Back ಹಿಂದೆ
ಸರ್ಕಾರಿ ಯೋಜನೆ
Govt. Scheme
ಪ್ರಧಾನ ಮಂತ್ರಿ ಜೀವನ ಜ್ಯೋತಿ ವಿಮೆ ಯೋಜನೆ

ಈ ಯೋಜನೆಯನ್ನು ಮೊದಲು “Press Information Bureau, Government Of India” ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಯಿತು ಮತ್ತು ಹೆಚ್ಚಿನ ಮಾಹಿತಿಗಾಗಿ, ನೀವು “Press Information Bureau, Government Of India” ವೆಬ್‌ಸೈಟ್‌ಗೆ ಭೇಟಿ ನೀಡಬಹುದು

ಪ್ರಧಾನ ಮಂತ್ರಿ ಜೀವನ ಜ್ಯೋತಿ ವಿಮೆ ಯೋಜನೆ - ಪ್ರಧಾನ ಮಂತ್ರಿ ಜೀವನ ಜ್ಯೋತಿ ವಿಮೆ ಯೋಜನೆ, ಇದು ಸಾಮಾಜಿಕ ಭದ್ರತೆ ಯೋಜನೆಯಾಗಿದ್ದು, 2015ರ ಬಜೆಟ್‌ನಲ್ಲಿ ಭಾರತ ಸರ್ಕಾರ ಇದನ್ನು ಘೋಷಿಸಿದೆ. ಪ್ರಧಾನ ಮಂತ್ರಿ ಜೀವನ ಜ್ಯೋತಿ ಯೋಜನೆಗೆ ಅರ್ಹತೆ: ಬ್ಯಾಂಕ್‌ ಖಾತೆ ಹೊಂದಿರುವ ಮತ್ತು 18 ರಿಂದ 50 ವರ್ಷಗಳ ವಯೋ ಸಮೂಹದ ಎಲ್ಲ ಭಾರತೀಯರಿಗೂ ಲಭ್ಯವಿದೆ. 50 ವರ್ಷಗಳಿಗೂ ಮೊದಲೇ ಸ್ಕೀಮ್‌ಗೆ ಸೇರುವ ವ್ಯಕ್ತಿಗಳು ಪ್ರೀಮಿಯಂ ಪಾವತಿಗೆ ಷರತ್ತಿಗೆ ಒಳಪಟ್ಟಂತೆ 55 ವರ್ಷಗಳವರೆಗೆ ಜೀವ ವಿಮೆ ಕವರ್‌ ಅನ್ನು ಹೊಂದಿರುತ್ತಾರೆ. ಪ್ರಧಾನ ಮಂತ್ರಿ ಜೀವನ ಜ್ಯೋತಿ ಯೋಜನೆಗೆ ಪ್ರೀಮಿಯಂ: ವರ್ಷಕ್ಕೆ ರೂ. 330 ಇದನ್ನು ಒಂದು ಕಂತಿನಲ್ಲಿ ಸ್ವಯಂಚಾಲಿತವಾಗಿ ಡೆಬಿಟ್ ಮಾಡಲಾಗುತ್ತದೆ. ಪ್ರಧಾನ ಮಂತ್ರಿ ಜೀವನ ಜ್ಯೋತಿ ವಿಮೆ ಯೋಜನೆಗೆ ಪ್ರೀಮಿಯಂ ಪಾವತಿ ವಿಧಾನ: ಚಂದಾದಾರರ ಖಾತೆಯಿಂದ ಬ್ಯಾಂಕ್‌ ಸ್ವಯಂಚಾಲಿತವಾಗಿ ಪ್ರೀಮಿಯಂ ಕಡಿತಗೊಳಿಸಿಕೊಳ್ಳಲಾಗುತ್ತದೆ. ಪ್ರಧಾನ ಮಂತ್ರಿ ಜೀವನ ಜ್ಯೋತಿ ಯೋಜನೆಗೆ ರಿಸ್ಕ್ ಕವರೇಜ್: ಯಾವುದೇ ಕಾರಣಕ್ಕೆ ಸಾವನ್ನಪ್ಪಿದರೆ ರೂ. 