ಹಿಂದೆ
ತಜ್ಞರ ಲೇಖನಗಳು
ವರ್ಮೀಕಾಂಪೋಸ್ಟ್ ತಯಾರಿಕೆ ಮತ್ತು ಬೆಳೆಗೆ ಅದರ ಲಾಭಗಳು

ಎರೆ ಹುಳು ಗೊಬ್ಬರ ಕೃಷಿ, ಎರೆಹುಳುಗಳ ಎಸೆ ಅಥವಾ ಮಲವು ಅತ್ಯುತ್ತಮ ಪೌಷ್ಠಿಕಾಂಶ ಸಮೃದ್ಧ ಜೈವಿಕ ರಸಗೊಬ್ಬರ ಮತ್ತು ಮಣ್ಣಿನ ಫಲವತ್ತಕಾರಿ ಆಗಿರುತ್ತದೆ. ಜೈವಿಕ ವಸ್ತುಗಳನ್ನು ಸೇವಿಸುವ ಎರೆಹುಳುಗಳನ್ನು ಎರೆ ಹುಳು ಗೊಬ್ಬರ (ವರ್ಮಿಕಾಂಪೋಸ್ಟ್) ಉತ್ಪಾದಿಸಲು ಬಳಸುತ್ತಾರೆ ಅಂದರೆ ಎಸಿನಿಯಾ ಫೋಯಿಟಿಡಾ, ಕೆಂಪು ಹುಳು ಅಥವಾ ಕೆಂಪು ರಿಗಲರ್ ಮತ್ತು ಲಂಬ್ರಿಕಸ್ ರುಬೆಲ್ಲಸ್. ವರ್ಮಿಕಾಂಪೋಸ್ಟ್ ಅತ್ಯಂತ ಕಡಿಮೆ ಬೆಲೆಯದ್ದಾಗಿದ್ದು ಅದು ದುಬಾರಿ ಹಾಗೂ ಹಾನಿಕಾರಕ ರಾಸಾಯನಿಕ ರಸಗೊಬ್ಬರಕ್ಕೆ ಪರಿಸರ ಸ್ನೇಹಿ ಪರ್ಯಾಯವಾಗಿರುತ್ತದೆ. ವರ್ಮಿಕಾಂಪೋಸ್ಟ್ ಮಣ್ಣಿನ ಮೇಲ್ಮೈ, ವಾತಾಯನ ಮತ್ತು ಲಾಭಕಾರಿ ಸೂಕ್ಷ್ಮಜೀವಿಗಳ ಪದಾರ್ಥಗಳನ್ನು ಸುಧಾರಿಸುತ್ತದೆ. ಅದರಲ್ಲಿ ಚೆನ್ನಾಗಿ ಕೊಳೆತ ಕೃಷಿ ಗೊಬ್ಬರಕಿಂಥ 5 ಪಟ್ಟು ನೈಟ್ರೋಜನ್, 6 ಪಟ್ಟು ಫಾಸ್ಪರಸ್ ಮತ್ತು 4 ಪಟ್ಟು ಪೊಟಾಶಿಯಂ ಹೆಚ್ಚಿರುತ್ತದೆ. ವರ್ಮಿಕಾಂಪೋಸ್ಟ್ ಹೊಲದಿಂದ ತೇವಾಂಶ ಆವಿಯಾಗಿಸುವ ಪ್ರಕ್ರಿಯೆಯನ್ನು, ರೋಗದ ಪ್ರಸಂಗ, ಕೀಟ - ಹುಳು ಮತ್ತು ಕಳೆಗಳನ್ನು ಕಡಿಮೆ ಮಾಡುತ್ತದೆ. ಬೆಳೆಯಲ್ಲಿ ಉತ್ತಮ ಬೀಜಾಂಕುರತೆ ಮತ್ತು ಅತ್ಯಧಿಕ ಉತ್ಪಾದಕ ಗುಣಮಟ್ಟವನ್ನು ಕಾಣುತ್ತದೆ.

