ತೊಗರಿ ಬೆಳೆಯು ಒಂದು ಪ್ರಮುಖ ಬೇಳೆ ಕಾಳು ಬೆಳೆಯಾಗಿದ್ದಭಾರತದಾದ್ಯಂತ ಬೆಳೆಯುವ ಪ್ರಮುಖ ಬೇಳೆಕಾಳು ಬೆಳೆ ಎಕರೆಗೆ ಸರಾಸರಿ 8-10 ಕ್ವಿಂಟಾಲ್ ಉತ್ಪಾದಕತೆ ಕೊಡುತ್ತದೆ.
ತೊಗರಿ ಬೆಳೆಯ ಉತ್ಪನ್ನ ಕಡಿಮೆಯಾಗಲು ಕಾಯಿ ಕೊರೆಯುವ ಹುಳುಗಳೇ ಪ್ರಮುಖ ಕಾರಣ. ಇವುಗಳಲ್ಲಿ ಮುಖ್ಯವಾಗಿ ಹೆಲಿಕೋವರ್ಪಾ ಆರ್ಮಿಜೆರಾ, ಕಾಯಿಕೊರೆಯುವ ನೊಣ, ಮೆಲನಗ್ರೋಮೈಜಾ ಒಬ್ಟುಜಾ, ಕಾಯಿಕೊರಕ, ಮರುಕ ವಿಟ್ರೆಟ. ಇವುಗಳಲ್ಲಿ ಹೆಲಿಕೊವರ್ಪಾ ಆರ್ಮಿಜೆರಾ ಬಹಳ ಸಾಮಾನ್ಯವಾಗಿ ಬರುವ ಮತ್ತು ಹಾನಿಕಾರಕ ಕೀಟ.
ಹೆಲಕೋವರ್ಪಾ ಆರ್ಮಿಜೆರಾ ಪತಂಗದ ಮುಂದಿನ ರೆಕ್ಕೆಯ ಮೇಲೆ ಇಂಗ್ಲೀಷ್ “V” ಆಕಾರದ ಗುರುತು ಇದ್ದು ಹಿಂದಿನ ರೆಕ್ಕೆಯ ಮೇಲೆ ಕಪ್ಪು ಬಣ್ಣದ ಅಂಚು ಇರುತ್ತದೆ. ಹೆಣ್ಣು ಪತಂಗ ತಿಳಿ ಹಳದಿ ಬಣ್ಣದ ಗುಂಡನೆಯ ತತ್ತಿಗಳನ್ನು ಒಂದೊದಾಗಿ ಗಿಡದ ತುದಿ ಭಾಗದಲ್ಲಿ ಇಡುತ್ತದೆ. ಕೀಟವು ಹಸಿರು ಬಣ್ಣದಲ್ಲಿದ್ದು ಕಂದು ಬಣ್ಣದ ಪಟ್ಟಿಗಳನ್ನು ಎರಡು ಪಕ್ಕೆಗಳಲ್ಲಿ ಹೊಂದಿರುತ್ತವೆ.
ಈ ಕೀಟವು ತನ್ನ ತಲೆಯ ಭಾಗವನ್ನು ಮಾತ್ರ ಕಾಯಿಯ ಒಳಗಿಟ್ಟು ಉಳಿದ ದೇಹದ ಭಾಗವನ್ನು ಹೊರಗಿಟ್ಟು ಬೆಳೆಯುವ ಬೀಜವನ್ನು ತಿಂದು ಹಾನಿ ಮಾಡುತ್ತದೆ. ಪ್ರತಿಯೊಂದು ಕೀಟವು ತನ್ನ ಜೀವಿತಾವಧಿಯಲ್ಲಿ 30-40 ಕಾಯಿಗಳನ್ನು ಹಾನಿ ಮಾಡುತ್ತದೆ. ಹಾನಿಗೊಂಡ ಕಾಯಿಯ ಮೇಲೆ ರಂದ್ರಗಳನ್ನು ಕಾಣಬಹುದು. ಈ ಕೀಟ ಒಂದು ಸಂತತಿಯನ್ನು 28-35 ದಿವಸಗಳಲ್ಲಿ ಪೂರ್ಣಗೊಳಿಸುತ್ತದೆ, ಒಂದು ವರ್ಷದಲ್ಲಿ ಈ ಕೀಟ 8 ಸಂತತಿಗಳನ್ನು ಪೂರ್ಣಗೊಳಿಸುತ್ತದೆ.
