ಹಿಂದೆ
ತಜ್ಞರ ಲೇಖನಗಳು
ಸಾವಯವ ಗೊಬ್ಬರಗಳ ತಯಾರಿಕೆ ಮತ್ತು ಬಳಸುವ ವಿಧಾನ

ಬೆಳೆಯ ಪೌಷ್ಟಿಕಾಂಶದ ಅಗತ್ಯವನ್ನು ಪೂರೈಸಲು ಈ ದಿನಗಳಲ್ಲಿ, ಅನೇಕ ರೈತರು ಸಾವಯವ ವಿಧಾನಗಳನ್ನು ಅನುಸರಿಸುತ್ತಾರೆ ಮತ್ತು ತಮ್ಮ ತೋಟದಲ್ಲಿಯೇ ವಿವಿಧ ರೀತಿಯ ಸಾವಯವ ಗೊಬ್ಬರಗಳನ್ನು ತಯಾರಿಸುತ್ತಾರೆ. ಇದನ್ನು ಪ್ರತಿ 2 ರಿಂದ 3 ತಿಂಗಳಿಗೊಮ್ಮೆ ಬಳಸಬಹುದು, ಆದರೆ ಇವು ಪರಿಣಾಮಕಾರಿಯಾಗಲು ಹಸಿರು ಗೊಬ್ಬರ ಅಥವಾ ಸಗಣಿ ಗೊಬ್ಬರವನ್ನು ಹೆಚ್ಚಿನ ಪ್ರಮಾಣದಲ್ಲಿ ತೋಟಕ್ಕೆ ಹಾಕಬೇಕು.

ಕೆಳಗೆ ನೀಡಲಾದ ಕೆಲವು ವಿಧಾನಗಳ ವಿವರಗಳನ್ನು ನೋಡಿ.

ಕೆಳಗೆ ನೀಡಲಾದ ಕೆಲವು ವಿಧಾನಗಳ ವಿವರಗಳನ್ನು ನೋಡಿ.

undefined

ಎರೆಹುಳಗೊಬ್ಬರ

ಎರೆಹುಳಗೊಬ್ಬರ

ಸಸ್ಯಗಳ ಎಲೆ, ಹುಲ್ಲು ಇತ್ಯಾದಿ ಸಸ್ಯ ತ್ಯಾಜ್ಯಗಳನ್ನು 10 ಸೆಂ.ಮೀ. ನಷ್ಟು ಉದ್ದದ ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿ ರಾಶಿ ಮಾಡಬೇಕು. 10 ಕೆಜಿ ಸಗಣಿ ನೀರು ಪ್ರತಿ 100 ಕೆಜಿ ತ್ಯಾಜ್ಯದೊಂದಿಗೆ ಚನ್ನಾಗಿ ಬೆರೆಸಿ ಎರಡು ವಾರಗಳವರೆಗೆ ಇಡಬೇಕು ಮತ್ತು ಪ್ರತಿದಿನ ಅದರ ಮೇಲೆ ನೀರು ಸಿಂಪಡಿಸಬೇಕು. 2 ವಾರಗಳ ನಂತರ ಇದನ್ನು 1 ಮೀಟರ್ ಅಗಲವಿರುವ ಸಿಮೆಂಟ್ ಟ್ಯಾಂಕ್ ಅಥವಾ ಟ್ರೆಂಚ್ ಗಳಿಗೆ ವರ್ಗಾಯಿಸಬೇಕು, ಇದರ ಮೇಲೆ ಹೊಸದಾಗಿ ಕತ್ತರಿಸಿದ ಸಸ್ಯ ತ್ಯಾಜ್ಯ ವಸ್ತುಗಳ 10 - 15 ಸೆಂ.ಮೀ ನಷ್ಟು ಎತ್ತರದ ಪದರವನ್ನು ಹಾಕಿ, ಅದರಮೇಲೆ 2 ಸೆಂ.ಮೀ. ನಷ್ಟು ಎತ್ತರದ ಸಗಣಿಯ ಪದರವನ್ನು ಹಾಕಬೇಕು. ಇದರ ಮೇಲೆ ಪ್ರತಿ ಚದರ ಮೀಟರ್‌ಗೆ 1000 ಎರೆಹುಳುಗಳನ್ನು ಬಿಡಬೇಕು. 60 ದಿನಗಳಲ್ಲಿ ಬಿಡಿ ಬಿಡಿಯಾದ ಹರಳಿನಂತಹ ಉತ್ತಮ ಎರೆಹುಳಗೊಬ್ಬರ ತಯಾರಾಗುತ್ತದೆ. ವರ್ಷಕ್ಕೆ ಒಂದು ಸಸ್ಯಕ್ಕೆ 8 ಕೆಜಿ ಎರೆಹುಳಗೊಬ್ಬರವನ್ನು ಹಾಕಿದರೆ ಅದು ಅಡಿಕೆ ಸಸ್ಯಕ್ಕೆ ಶಿಫಾರಸು ಮಾಡಲಾದ ಸಾರಜನಕದ ಅಗತ್ಯವನ್ನು ಸಂಪೂರ್ಣವಾಗಿ ಪೂರೈಸುತ್ತದೆ ಹಾಗು ಮಣ್ಣಿನ ಗುಣಮಟ್ಟವನ್ನು ಹೆಚ್ಚಿಸುತ್ತದೆ.

