿ ಹರಿಯುತ್ತಿರುತ್ತದೆ. ಇದು ಕಸಿ ಮಾಡುವಿಕೆಯ ಯಶಸ್ಸಿಗೆ ಸೂಕ್ತ ಸ್ಥಿತಿಯಾಗಿರುತ್ತದೆ. ಆದ್ದರಿಂದ, ಆಗಸ್ಟ್ ಕೊನೆಯ ವಾರ ನಿಂದ ಸೆಪ್ಟೆಂಬರ್ ಕೊನೆಯ ವಾರದೊಳಗಾಗಿ ಕಸಿ ಮಾಡಬೇಕು.

ಕಸಿಗೆ ಬೇರುಕಾಂಡ ಸಸ್ಯದ ತಯಾರಿಕೆ

ಕಸಿಗೆ ಬೇರುಕಾಂಡ ಸಸ್ಯದ ತಯಾರಿಕೆ

ಕಸಿ ಮಾಡುವಾಗ ಬೇರುಕಾಂಡ (ರೂಟ್ ಸ್ಟಾಕ್) ಸಸ್ಯಗಳಳ್ಳಿ ಸಕ್ರಿಯ ರಸಸಾರ (ಸ್ಯಾಪ್) ಹರಿವು ಇರಬೇಕು. ಇಲ್ಲದಿದ್ದಲ್ಲಿ ತೋಟದಲ್ಲಿ ಕಸಿ ಮಾಡುವ 2-3 ದಿನಗಳ ಮೊದಲು ನೀರನ್ನು ಚನ್ನಾಗಿ ನೀಡಬೇಕು. ಬೇರುಕಾಂಡದ ಚಿಗುರುಗಳನ್ನು ಕಸಿ ಮಾಡುವ ಅನುಕೂಲಕ್ಕಾಗಿ ನೆಲದಿಂದ ಎರಡು ಅಡಿಗೆ ಕತ್ತರಿಸಬೇಕು.

undefined
undefined

ಕಸಿಗೆ ಚಿಗುರಿನ ತಯಾರಿಕೆ

ಕಸಿಗೆ ಚಿಗುರಿನ ತಯಾರಿಕೆ

ಕಸಿ ಮಾಡಲು ಆಯ್ಕೆ ಮಾಡಿದ ಕುಡಿ / ಚಿಗುರು / ಸಾಯನ್ ಆರೋಗ್ಯಕರ, ಹೆಚ್ಚಿನ ಇಳುವರಿ ನೀಡುವ ಮತ್ತು ರೋಗ ಮುಕ್ತ ಬಳ್ಳಿಯದ್ದಾಗಿರಬೇಕು. ಒಂದು ರೂಟ್‌ಸ್ಟಾಕ್‌ಗೆ ಎರಡು ಸಂಪೂರ್ಣ ಪ್ರಬುದ್ಧವಾಗಿರುವ ಚಿಗುರುಗಳನ್ನು ಬಳಸಲಾಗುತ್ತದೆ. ಕಸಿಮಾಡಲು ಆರಿಸಿ ಕತ್ತರಿಸಿದ ಚಿಗುರುಗಳನ್ನೂ ಕಸಿಮಾಡುವ ಸುಮಾರು 2- 3 ಗಂಟೆಗಳ ಕಾಲ “ಬವಿಸ್ಟಿನ್” 2 ಗ್ರಾಂಮ್ / ಲೀಟರ್ ನ ಮಿಶ್ರಿತ ದ್ರಾವಣದಲ್ಲಿ ನೆನೆಸಿಡಬೇಕು. ಇದು ಪ್ರಮುಖ ಶಿಲೀಂಧ್ರ ರೋಗಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

undefined
undefined
undefined
undefined

ಕಸಿ ಮಾಡುವ ಪ್ರಕ್ರಿಯೆ

ಕಸಿ ಮಾಡುವ ಪ್ರಕ್ರಿಯೆ

ಒಂದು ತಳಿಯ ಬೇರುಕಾಂಡದ (ರೂಟ್ ಸ್ಟಾಕ್) ಮೇಲೆ ಇನ್ನೊಂದು ತಳಿಯ ಚಿಗುರನ್ನು (ಸಯಾನ್) ಕೂಡಿಸುವುದು. ಸಾಮಾನ್ಯವಾಗಿ ಒಳ್ಳೆಯ ಇಳುವರಿ ಕೊಡುವ ಪ್ರಮುಖ ತಳಿಗಳಿಗೆ ರೋಗನಿರೋಧಕ ಶಕ್ತಿ ಬಹಳ ಕಡಿಮೆ ಮತ್ತು ಮಣ್ಣು, ಹವಾಮಾನದ ಏರಿಳಿತಗಳಿಗೆ ಹೊಂದಿಕೊಳ್ಳುವ ಶಕ್ತಿ ಇರುವುದಿಲ್ಲ, ಹಾಗೆಯೇ ಈ ಎಲ್ಲಾ ಗಡಸು ಸಾಮರ್ಥ್ಯಗಳನ್ನು ಹೊಂದಿರುವ ನಾಟಿ ತಳಿಗಳಳ್ಳಿ ಉತ್ತಮ ಇಳುವರಿ ಮತ್ತು ಗುಣಮಟ್ಟದ ಹಣ್ಣು ಬಿಡುವ ಸಾಮರ್ಥ್ಯ ಇರುವುದಿಲ್ಲ. ಕಸಿ ಮಾಡುವ ಪ್ರಕ್ರಿಯೆಯಿಂದ ಎರಡು ತಳಿಗಳನ್ನು ಕೂಡಿಸುವುದರ ಮುಲಕ, ಆ ಎರಡು ತಳಿಗಳ ಎಲ್ಲಾ ಒಳ್ಳೆಯ ಗುಣಗಳನ್ನು ನಾವು ಒಂದೇ ಗಿಡದಲ್ಲಿ ಪಡೆಯಬಹುದು.

