ಹಿಂದೆ
ತಜ್ಞರ ಲೇಖನಗಳು
ಮಣ್ಣು ಪರೀಕ್ಷೆಗೆ ಮಣ್ಣು ಸಂಗ್ರಹ ವಿಧಾನ

ಮಾದರಿ ತೆಗೆದುಕೊಳ್ಳುವುದಕ್ಕೆ ಉತ್ತಮ ಸಮಯವೆಂದರೆ ಬಿತ್ತನೆ ಅಥವಾ ನಾಟಿಗೂ ಮೊದಲಿನ ಸಮಯವಾಗಿದೆ. ಬಹುತೇಕ ಪ್ರದೇಶಗಳಲ್ಲಿ ಇದು ಸಾಮಾನ್ಯವಾಗಿ ಬೆಳೆ ಬಿತ್ತನೆಗೆ ಸಕಾಲವಲ್ಲದ ಸನ್ನಿವೇಶವಾಗಿರುವುದರಿಂದ, ಮಣ್ಣು ಪರೀಕ್ಷೆ ಮಾಡುವುದಕ್ಕೆ ಮತ್ತು ಮಣ್ಣಿನಲ್ಲಿ ಪೋಷಕಾಂಶ ಅಗತ್ಯವನ್ನು ಕಂಡುಕೊಳ್ಳಲು ಸೂಕ್ತ ಸಮಯವಾಗಿದೆ. ಮಣ್ಣಿನ ಮಾದರಿಯು ಪರೀಕ್ಷೆ ಒಳಪಡಿಸಿದ ಜಮೀನಿನ ಪ್ರಮಾಣಿಕ ಪ್ರತಿನಿಧಿಯಾಗಿರಬೇಕು. ಮಣ್ಣು ಮಾದರಿ ಪಡೆಯಲು, 1-2 ಸೆಂ.ಮಿ ವ್ಯಾಸದ ಗುಂಡಿ ತೋಡುವುದು ಉತ್ತಮ. ಸಣ್ಣ ಚಳಿಕೆಯನ್ನು ಸಹ ಬಳಸಬಹುದು. ಯಾವುದೇ ಸನ್ನಿವೇಶದಲ್ಲೂ, ಮಣ್ಣಿನ ಏಕರೂಪದ ಪದರವನ್ನು ಅಪೇಕ್ಷಿತ ಮಾದರಿ ಆಳದ ಕೆಳಗಿನಿಂದ ತೆಗೆದುಕೊಳ್ಳಬೇಕು. ಸೂಕ್ತ ಮಾದರಿ ಆಳವು 6 ರಿಂದ 7 ಇಂಚುಗಳಷ್ಟು ಇರುತ್ತವೆ. ಅಂದರೆ ಮಣ್ಣಿನ ಮೇಲ್ಮೈಯನ್ನು ಸ್ವಚ್ಛಗೊಳಿಸಿದ ನಂತರ 1 ಅಡಿ ಆದವರೆಗೂ 50-100 ಗ್ರಾಂನಷ್ಟು V ಆಕೃತಿಯ ಮಣ್ಣಿನ ಮಾದರಿಯನ್ನು ತೆಗೆದುಕೊಳ್ಳಬೇಕು. ಇದೇ ರೀತಿಯಾಗಿ 1 ಎಕರೆಯಲ್ಲಿ 20 ಕಡೆಯಿಂದ ತೆಗೆದುಕೊಳ್ಳಬೇಕು ಮತ್ತು ಸರಿಯಾಗಿ ಮಿಶ್ರಣ ಮಾಡಿ 500 ಗ್ರಾಂ ಪ್ರಾತಿನಿಧಿಕ ಮಾದರಿಯನ್ನಾಗಿಸಬೇಕು.