undefined
undefined

ಟ್ರೈಕೊಡರ್ಮಾದೊಂದಿಗೆ ಕೊಟ್ಟಿಗೆ ಗೊಬ್ಬರದ ಉಪಚಾರ

ಟ್ರೈಕೊಡರ್ಮಾದೊಂದಿಗೆ ಕೊಟ್ಟಿಗೆ ಗೊಬ್ಬರದ ಉಪಚಾರ

ಟ್ರೈಕೋಡರ್ಮಾದೊಂದಿಗೆ ಉಪಚಾರ ಮಾಡಲು, ಕೊಟ್ಟಿಗೆ ಗೊಬ್ಬರವು ಚೆನ್ನಾಗಿ ಕೊಳೆತ ಪುಡಿ ರೂಪದಲ್ಲಿರಬೇಕು ಮತ್ತು ಶಾಖವನ್ನು ಉತ್ಪಾದಿಸುವ ಹಂತದಲ್ಲಿರಬಾರದು. ಇಂತಹ ಕೊಟ್ಟಿಗೆ ಗೊಬ್ಬರವನ್ನು ನೆರಳಿನಲ್ಲಿ ರಾಶಿಹಾಕಿ ಪ್ರತಿ 50 ರಿಂದ 100 ಕೆಜಿ ಗೊಬ್ಬರಕ್ಕೆ 1 ಕೆಜಿಯಷ್ಟು ಟ್ರೈಕೊಡರ್ಮಾವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು. ಮಿಶ್ರಣ ಮಾಡಿದ ನಂತರ, ರಾಶಿಯನ್ನು ಅಡಿಕೆ ಅಥವಾ ತೆಂಗಿನ ಸೋಗೆ ಅಥವಾ ಭತ್ತದ ಒಣಹುಲ್ಲಿನಿಂದ ಮುಚ್ಚಬೇಕು ಮತ್ತು ನೀರನ್ನು ಸಿಂಪಡಿಸಬೇಕು. 4 ರಿಂದ 5 ದಿನಗಳಿಗೊಮ್ಮೆ ಮುಚ್ಚಿಗೆಯನ್ನು ತೆಗೆದು ರಾಶಿಯನ್ನು ಚೆನ್ನಾಗಿ ತಿರುವುಹಾಕಬೇಕು, ನಂತರ ಮತ್ತೆ ಮುಚ್ಚಿಗೆಮಾಡಿ ನೀರನ್ನು ಸಿಂಪಡಿಸಬೇಕು. ಸುಮಾರು 2 ವಾರಗಳಲ್ಲಿ ಟ್ರೈಕೊಡರ್ಮಾ ಹಾಗು ಕೊಟ್ಟಿಗೆ ಗೊಬ್ಬರದ ಮಿಶ್ರಣವು ತೋಟಕ್ಕೆ ಹಾಕಲು ಸಿದ್ಧವಾಗುತ್ತದೆ.

