ಹಿಂದೆ
ತಜ್ಞರ ಲೇಖನಗಳು
ಹೊಸ ದ್ರಾಕ್ಷಿ ತೋಟವನ್ನು ನಿರ್ಮಾಣ ಮಾಡುವ ಕೃಷಿಕರಿಗೆ ಸಲಹೆಗಳು

ತಿನ್ನುಲು, ವೈನ್ ತಯಾರಿಕೆ ಮತ್ತು ಒಣದ್ರಾಕ್ಷಿ ತಯಾರಿಕೆ ಮುಂತಾದ ಹಲವು ಉದ್ದೇಶಗಳಿಗಾಗಿ ದ್ರಾಕ್ಷಿಯನ್ನು ಬೆಳೆಯುವುದರಿಂದ, ಇತ್ತೀಚಿನ ವರ್ಷಗಳಲ್ಲಿ ದ್ರಾಕ್ಷಿ ಬೆಳೆಸಲು ಸಾಕಷ್ಟು ಬೇಡಿಕೆಯಿದೆ.

ದ್ರಾಕ್ಷಿ ಕೃಷಿಗೆ ಯಾವ ಹವಾಮಾನ ಸೂಕ್ತವಾಗಿದೆ ?

ದ್ರಾಕ್ಷಿ ಕೃಷಿಗೆ ಯಾವ ಹವಾಮಾನ ಸೂಕ್ತವಾಗಿದೆ ?

undefined

ಜಮೀನಿನಲ್ಲಿ, ದ್ರಾಕ್ಷಿ ಪ್ರಭೇದಗಳ ನೆಡಲು ಸೆಪ್ಟೆಂಬರ್-ಅಕ್ಟೋಬರ್ ಹಾಗೂ ರೂಟ್ಸ್ಟಾಕ್ಸ್ ನ ರೂಟ್ ಕಟ್ಟಿಂಗ್ಸ್ ನೆಡಲು ಫೆಬ್ರವರಿ-ಮಾರ್ಚ್ ಸೂಕ್ತಸಮಯವಾಗಿರುತ್ತದೆ.

undefined
undefined

ದ್ರಾಕ್ಷಿ ಕೃಷಿಗೆ ಸೂಕ್ತವಾದ ಮಣ್ಣು

ದ್ರಾಕ್ಷಿ ಕೃಷಿಗೆ ಸೂಕ್ತವಾದ ಮಣ್ಣು

ದ್ರಾಕ್ಷಿಯನ್ನು ವಿವಿಧ ಮಣ್ಣಿನ ಪ್ರಕಾರಗಳಲ್ಲಿ ಬೆಳೆಸಲಾಗುತ್ತಿದೆ. ನೀರನ್ನು ಚನ್ನಾಗಿ ಇಂಗಿಸಿಕೊಳ್ಳುವ ಉತ್ತಮ ಸಾವಯವ ಅಂಶವನ್ನು ಹೊಂದಿರುವ ಲೋಮಿ - ಮರಳು ಮಿಶ್ರಿತ ಮಣ್ಣು ಬಹಳ ಸೂಕ್ತ. ಉತ್ತಮ ಇಳುವರಿಯನ್ನು ಪಡೆಯಲು ಮಣ್ಣಿನಲ್ಲಿ ಸಾವಯವ ಅಂಶವು ತುಂಬಾ ಮುಖ್ಯ. ಆದ್ದರಿಂದ ದ್ರಾಕ್ಷಿ ತೋಟಗಳನ್ನು ನೆಡುವ ಮೊದಲು ಸಾವಯವ ಪ್ರಮಾಣವನ್ನು ಪರಿಶೀಲಿಸಿ. ನೀರನ್ನು ಇಂಗಿಸಿಕೊಳ್ಳುವ ಕ್ಷಮತೆ ಇಲ್ಲದಿರುವ ಮಣ್ಣು ಹಾಗು ಅಲ್ಕಲೈನ್ ಮಣ್ಣಿನಲ್ಲಿ ದ್ರಾಕ್ಷಿ ತೋಟ ಮಾಡಬಾರದು.

undefined
undefined

ಪ್ರಸ್ತುತ ರಫ್ತು ಮಾಡಲಾಗುತ್ತಿರುವ ಪ್ರಮುಖ ತಳಿಗಳು

ಪ್ರಸ್ತುತ ರಫ್ತು ಮಾಡಲಾಗುತ್ತಿರುವ ಪ್ರಮುಖ ತಳಿಗಳು

➥ ಹಸಿರು ಬೀಜರಹಿತ ಧ್ರಾಕ್ಷಿ: ಥಾಂಪ್ಸನ್ ಸೀಡ್‌ಲೆಸ್, ಸೋನಾಕಾ, ತಾಸ್-ಎ-ಗಣೇಶ್, ಎ 17/3.