ಸಮರ್ಗ ಕೀಟ ನಿರ್ವಹಣೆ
ಸಮರ್ಗ ಕೀಟ ನಿರ್ವಹಣೆ
➥ ಬೇಸಿಗೆಯಲ್ಲಿ ಭೂಮಿ ಉಳುಮೆ ಮಾಡುವುದರಿಂದ ಕೋಶಗಳು ಹೊರ ಬರುವುದರಿಂದ ಬಿಸಿಲ ತಾಪಕ್ಕೆ / ನೈಸರ್ಗಿಕ ಶತ್ರುಗಳಿಗೆ ತುತ್ತಾಗುತ್ತವೆ.
➥ ಈ ಬೆಳೆಯನ್ನು ಅಂತರ ಬೆಳೆಯಾಗಿ ಜೋಳ, ಸಜ್ಜೆ, ನವಣೆ, ಅಥವಾ ಎಳ್ಳು ಜೊತೆ ಬೆಳೆಯುವುದು.
➥ ಫೆರಮೋನ್ ಬಲೆಗಳನ್ನು ಪ್ರತಿ ಎಕರೆಗೆ 2-3 ರಂತೆ ಸೆಪ್ಟೆಂಬರ್ ನಿಂದ ಜನವರಿ ತಿಂಗಳುಗಳಲ್ಲಿ ಗಂಡು ಪತಂಗಗಳನ್ನು ಆಕರ್ಷಿಸಲು 30 ಮೀಟರ್ ದೂರದಲ್ಲಿಹೊಲದಲ್ಲಿ ಬಳಸಬೇಕು. ಇವು ಕೀಟದ ಚಲನವಲನವನ್ನು ಗುರುತಿಸಿ ಹತೋಟಿ ಕ್ರಮಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ (ಇ.ಟಿ.ಎಲ್. 10 ಪತಂಗ/ಬಲೆ/ದಿನಕ್ಕೆ)
➥ ಹೊಲದಲ್ಲಿ 6-7 ಅಡಿ ಎತ್ತರವಿರುವ ಕವಲೊಡೆದ ಟೊಂಗೆಗಳನ್ನು ಪ್ರತಿ ಎಕೆರೆಗೆ 8 ರಂತೆ ನೆಡಬೇಕು.
➥ ಶೇ. 25-50 ರಷ್ಟು ಹೂವಾಡಿದಾಗ ಪ್ರತಿ ಗಿಡಕ್ಕೆ 2 ಮೊಟ್ಟೆಗಳು ಅಥವಾ 1 ಕೀಟಗಳು ಕಂಡು ಬಂದಾಗ ಮೊದಲನೆ ಸಂಪರಣೆಯಾಗಿ ಮೊಟ್ಟಗಳನ್ನು ನಾಶಪಡಿಸುವ ಕೀಟನಾಶಕಗಳಾದ 0.6 ಗ್ರಾಂ ಥೈಯಾಡಿಕಾರ್ಟ್ 75 ಡಬ್ಲು ಪಿ. Or 2 ಮಿ.ಲೀ. ಪ್ರೊಫೆನೂಫಾಸ್ 50 ಇಸಿ or 0.6 ಗ್ರಾಂ ಮಿಥೋಮಿಲ್ 50 ಎಸ್.ಪಿ. ಪ್ರತಿ ಲೀ.ನೀರಿಗೆ ಬೆರೆಸಿ ಬೆಳೆಗೆ ಸಿಂಪಡಿಸಬೇಕು.