undefined

ಎರೆ ಹುಳು ಗೊಬ್ಬರ (ವರ್ಮಿಕಾಂಪೋಸ್ಟ್) ಘಟಕಗಳಲ್ಲಿ ಸರಿಯಾದ ವಾತಾಯನ ಮತ್ತು ಒಳಚರಂಡಿ ಸೌಲಭ್ಯಗಳು ಇರಬೇಕು ಅದರೊಂದಿಗೆ ತೇವಾಂಶವು 40-50%, ತಾಪಮಾನ - 28-30oಸೆ ಮತ್ತು ನೆರಳಿನ ಸೌಲಭ್ಯವಿರಬೇಕು. ಎರೆ ಹುಳು ಗೊಬ್ಬರ (ವರ್ಮಿಕಾಂಪೋಸ್ಟ್) ಅನ್ನು ಗುಂಡಿಗಳು, ಟ್ಯಾಂಕುಗಳು, ನೆಲ, ಮರದ ಕಪಾಟುಗಳು ಇತ್ಯಾದಿಗಳನ್ನು ತಯಾರಿಸಬಹುದು. ಇವುಗಳನ್ನು ಮೊದಲಿಗೆ ಪ್ಲಾಸ್ಟಿಕ್ ಶೀಟುಗಳಿಂದ ಮುಚ್ಚಬೇಕು ಹಾಗಾಗಿ ಪೌಷ್ಟಿಕಾಂಶಗಳು ಕರಗುವುದಿಲ್ಲ.

undefined
undefined

ಅತ್ಯಂತ ಸಾಮಾನ್ಯವಾಗಿ ಬಳಸುವ ಎರೆ ಹುಳು ಗೊಬ್ಬರ (ವರ್ಮಿಕಾಂಪೋಸ್ಟ್) ಘಟಕವೆಂದರೆ ಪ್ಲಾಸ್ಟಿಕ್ ವರ್ಮಿಬೆಡ್ ಅದು 9 ಅಡಿ ಉದ್ದ, 4 ಅಡಿ ಅಗಲ ಮತ್ತು 2.5 ಅಡಿ ಎತ್ತರವಿರುತ್ತದೆ ಮತ್ತು ಸುಮಾರು ₹ 3500/ ಬೆಡ್ ಬೆಲೆಯದ್ದಾಗಿರುತ್ತದೆ. ವರ್ಮಿಬೆಡ್ಡುಗಳನ್ನು ಸ್ವಲ್ಪ ಇಳಿಜಾರು ಒದಗಿಸುವ ಮೂಲಕ ಭೂಮಿಯ ಮೇಲೆ ಅಳವಡಿಸಲಾಗುತ್ತದೆ. ಒಳಚರಂಡಿ ರಂದ್ರವು ಭೂಮಿಯಿಂದ ಸ್ವಲ್ಪ ಕೆಳಗೆ ಇರಬೇಕು. ಬೆಡ್ ಮೇಲಿನ ಮೊದಲ ಪದರದಲ್ಲಿ ಒಣಹುಲ್ಲನ್ನು ಹಾಕಬೇಕು, ಆನಂತರ ಬೇವಿನ ಎಲೆಗಳನ್ನು ಹಾಕಬೇಕು. ಸ್ವಲ್ಪ ನೀರಿನಿಂದ ತೇವಮಾಡಬೇಕು. ಒಂದು ವಾರ ಹಳೆಯ ಸಗಣಿಯನ್ನು ಸೇರಿಸಬೇಕು (ಸರಿಸುಮಾರು 6-7 ಕ್ವಿಂಟಲ್ ಗಳು). ಸಗಣಿಯನ್ನು ಶುದ್ಧವಾದ ಹೊಲದ ಮಣ್ಣಿನೊಂದಿಗೆ ಅಥವಾ ರಾಕ್ ಫಾಸ್ಪೇಟ್ ನೊಂದಿಗೆ 3:1ರ ಅನುಪಾತದಲ್ಲಿ ಬೆರೆಸಲಾಗುತ್ತದೆ. ಸ್ವಲ್ಪ ನೀರನ್ನು ಚಿಮುಕಿಸಬೇಕು. ಆನಂತರ 5 ಕಿಗ್ರಾಂ ಎರೆಹುಳುಗಳನ್ನು ಹಾಕಬೇಕು. ಒಣಹುಲ್ಲಿನಿಂದ ಮುಚ್ಚಬೇಕು. ನೀರು ಚಿಮುಕಿಸಬೇಕು. ಅಂತಿಮವಾಗಿ ಒದ್ದೆಯಾದ ಗೋಣಿ ಚೀಲಗಳಿಂದ ಮುಚ್ಚಬೇಕು. ವರ್ಮಿಕಾಂಪೋಸ್ಟ್ ಬೆಡ್ಡುಗಳನ್ನು ಮೇಲಿನ ವರೆಗು ತುಂಬಿಸಬಾರದು, ಯಾವಾಗಲು ಮೇಲ್ಭಾಗದಲ್ಲಿ 4 ಇಂಚುಗಳ ಅಂತರ ಬಿಡಬೇಕು. ನಿಯಮಿತವಾಗಿ ನೀರನ್ನು ಚಿಮುಕಿಸಬೇಕು: ಚಳಿಗಾಲದಲ್ಲಿ 2-3 ದಿನಗಳಿಗೆ ಒಮ್ಮೆ, ಬೇಸಿಗೆಯಲ್ಲಿ ಪ್ರತಿನಿತ್ಯ, ಮಳೆಗಾಲದಲ್ಲಿ ನೀರು ಚಿಮುಕಿಸುವ ಅವಶ್ಯಕತೆ ಇಲ್ಲ. ಸಾಧ್ಯವಾದಷ್ಟು ಎರೆಹುಳುಗಳನ್ನು ವರ್ಮಿಬೆಡ್ಡಿನಲ್ಲಿ ವಿಭಜನೆ ಮಾಡದೆ ಬಿಡಬೇಕು. ವರ್ಮಿಕಾಂಪೋಸ್ಟ್ 3 ತಿಂಗಳಲ್ಲಿ ಸಿದ್ಧವಾಗುತ್ತದೆ.