➥ ಬಣ್ಣದ ಬೀಜರಹಿತ ಧ್ರಾಕ್ಷಿ: ಫ್ಲೇಮ್ ಸೀಡ್‌ಲೆಸ್, ಶರದ್ ಸೀಡ್‌ಲೆಸ್, ಫ್ಯಾಂಟಸಿ ಸೀಡ್‌ಲೆಸ್.

ರಫ್ತುಗಾಗಿ ಬೆಳೆಯುತ್ತಿರುವ ಹೊಸ ತಳಿಗಳು

ರಫ್ತುಗಾಗಿ ಬೆಳೆಯುತ್ತಿರುವ ಹೊಸ ತಳಿಗಳು

➥ ಹಸಿರು ಬೀಜಯುಕ್ತ ಧ್ರಾಕ್ಷಿ: ಇಟಾಲಿಯಾ

➥ ಬಣ್ಣದ ಬೀಜಯುಕ್ತ ಧ್ರಾಕ್ಷಿ: ರೆಡ್ ಗ್ಲೋಬ್

undefined
undefined

ತೋಟ ನೆಡುವ ಮುಂಚೆ ಮಾಡಬೇಕಾದ ಚಟುವಟಿಕೆಗಳು ಯಾವುವು ?

ತೋಟ ನೆಡುವ ಮುಂಚೆ ಮಾಡಬೇಕಾದ ಚಟುವಟಿಕೆಗಳು ಯಾವುವು ?

ಜಮೀನಿನ ತಯಾರಿ

ಜಮೀನಿನ ತಯಾರಿ

ಮುಳ್ಳಿನ ಪೊದೆಗಳು ಮತ್ತು ಕಳೆಯನ್ನು ಕಿತ್ತುಹಾಕಿ. ಟ್ರ್ಯಾಕ್ಟರ್‌ನಿಂದ ಭೂಮಿಯನ್ನು ಉಳುಮೆ ಮಾಡಿ ನಂತರ ಸಮದಟ್ಟ ಮಾಡಬೇಕು. “ಗ್ಲೈಫೋಸೇಟ್” 10 ರಿಂದ 15 ಮಿಲಿ ಪ್ರತಿ ಲೀಟರ್ ನೀರಿನಲ್ಲಿ ಮಿಶ್ರಣ ಮಾಡಿ, ದ್ರಾಕ್ಷಿ ನಾಟಿಯ ಮುನ್ನ ಬೆಳೆರಹಿತ ಜಮೀನಲ್ಲಿ ಉಪಯೋಗಿಸುವ ಮುಲಕ ಸೈನೊಡಾನ್ ಮತ್ತು ನಟ್‌ಗ್ರಾಸ್‌ನಂತಹ ಪ್ರಮುಖ ಕಳೆಗಳನ್ನು ಸಂಪೂರ್ಣವಾಗಿ ನಿಯಂತ್ರಿಸಬೇಕು.

undefined
undefined

ತೋಟದ ವಿನ್ಯಾಸ

ತೋಟದ ವಿನ್ಯಾಸ

ದ್ರಾಕ್ಷಿಯ ಜೀವಿತಾವಧಿಯವರೆಗೂ ನಿರ್ಮಾಣಮಾಡಿರುವ ಹಂದರ ಮತ್ತು ನೆಟ್ಟ ದ್ರಾಕ್ಷಿ ಗಿಡಗಳು ಶಾಶ್ವತವಾಗಿರುತ್ತದೆ. ಆದ್ಧರಿಂದ ವಿನ್ಯಾಸವು ಪರಿಪೂರ್ಣವಾಗಿರಬೇಕು. ಬಳ್ಳಿಯ ಬೆಳವಣಿಗೆಯ ಸಮಯದಲ್ಲಿ ಸೂರ್ಯನ ಬೆಳಕನ್ನು ಉತ್ತಮವಾಗಿ ಬಳಸುವುದಕ್ಕಾಗಿ, ಉತ್ತರ-ದಕ್ಷಿಣ ದಿಕ್ಕಿನಲ್ಲಿ ಸಸ್ಯ ನಾಟಿಮಾಡಬೇಕು. ಇದರಿಂದ ಬಳ್ಳಿಯ ಸಾಲುಗಳ ಎರಡೂ ಬದಿಯಲ್ಲಿ ಸಮನಾಗಿ ಸೂರ್ಯನ ಬೆಳಕನ್ನು ಪಡೆಯಲು ಅನುವು ಮಾಡಿಕೊಡುತ್ತದೆ ಹಾಗು ಹಣ್ಣಿನ ಗೊಂಚಲುಗಳು ನೇರ ಸೂರ್ಯನ ಕಿರಣಗಳಿಂದ ರಕ್ಷಿಣೆ ಪಡೆಯುತ್ತವೆ ಇದು ಗೊಂಚಲು ಸುಡುವಿಕೆಯ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.