undefined
undefined

ಕಸಿಮಾಡಿದ ಸಸ್ಯಗಳ ಆರೈಕೆ

ಕಸಿಮಾಡಿದ ಸಸ್ಯಗಳ ಆರೈಕೆ

ಕಸಿ ಮಾಡಿದ 10-12 ದಿನಗಳ ನಂತರ ಕುಡಿಗಳು ಬೆಳೆಯಲು ಪ್ರಾರಂಭವಾಗುತ್ತದೆ. ಕುಡಿಗಳು ಬೆಳೆಯುವ ಮತ್ತು ಕಸಿ ಮಾಡಿದ ಜಾಗದ ಜೋಡಣೆಯ ಸಮಯದಲ್ಲಿ, ಸಣ್ಣ ಕಪ್ಪು ಜೀರುಂಡೆಯು ದಾಳಿ ಮಾಡಿ ಕುಡಿಯನ್ನು ಸಂಪೂರ್ಣವಾಗಿ ತಿನ್ನುತ್ತವೆ. ಇದರಿಂದ ಕುಡಿಗಳು ಒಣಗಿ ಸತ್ತಹೋಗುವ ಮುಲಕ ಕಸಿ ವಿಫಲತೆಗೆ ಕಾರಣವಾಗುತ್ತದೆ. ಆದ್ದರಿಂದ, ಈ ಅವಧಿಯಲ್ಲಿ, ಶಿಫಾರಸು ಮಾಡಿದ ಕೀಟನಾಶಕವನ್ನು ಸಿಂಪಡಿಸುವುವ ಮುಲಕ ಕೀಟವನ್ನು ನಿಯಂತ್ರಿಸಬೇಕು. ಮಳೆ ಮತ್ತು ಮೋಡ ಕವಿದ ವಾತಾವರಣವಿದ್ದಾಗ ಹವಾಮಾನದ ತೇವಾಂಶವು 90-100% ಆಗಿರುತ್ತದೆ. ಹೀಗಿರುವಾಗ ಕಸಿ ಮಾಡಿದ ಸಸಿಗಳ ಎಲೆಗಳಿಗೆ, ಡೌನಿಮಿಲ್ಡಿವ್ ಹಾಗು ಇತರೆ ಶಿಲೀಂಧ್ರ ರೋಗಗಳು ಬರುವ ಸಂಭವ ಹೆಚ್ಚು. ಆದ್ದರಿಂದ, ಕಸಿ ಮಾಡಿದ ನಂತರ, ಸಿಸ್ಟೆಮಿಕ್ ಶಿಲೀಂಧ್ರನಾಶಕಗಳನ್ನು ಸಿಂಪಡಿಸಿ ನಂತರ ಕಾಂಟ್ಯಾಕ್ಟ್ ಶಿಲೀಂಧ್ರನಾಶಕಗಳನ್ನು ಸಿಂಪಡಿಸಿ ರೋಗ ನಿಯಂತ್ರಣ ಮಾಡಿಕೊಳ್ಳಬೇಕು.

undefined
undefined

ಈ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು, ಲೇಖನವನ್ನು ಇಷ್ಟಪಡಲು ನೀವು ♡ ಐಕಾನ್ ಕ್ಲಿಕ್ ಮಾಡಿದ್ದೀರಿ ಮತ್ತು ಲೇಖನವನ್ನು ಈಗ ನಿಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಹಂಚಿಕೊಳ್ಳುತ್ತೇವೆ ಎಂದು ನಾವು ಭಾವಿಸುತ್ತೇವೆ!

undefined
undefined

ನಮ್ಮ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿ

ಫಾರ್ಮ್ ಆನ್-ದಿ-ಗೋ: ನಮ್ಮ ಆ್ಯಪ್ ನಲ್ಲಿ ಯಾವುದೇ ಸಮಯದಲ್ಲಿ, ಎಲ್ಲಿಂದಲಾದರೂ ಮಾರುಕಟ್ಟೆಯ ದಿನನಿತ್ಯದ ಮಾಹಿತಿಯನ್ನು ಪಡೆಯಿರಿ. ಇದು ನಿಮ್ಮ ಭಾಷೆಯಲ್ಲಿಯೂ ಲಭ್ಯವಿದೆ.

google play button