undefined
undefined

ಅಂತಿಮವಾಗಿ ಕೊಯ್ಲು ಮಾಡುವ ಸಮಯದಲ್ಲಿ ಅದು ಗಾಢವಾದ ಕಂದು ಬಣ್ಣ ಅಥವಾ ಕಪ್ಪು ಚಹಾ ಅಥವಾ ಕಾಫಿ ಪುಡಿಯಂತೆ ಕಾಣುತ್ತದೆ. ಕೊಯ್ಲು ಮಾಡುವ ಒಂದು ವಾರದ ಮುಂಚೆಯಿಂದ ನೀರು ಚಿಮುಕಿಸುವುದನ್ನು ನಿಲ್ಲಿಸಬೇಕು. ವರ್ಮಿಬೆಡ್ಡುಗಳಿಗೆ ಸೂರ್ಯ ಕಿರಣ ಬೀಳುವಂತೆ ಮಾಡಿ ಅಥವಾ ಅದರ ಮೇಲೆ ಒಂದು ಸರಳವಾದ ದೀಪವನ್ನು ನೇತುಹಾಕಿ, ಬೆಳಕಿಗೆ ಅತಿ ಸಂವೇದಕಾರಿಯಾದ ಎರೆಹುಳು ಬೆಡ್ಡಿನ ಒಳಗೆ ಆಳಕ್ಕೆ ಸಂಚರಿಸುತ್ತದೆ. ಅಥವಾ ಬೆಡ್ಡಿನಲ್ಲಿ ಒಂದು ಸಣ್ಣ ರಂದ್ರವನ್ನು ತೋಡಿ ಮತ್ತು ಸ್ವಲ್ಪ ಸಗಣಿಯನ್ನು ಹಾಕಿ, ಎಲ್ಲ ಕಡೆ ಇರುವ ಎರೆಹುಳುಗಳು ಸಗಣಿಯನ್ನು ತಿನ್ನಲು ಅಲ್ಲಿಗೆ ಓಡಿಬರುತ್ತವೆ. ಒಂದು ಸಣ್ಣ ತೋಟದ ಕಪಾಟಿನಿಂದ ಎರೆ ಹುಳು ಗೊಬ್ಬರ (ವರ್ಮಿಕಾಂಪೋಸ್ಟ್) ವನ್ನು ತೊಡೆದು ಹಾಕಿ. ಈ ಎರೆ ಹುಳು ಗೊಬ್ಬರ (ವರ್ಮಿಕಾಂಪೋಸ್ಟ್) ವನ್ನು 2 ಮಿಮೀ ಜರಡಿಯಲ್ಲಿ ಜಾಲಿಸಿ ಮತ್ತು ಪಾಲಿಥೀನ್ ಪ್ಯಾಕೆಟುಗಳಲ್ಲಿ ತುಂಬಿಸಿ.