undefined
undefined

ಟ್ರೆಂಚ್ / ಕಂದಕ ನಿರ್ಮಾಣ

ಟ್ರೆಂಚ್ / ಕಂದಕ ನಿರ್ಮಾಣ

ವಿನ್ಯಾಸದ ಅನುಗುಣವಾಗಿ ಉದ್ದ ಹಾಗು 2.5 ‘× 2.5’ ಆಳ ಮತ್ತು ಅಗಲದ ಟ್ರೆಂಚ್ಅನ್ನು ಗುದ್ದಲಿ, ಸಲಿಕೆ ಗಳಿಂದ ಅಥವಾ ಟ್ರಾಕ್ಟರ್ / ಜೆಸಿಬಿ ಯಂತ್ರದಿಂದ ತೆರೆಯಬೇಕು. ಟ್ರೆಂಚ್ ತೆರೆಯುತ್ತಿರುವಾಗ, ಮೇಲಿನ ಒಂದು ಅಡಿ ಮಣ್ಣನ್ನು ಒಂದು ಬದಿಯಲ್ಲಿ ಇಡಬೇಕು ಮತ್ತು ಕೆಳಗಿನ ಮಣ್ಣನ್ನು ಇನ್ನೊಂದು ಬದಿಯಲ್ಲಿ ಇಡಬೇಕು. ತೆರೆದ ಟ್ರೆಂಚ್ಗಳನ್ನು 15-20 ದಿನಗಳವರೆಗೆ ಸೂರ್ಯನ ಬಿಸಿಲಿಗೆ ಒಡ್ಡಬೇಕು. ಇದನ್ನು ನವೆಂಬರ್ ತಿಂಗಳಲ್ಲಿ ಮಾಡಬೇಕು.

undefined
undefined

ಟ್ರೆಂಚ್ ತುಂಬಿ ಸಮತಟ್ಟ ಗೊಳಿಸುವುದು

ಟ್ರೆಂಚ್ ತುಂಬಿ ಸಮತಟ್ಟ ಗೊಳಿಸುವುದು

ಒಂದು ಬದಿಯಲ್ಲಿ ಇರಿಸಲಾಗಿರುವ ಮೇಲಿನ ಮಣ್ಣನ್ನು ಮೊದಲು ಟ್ರೆಂಚ್ ನ ಕೆಳಭಾಗದಲ್ಲಿ ತುಂಬಬೇಕು. ಒಂದು ಸಣ್ಣ ಬುಟ್ಟಿ ಚನ್ನಾಗಿ ಕೊಳೆತ ಕೊಟ್ಟಿಗೆ ಗೊಬ್ಬರವನ್ನು ಪ್ರತಿ ಅಡಿ ಟ್ರೆಂಚ್ ಉದ್ದಕ್ಕೆ ಉದುರಿಸಬೇಕು, ಇದರ ಮೇಲೆ ಸಿಂಗಲ್ ಸೂಪರ್ ಫಾಸ್ಫೇಟ್ ನನ್ನು ಒಂದು ಕೆಜಿ ಪ್ರತಿ ಅಡಿ ಟ್ರೆಂಚ್ ಉದ್ದಕ್ಕೆ ಹಾಕಬೇಕು.

undefined
undefined

ಹನಿ ನೀರಾವರಿ ಪದ್ಧತಿ

ಹನಿ ನೀರಾವರಿ ಪದ್ಧತಿ

ರೂಟ್ ಕಟ್ಟಿಂಗ್ಸ್ ನೆಡುವ ಮೊದಲು ಹನಿ ನೀರಾವರಿ ಪೈಪ್ಗಳನ್ನೂ ಅಳವಡಿಸಬೇಕು. ಮಣ್ಣಿನ ಕೆಳಗೆ ಇರಿಸಿದ ಪೈಪ್ ಹೆಚ್ಚು ಬಾಳಿಕೆ ಬರುವುದರಿಂದ ಮುಖ್ಯ ಮತ್ತು ಉಪ-ಮುಖ್ಯ ಪೈಪ್ನ ಸಾಲುಗಳನ್ನು ತೆರೆದ ಟ್ರೆಂಚ್ನಲ್ಲಿ ಸರಿಯಾಗಿ ಹಾಕಬೇಕು. ಮುಖ್ಯ ಪೈಪ್ ನಿಂದ ಬದಿಗಳಿಗೆ ಹೋಗುವ ಸಣ್ಣ ಲ್ಯಾಟರಲ್ ಪೈಪ್‌ಗಳನ್ನು ನಂತರ ಸಸ್ಯಗಳ ಸಾಲುಗಳಲ್ಲಿ ಇರಿಸಲಾಗುತ್ತದೆ.