➥ ಎರಡನೆ ಸಿಂಪರಣೆಯಾಗಿ 5% ಬೇವಿನ ಬೀಜದ ಕಷಾಯವನ್ನು ಮಾಡಬೇಕು. ಇಲ್ಲದಿದ್ದಲ್ಲಿ ಯಾವುದಾದರೂ ಬೇವಿನ ಮೂಲದ ಕೀಟನಾಶಕವನ್ನು ಪ್ರತಿ ಲೀ. ನೀರಿಗೆ 2 ಮಿ.ಲೀ.ಯಂತೆ ಬೆರೆಸಿ ಸಿಂಪಡಿಸಬೇಕು.
➥ ಮೂರನೆಯದಾಗಿ, 250 ಗ್ರಾಂ ರಾಬಿನ್ ನೀಲಿ ಪುಡಿ + 1250 ಗ್ರಾಂ ಬೆಲ್ಲದ ಜೊತೆಗೆ ಹೆಲಿಕೋವರ್ಪಾ ಆರ್ಮಿಗೆರಾ (HaNPV) @ 100 ಲಾರ್ವಲ್ ಸಮಾನ / ಎಕರೆ (0.75 ಮಿಲಿ / ಲೀಟರ್ ನೀರು) ಗೆ ನ್ಯೂಕ್ಲಿಯರ್ ಪಾಲಿಹೆಡ್ರೊಸಿಸ್ ವೈರಸ್‌ನೊಂದಿಗೆ ಸಿಂಪಡಿಸಿ. ಬೆಳಿಗ್ಗೆ ಅಥವಾ ಸಂಜೆಯ ಸಮಯದಲ್ಲಿ ಸಿಂಪಡಿಸುವುದು ಉತ್ತಮ.
➥ ನನಾಲ್ಕನೇ ಸಿಂಪಡಣೆಯನ್ನು ಶಿಫಾರಸು ಮಾಡಲಾದ ಪ್ರಮಾಣದಲ್ಲಿ ಇಂಡೋಕ್ಸಾಕಾರ್ಬ್ 14.5 SC ಅಥವಾ ಸ್ಪಿನೋಸಾಡ್ 45 SC ಅಥವಾ ನೊವೊಲುರಾನ್ 10 EC ನಂತಹ ಕೀಟನಾಶಕಗಳೊಂದಿಗೆ ಸಿಂಪಡಿಸಿ.
➥ ಅಗತ್ಯವಿದ್ದರೆ, ಶಿಫಾರಸು ಮಾಡಿದ ಪ್ರಮಾಣದಲ್ಲಿ ಆಲ್ಫಾಮೆಥ್ರಿನ್ 10 ಇಸಿ ಅಥವಾ ಫೆನ್ವಾಲೇವೇಟ್ 20 ಇಸಿಯೊಂದಿಗೆ ಐದನೇ ಸಿಂಪಡಣೆಯನ್ನು ನೀಡಬಹುದು.
➥ ಪ್ರತಿರೋಧದ ಬೆಳವಣಿಗೆಯನ್ನು ತಡೆಯಲು ಕೀಟನಾಶಕಗಳನ್ನು ಪರ್ಯಾಯವಾಗಿ ಬಳಸಿ.
ಈ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು, ಲೇಖನವನ್ನು ಇಷ್ಟಪಡಲು ನೀವು ♡ ಐಕಾನ್ ಕ್ಲಿಕ್ ಮಾಡಿದ್ದೀರಿ ಮತ್ತು ಲೇಖನವನ್ನು ಈಗ ನಿಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಹಂಚಿಕೊಳ್ಳುತ್ತೇವೆ ಎಂದು ನಾವು ಭಾವಿಸುತ್ತೇವೆ!