ಬೆಡ್ಡಿನಲ್ಲಿ ಉಳಿದಿರುವ ಎರೆಹುಳುಗಳನ್ನು ಮತ್ತೊಮ್ಮೆ ಇದೇ ವಿಧಾನಗಳೊಂದಿಗೆ ಬಳಸಬಹುದು. ಎರಡನೆ ಬಾರಿ ಎರೆ ಹುಳು ಗೊಬ್ಬರ (ವರ್ಮಿಕಾಂಪೋಸ್ಟ್) ವನ್ನು ಎರಡು ವರೆ ತಿಂಗಳಲ್ಲಿ ಸಿದ್ಧವಾಗುತ್ತದೆ, ಮೂರನೆ ಬಾರಿ 2 ತಿಂಗಳಲ್ಲಿ ಸಿದ್ಧವಾಗುತ್ತದೆ, ಆನಂತರ ಪ್ರತಿ 45-60 ದಿನಗಳಲ್ಲಿ ನಾವು ಎರೆ ಹುಳು ಗೊಬ್ಬರ (ವರ್ಮಿಕಾಂಪೋಸ್ಟ್) ವನ್ನು ಕೊಯ್ಲನ್ನು ಮಾಡಬಹುದು. ಹಾಗಾಗಿ ವರ್ಷದಲ್ಲಿ ನಾವು ವರ್ಮಿಕಾಂಪೋಸ್ಟಿನ 4-6 ಉತ್ಪಾದನೆ ಚಕ್ರಗಳನ್ನು ಪೂರ್ಣಗೊಳಿಸಬಹುದು. ಪ್ರತಿ ಒಂದು ಕ್ವಿಂಟಾಲ್ ಸಗಣಿಗೆ ನಾವು ಸುಮಾರು 70 ಕಿಗ್ರಾಂ ವರ್ಮಿಕಾಂಪೋಸ್ಟನ್ನು ಕೊಯ್ಲು ಮಾಡಬಹುದು. ವರ್ಮಿಬೆಡ್ಡಿನ ಒಳಚರಂಡಿಯ ಮೂಲಕ ಪಡೆದಂತಹ ದ್ರವದ ಸಾರವನ್ನು ವರ್ಮಿವಾಶ್ ಎಂದು ಕರೆಯಲಾಗುತ್ತದೆ. ಅದು ಅತ್ಯುತ್ತಮವಾದ ದ್ರವ ರಸಗೊಬ್ಬರವಾಗಿದ್ದು ಅದರಲ್ಲಿ ಪೌಷ್ಠಿಕಾಂಶಗಳು, ಸೂಕ್ಷ್ಮ ಪೋಷಕಾಂಶಗಳು, ಮೇಟಾಬೋಲೈಟ್ಸ್, ಕಿಣ್ವಗಳು ಮತ್ತು ಸಸ್ಯಗಳ ಬೆಳವಣಿಗೆಗೆ ಲಾಭದಾಯಕವಾದ ವಿಟಮಿನ್ನುಗಳು ಇರುತ್ತವೆ. ರೈತರು ತಮ್ಮ ಸ್ವಂತ ಹೊಲಕ್ಕಾಗಿ ವರ್ಮಿಕಾಂಪೋಸ್ಟಿಂಗ್ ಅನ್ನು ಮಾಡಬಹುದು ಹಾಗೆಯೇ ವಾಣಿಜ್ಯವಾಗಿ ಮಾರಾಟ ಮಾಡಲು ಮಾಡಬಹುದು. ವರ್ಮಿಕಾಂಪೋಸ್ಟ್ ಪ್ಯಾಕೆಟ್ಟುಗಳನ್ನು ಮಾರುಕಟ್ಟೆಯಲ್ಲಿ @ ₹10/ ಕಿಗ್ರಾಂ ಮತ್ತು ವರ್ಮಿವಾಶ್ ಅನ್ನು @ ₹ 200-300/ ಲೀಟರಿನಂತೆ ಮಾರಲಾಗುತ್ತದೆ.