undefined
undefined
undefined
undefined

ರೂಟ್ ಸ್ಟಾಕ್ ನೆಡುವುದು

ರೂಟ್ ಸ್ಟಾಕ್ ನೆಡುವುದು

ಕಳಪೆ ತಳಿಯ ಮಿಶ್ರಣವನ್ನು ತಪ್ಪಿಸಲು, ವಿಶ್ಚಾಸಾರ್ಹ ನರ್ಸರಿಯಿಂದ ಬೇರು ಬಿಟ್ಟಿರುವ ರೂಟ್ ಸ್ಟಾಕ್ ಕಟ್ಟಿಂಗ್ಸ್ ಗಳನ್ನೂ ಖರೀದಿಸಿ.

ಫೆಬ್ರವರಿ-ಮಾರ್ಚ್ ತಿಂಗಳು, ರೂಟ್ ಸ್ಟಾಕ್ ನನ್ನು ತೋಟದಲ್ಲಿ ನೆಡಲು ಸೂಕ್ತ ಕಾಲ. ಹಗ್ಗ ಮತ್ತು ಸುಣ್ಣದ ಪುಡಿಯ ಸಹಾಯದಿಂದ ಸಾಲುಗಳಲ್ಲಿ ಗಿಡ ನೆಡುವ ಸ್ಥಳವನ್ನು ಗುರುತಿಸಿ. ಗುರುತಿಸಲಾದ ಜಾಗದಲ್ಲಿ 1x1x1 ಅಡಿ ಹೊಂಡಗಳನ್ನು ತೆರೆಯಿರಿ. 3 - 4 ನೋಡ್‌ಗಳನ್ನು ಹೊಂದಿರುವ ಪ್ರಬುದ್ಧ ರೂಟ್ ಸ್ಟಾಕ್ ಸಸ್ಯವನ್ನು ಹೊಂಡದ ಮಧ್ಯದಲ್ಲಿ ಇಡಬೇಕು ಮತ್ತು ಅದನ್ನು ಮರಳು, ಕೊಟ್ಟಿಗೆ ಗೊಬ್ಬರ ಹಾಗು ಮಣ್ಣಿನಿಂದ ತುಂಬಿಸಬೇಕು, ಜೊತೆಗೆ 2-3 ಗ್ರಾಂ ಕೀಟನಾಶಕ ಪುಡಿಯನ್ನು ಹಾಕಬೇಕು. ಬೇಸಿಗೆಯಲ್ಲಿ ಗೆದ್ದಲುಗಳ ದಾಳಿಯನ್ನು ನಿಯಂತ್ರಿಸಲು ಇದು ಸಹಾಯ ಮಾಡುತ್ತದೆ.

undefined
undefined

ರೂಟ್-ಸ್ಟಾಕ್ ನ ಆರೈಕೆ ಮತ್ತು ಕಸಿ ಮಾಡುವ ಮುಂದಿನ ಹಂತಗಳ ಬಗ್ಗೆ, ಇನ್ನೊಂದು ಲೇಖನೆಯಲ್ಲಿ ತಿಳಿಸುತ್ತೇವೆ. ದಯವಿಟ್ಟು ಆ ಲೇಕನಿಗಾಗಿ ಕಾಯಿರಿ, ಧನ್ಯವಾದಗಳು.

ಈ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು, ಲೇಖನವನ್ನು ಇಷ್ಟಪಡಲು ನೀವು ♡ ಐಕಾನ್ ಕ್ಲಿಕ್ ಮಾಡಿದ್ದೀರಿ ಮತ್ತು ಲೇಖನವನ್ನು ಈಗ ನಿಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಹಂಚಿಕೊಳ್ಳುತ್ತೇವೆ ಎಂದು ನಾವು ಭಾವಿಸುತ್ತೇವೆ!

ನಮ್ಮ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿ

ಫಾರ್ಮ್ ಆನ್-ದಿ-ಗೋ: ನಮ್ಮ ಆ್ಯಪ್ ನಲ್ಲಿ ಯಾವುದೇ ಸಮಯದಲ್ಲಿ, ಎಲ್ಲಿಂದಲಾದರೂ ಮಾರುಕಟ್ಟೆಯ ದಿನನಿತ್ಯದ ಮಾಹಿತಿಯನ್ನು ಪಡೆಯಿರಿ. ಇದು ನಿಮ್ಮ ಭಾಷೆಯಲ್ಲಿಯೂ ಲಭ್ಯವಿದೆ.

google play button