undefined
undefined

ಜೀವಾಮೃತ

ಜೀವಾಮೃತ

10 ಕೆಜಿ ತಾಜಾ ಹಸುವಿನ ಸಗಣಿ, 2 ಕೆಜಿ ಕಪ್ಪು ಬೆಲ್ಲ, ಯಾವುದೇ ದ್ವಿದಳ ಧಾನ್ಯದ 2 ಕೆಜಿ ಹಿಟ್ಟು, ಇವೆಲ್ಲವನ್ನೂ ಪ್ರತ್ಯೇಕವಾಗಿ ನೀರಿನಲ್ಲಿ ಕರಗಿಸಿ, ನಂತರ ಈ ಎಲ್ಲಾ ಕರಗಿದ ಮಿಶ್ರಣನ್ನು 200 ಲೀಟರ್ ಬ್ಯಾರೆಲ್‌ಗೆ ಸುರಿಯಬೇಕು. ಈ ಬ್ಯಾರೆಲ್‌ಗೆ 10 ಲೀಟರ್ ಹಸುವಿನ ಮೂತ್ರ, ½ ಕೆಜಿ ರೋಗ ಮುಕ್ತ ಹ್ಯೂಮಸ್ ಭರಿತ ಮೇಲ್ಮಣ್ಣು ಸೇರಿಸಿ, ನಂತರ ಬ್ಯಾರೆಲ್‌ನಲ್ಲಿ ಉಳಿದ ಜಾಗವನ್ನು ನೀರಿನಿಂದ ತುಂಬಿಸಿ. ಈ 200 ಲೀಟರ್ ದ್ರಾವಣವನ್ನು ಮರದ ಕೋಲಿನಿಂದ ದಿನಕ್ಕೆ 3 ಬಾರಿ ಕೇವಲ ಪ್ರದಕ್ಷಿಣಾಕಾರವಾಗಿ ಮಾತ್ರ ತಿರುಗಿಸಬೇಕು. ಬ್ಯಾರೆಲ್ ಅನ್ನು ನೆರಳಿನಲ್ಲಿ ಇಡಿ ಮತ್ತು ಮೇಲ್ಭಾಗವನ್ನು ಗೋಣಿ ಚೀಲದಿಂದ ಮುಚ್ಚಬೇಕು. ದ್ರಾವಣವನ್ನು 7 ದಿನಗಳವರೆಗೆ ತಿರುಗಿಸುತ್ತ ನೆರಳಿನಲ್ಲಿಯೇ ಇಡಬೇಕು ಮತ್ತು 8 ನೇ ದಿನದಿಂದ ಅಡಿಕೆ ಮರದ ಸುತ್ತಲೂ ಮಣ್ಣಿನ ಮೇಲೆ ದ್ರಾವಣವನ್ನು ಸುರಿಯಬಹುದು.