ಡಾ. ಪಾಯಲ್ ಸಕ್ಸೇನಾ

ಎರೆ ಹುಳು ಗೊಬ್ಬರ ಕೃಷಿ, ಎರೆಹುಳುಗಳ ಎಸೆ ಅಥವಾ ಮಲವು ಅತ್ಯುತ್ತಮ ಪೌಷ್ಠಿಕಾಂಶ ಸಮೃದ್ಧ ಜೈವಿಕ ರಸಗೊಬ್ಬರ ಮತ್ತು ಮಣ್ಣಿನ ಫಲವತ್ತಕಾರಿ ಆಗಿರುತ್ತದೆ. ಜೈವಿಕ ವಸ್ತುಗಳನ್ನು ಸೇವಿಸುವ ಎರೆಹುಳುಗಳನ್ನು ಎರೆ ಹುಳು ಗೊಬ್ಬರ (ವರ್ಮಿಕಾಂಪೋಸ್ಟ್) ಉತ್ಪಾದಿಸಲು ಬಳಸುತ್ತಾರೆ ಅಂದರೆ ಎಸಿನಿಯಾ ಫೋಯಿಟಿಡಾ, ಕೆಂಪು ಹುಳು ಅಥವಾ ಕೆಂಪು ರಿಗಲರ್ ಮತ್ತು ಲಂಬ್ರಿಕಸ್ ರುಬೆಲ್ಲಸ್. ವರ್ಮಿಕಾಂಪೋಸ್ಟ್ ಅತ್ಯಂತ ಕಡಿಮೆ ಬೆಲೆಯದ್ದಾಗಿದ್ದು ಅದು ದುಬಾರಿ ಹಾಗೂ ಹಾನಿಕಾರಕ ರಾಸಾಯನಿಕ ರಸಗೊಬ್ಬರಕ್ಕೆ ಪರಿಸರ ಸ್ನೇಹಿ ಪರ್ಯಾಯವಾಗಿರುತ್ತದೆ. ವರ್ಮಿಕಾಂಪೋಸ್ಟ್ ಮಣ್ಣಿನ ಮೇಲ್ಮೈ, ವಾತಾಯನ ಮತ್ತು ಲಾಭಕಾರಿ ಸೂಕ್ಷ್ಮಜೀವಿಗಳ ಪದಾರ್ಥಗಳನ್ನು ಸುಧಾರಿಸುತ್ತದೆ. ಅದರಲ್ಲಿ ಚೆನ್ನಾಗಿ ಕೊಳೆತ ಕೃಷಿ ಗೊಬ್ಬರಕಿಂಥ 5 ಪಟ್ಟು ನೈಟ್ರೋಜನ್, 6 ಪಟ್ಟು ಫಾಸ್ಪರಸ್ ಮತ್ತು 4 ಪಟ್ಟು ಪೊಟಾಶಿಯಂ ಹೆಚ್ಚಿರುತ್ತದೆ. ವರ್ಮಿಕಾಂಪೋಸ್ಟ್ ಹೊಲದಿಂದ ತೇವಾಂಶ ಆವಿಯಾಗಿಸುವ ಪ್ರಕ್ರಿಯೆಯನ್ನು, ರೋಗದ ಪ್ರಸಂಗ, ಕೀಟ - ಹುಳು ಮತ್ತು ಕಳೆಗಳನ್ನು ಕಡಿಮೆ ಮಾಡುತ್ತದೆ. ಬೆಳೆಯಲ್ಲಿ ಉತ್ತಮ ಬೀಜಾಂಕುರತೆ ಮತ್ತು ಅತ್ಯಧಿಕ ಉತ್ಪಾದಕ ಗುಣಮಟ್ಟವನ್ನು ಕಾಣುತ್ತದೆ.

ನಮ್ಮ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿ

ಫಾರ್ಮ್ ಆನ್-ದಿ-ಗೋ: ನಮ್ಮ ಆ್ಯಪ್ ನಲ್ಲಿ ಯಾವುದೇ ಸಮಯದಲ್ಲಿ, ಎಲ್ಲಿಂದಲಾದರೂ ಮಾರುಕಟ್ಟೆಯ ದಿನನಿತ್ಯದ ಮಾಹಿತಿಯನ್ನು ಪಡೆಯಿರಿ. ಇದು ನಿಮ್ಮ ಭಾಷೆಯಲ್ಲಿಯೂ ಲಭ್ಯವಿದೆ.

google play button