undefined
undefined

ಈ ಎಲ್ಲ ಮಾದರಿಗಳನ್ನು ಒಂದು ಬಕೆಟ್‌ನಲ್ಲಿ ಸಂಗ್ರಹಿಸಬೇಕು. ಮಣ್ಣನ್ನು ಕ್ವಾರ್ಟರಿಂಗ್ ಅಥವಾ ಕಂಪಾರ್ಟ್‌ಮೆಂಟ್‌ ಮಾಡುವ ಮೂಲಕ ಅರ್ಧದಿಂದ ಒಂದು ಕಿಲೋಗ್ರಾಂಗೆ ತರಬೇಕು. ಕ್ವಾರ್ಟರಿಂಗ್ ಅಂದರೆ ಸಮಗ್ರವಾಗಿ ಮಿಶ್ರಣ ಮಾಡಿದ ಮಾದರಿಯನ್ನು ನಾಲ್ಕು ಭಾಗ ಮಾಡಿ. ಎರಡು ತದ್ವಿರುದ್ಧ ಭಾಗವನ್ನು ತೆಗೆದುಹಾಕಿ ಮತ್ತು ಉಳಿದ ಎರಡು ಕಾಲು ಭಾಗಗಳನ್ನು ಮಿಶ್ರಣ ಮಾಡಿ ಮತ್ತು ಅಗತ್ಯ ಮಾದರಿಯನ್ನು ಪಡೆಯುವವರೆಗೆ ಈ ಪ್ರಕ್ರಿಯೆಯನ್ನು ಪುನರಾವರ್ತಿಸಿ. ಇದು ಕ್ವಾರ್ಟರಿಂಗ್ ಆಗಿರುತ್ತದೆ. ಕಂಪಾರ್ಟ್‌ಮೆಂಟಲೈಸಿಂಗ್ ಮಾಡುವುದೆಂದರೆ, ಸ್ವಚ್ಛ ಮೇಲ್ಮೈ ಮೇಲೆ ಮಣ್ಣನ್ನು ಸಮಾನವಾಗಿ ಹರಡುವುದು ಮತ್ತು ಉದ್ದ ಮತ್ತು ಅಗಲಕ್ಕೆ ಸಮಾನವಾಗಿ ಗೆರೆ ಎಳೆಯುವ ಮೂಲಕ ಸಣ್ಣ ಭಾಗಗಳನ್ನಾಗಿ ವಿಭಜಿಸಬೇಕು. ಪ್ರತಿ ಭಾಗದಿಂದಲೂ ಒಂದೊಂದು ಚಿಟಿಕೆ ಮಣ್ಣನ್ನು ತೆಗೆಯುವುದು. ಅಪೇಕ್ಷಿತ ಪ್ರಮಾಣದ ಮಾದರಿಯನ್ನು ಪಡೆಯುವವರೆಗೂ ಇದನ್ನು ಪುನರಾವರ್ತಿಸಲಾಗುತ್ತದೆ. ಸ್ವಚ್ಛ ಬಟ್ಟೆಯ ಬ್ಯಾಗ್‌ನಲ್ಲಿ ಈ ಮಾದರಿಯನ್ನು ಸಂಗ್ರಹಿಸಿ. ಎಲೆಗಳು ಮತ್ತು ಇತರ ಭಾಗಗಳಿಂದ ಮಣ್ಣಿನ ಮಾದರಿಯು ಕಲಬೆರಕೆಯಾಗಲು ಬಿಡಬೇಡಿ. ಪ್ರತಿ ಮಾದರಿಯ ಕ್ಷೇತ್ರದ ವಿವರಗಳು, ರೈತರ ಹೆಸರು ಮತ್ತು ವಿಳಾಸ, ಹಿಂದಿನ ಬೆಳೆ ಮತ್ತು ಪೋಷಕಾಂಶ ಶಿಫಾರಸು ಬಯಸಿದ ಬೆಳೆಯ ಹೆಸರಿನ ಲೇಬಲ್‌ ಅನ್ನು ಪ್ರತಿ ಮಾದರಿಯ ಬ್ಯಾಗ್‌ ಮೇಲೂ ಅಂಟಿಸಬೇಕು. ಸಂಗ್ರಹಿಸಿದ ಮಣ್ಣಿನ ಮಾದರಿಯನ್ನು ಮಣ್ಣು ಪರೀಕ್ಷೆ ಲ್ಯಾಬ್‌ಗೆ ವಿಶ್ಲೇಷಣೆಗಾಗಿ ಕಳುಹಿಸಬೇಕು.

undefined
undefined
undefined
undefined

ನಮ್ಮ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿ

ಫಾರ್ಮ್ ಆನ್-ದಿ-ಗೋ: ನಮ್ಮ ಆ್ಯಪ್ ನಲ್ಲಿ ಯಾವುದೇ ಸಮಯದಲ್ಲಿ, ಎಲ್ಲಿಂದಲಾದರೂ ಮಾರುಕಟ್ಟೆಯ ದಿನನಿತ್ಯದ ಮಾಹಿತಿಯನ್ನು ಪಡೆಯಿರಿ. ಇದು ನಿಮ್ಮ ಭಾಷೆಯಲ್ಲಿಯೂ ಲಭ್ಯವಿದೆ.

google play button