undefined
undefined

ವೇಸ್ಟ್ ಡಿಕಂಪೋಸರ್

ವೇಸ್ಟ್ ಡಿಕಂಪೋಸರ್

ಇದು ರಾಷ್ಟ್ರೀಯ ಸಾವಯವ ಕೃಷಿ ಕೇಂದ್ರವು ಅಭಿವೃದ್ಧಿಪಡಿಸಿದ ಸೂಕ್ಷ್ಮಜೀವಿಗಳ ಸಂಯೋಜನೆಯಾಗಿದೆ. ಇದು ಸಾವಯವ ಸಂಶೋಧನಾ ಕೇಂದ್ರಗಳು, ಕೃಷಿ ವಿಜ್ಞಾನ ಕೇಂದ್ರಗಳು, ಹಾಗು ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿಯು ಲಭ್ಯವಿದೆ, ಇದನ್ನು 30ml ಬಾಟಲಿಗಳಲ್ಲಿ ಮಾರಾಟ ಮಾಡಲಾಗುತ್ತದೆ. ಒಂದು ಬ್ಯಾರೆಲ್‌ನಲ್ಲಿ 200 ಲೀಟರ್ ನೀರನ್ನು ತೆಗೆದುಕೊಂಡು 2 ಕೆಜಿ ನೈಸರ್ಗಿಕವಾದ ಕಪ್ಪು ಬೆಲ್ಲವನ್ನು ಕರಗಿಸಿ ನಂತರ 30mlನ ಒಂದು ಬಾಟಲ್ ವೇಸ್ಟ್ ಡಿಕಂಪೋಸರ್ ಅನ್ನು ಬ್ಯಾರೆಲ್‌ಗೆ ಹಾಕಿ, ಮರದ ಕೋಲಿನಿಂದ ದಿನಕ್ಕೆ 2 ಬಾರಿ ಚೆನ್ನಾಗಿ ಬೆರೆಸಿ. ಬ್ಯಾರೆಲ್ ಅನ್ನು ನೆರಳಿನಲ್ಲಿ ಇಡಬೇಕು ಮತ್ತು ಗೋಣಿ ಚೀಲದಿಂದ ಮುಚ್ಚಬೇಕು. 5 ದಿನಗಳ ನಂತರ ದ್ರಾವಣವು ತಿಳಿ ಬಿಳಿ ಬಣ್ಣಕ್ಕೆ ತಿರುಗುತ್ತದೆ. ಇದನ್ನು ತೋಟಕ್ಕೆ ಅಥವಾ ಕಾಂಪೋಸ್ಟ್ ಹೊಂಡಗಳಿಗೆ ಹಾಕಬಹುದು. ಸಾವಯವ ತ್ಯಾಜ್ಯವನ್ನು ಬೇಗನೆ ಕಾಂಪೋಸ್ಟ್ ಮಾಡಲು, ಮಣ್ಣಿನ ಆರೋಗ್ಯ ಸುಧಾರಣೆ ಮಾಡಲು ಮತ್ತು ಸಸ್ಯ ಸಂರಕ್ಷಣಾ ಪ್ರಚೋದಕವನ್ನಾಗಿ ಇದನ್ನು ಬಳಸಲಾಗುತ್ತದೆ.

undefined
undefined

ಈ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು, ಲೇಖನವನ್ನು ಇಷ್ಟಪಡಲು ನೀವು ♡ ಐಕಾನ್ ಕ್ಲಿಕ್ ಮಾಡಿದ್ದೀರಿ ಮತ್ತು ಲೇಖನವನ್ನು ಈಗ ನಿಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಹಂಚಿಕೊಳ್ಳುತ್ತೇವೆ ಎಂದು ನಾವು ಭಾವಿಸುತ್ತೇವೆ!

ಕೆಳಗೆ ನೀಡಲಾದ ಕೆಲವು ವಿಧಾನಗಳ ವಿವರಗಳನ್ನು ನೋಡಿ.

ಕೆಳಗೆ ನೀಡಲಾದ ಕೆಲವು ವಿಧಾನಗಳ ವಿವರಗಳನ್ನು ನೋಡಿ.

ನಮ್ಮ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿ

ಫಾರ್ಮ್ ಆನ್-ದಿ-ಗೋ: ನಮ್ಮ ಆ್ಯಪ್ ನಲ್ಲಿ ಯಾವುದೇ ಸಮಯದಲ್ಲಿ, ಎಲ್ಲಿಂದಲಾದರೂ ಮಾರುಕಟ್ಟೆಯ ದಿನನಿತ್ಯದ ಮಾಹಿತಿಯನ್ನು ಪಡೆಯಿರಿ. ಇದು ನಿಮ್ಮ ಭಾಷೆಯಲ್ಲಿಯೂ ಲಭ್ಯವಿದೆ.

google play button