2 ಲಕ್ಷ. ನಿಯಮ ಪ್ರಧಾನ ಮಂತ್ರಿ ಜೀವನ ಜ್ಯೋತಿ ಯೋಜನೆಗೆ ರಿಸ್ಕ್ ಕವರೇಜ್ ನಿಯಮಗಳು: ಪ್ರತಿ ವರ್ಷವೂ ಸ್ಕೀಮ್‌ಅನ್ನು ಪಡೆಯಬೇಕು. ದೀರ್ಘಾವಧಿ ಆಯ್ಕೆಯನ್ನೂ ಪಡೆಯಬಹುದಾಗಿದ್ದು, ಇದರಲ್ಲಿ ಪ್ರತಿ ವರ್ಷ ಬ್ಯಾಂಕ್‌ ಖಾತೆಯಿಂದ ಮೊತ್ತವನ್ನು ಸ್ವಯಂಚಾಲಿತವಾಗಿ ಕಡಿತಗೊಳಿಸಿಕೊಳ್ಳಲಾಗುತ್ತದೆ. ಪ್ರಧಾನ ಮಂತ್ರಿ ಜೀವನ ಜ್ಯೋತಿ ವಿಮೆ ಯೋಜನೆಯನ್ನು ಯಾರು ಅನುಷ್ಠಾನಗೊಳಿಸುತ್ತಾರೆ ?: ಯೋಜನೆಯನ್ನು ಜೀವ ವಿಮೆ ಕಾರ್ಪೊರೇಶನ್‌ ಒದಗಿಸುತ್ತದೆ ಮತ್ತು ಸ್ಕೀಮ್‌ಗೆ ಸೇರಲು ಬಯಸುವ ಎಲ್ಲ ಇತರ ವಿಮೆದಾರರು ಮತ್ತು ಈ ಉದ್ದೇಶಕ್ಕೆ ಬ್ಯಾಂಕ್‌ ಜೊತೆಗೆ ಒಪ್ಪಂದ ಮಾಡಿಕೊಂಡಿರುವ ವಿಮೆದಾರರು ಪ್ರಧಾನ ಮಂತ್ರಿ ಜೀವನ ಜ್ಯೋತಿ ಯೋಜನೆಗೆ ಸರ್ಕಾರದ ಕೊಡುಗೆ: (i) ವಿವಿಧ ಸಚಿವಾಲಯಗಳು, ತಮ್ಮ ಬಜೆಟ್‌ನಿಂದ ಅಥವಾ ಕ್ಲೇಮ್ ಮಾಡಿಲ್ಲದ ಹಣದಿಂದ ಬಜೆಟ್‌ನಲ್ಲಿ ಸಾರ್ವಜನಿಕ ಕಲ್ಯಾಣ ಫಂಡ್‌ನಿಂದ ವಿವಿಧ ವಿಭಾಗಗಳ ಅಡಿಯಲ್ಲಿ ಫಲಾನುಭವಿಗಳಿಗಾಗಿ ಪ್ರೀಮಿಯಂನಲ್ಲಿ ಕೊಡುಗೆ ನೀಡಬಹುದು. ಇದನ್ನು ವರ್ಷದ ಅವಧಿಯಲ್ಲಿ ಪ್ರತ್ಯೇಕವಾಗಿ ನಿರ್ಧರಿಸಲಾಗುತ್ತದೆ. (ii) ಸಾಮಾನ್ಯ ಪ್ರಚಾರ ವೆಚ್ಚವನ್ನು ಸರ್ಕಾರ ಭರಿಸುತ್ತದೆ. ಈ ಸ್ಕೀಮ್‌ಗೆ ಅರ್ಜಿ ನಮೂನೆಗಳು ಈ ಮುಂದಿನ ಲಿಂಕ್‌ನಲ್ಲಿ ಲಭ್ಯವಿವೆ: http://www.jansuraksha.gov.in/Forms-PMJJBY.aspx ಹೆಚ್ಚಿನ ವಿವರಗಳಿಗಾಗಿ ಈ ಮುಂದಿನ ವೆಬ್‌ಸೈಟ್‌ ಭೇಟಿ ಮಾಡಿ : http://www.jansuraksha.gov.in/

ನಮ್ಮ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿ

ಫಾರ್ಮ್ ಆನ್-ದಿ-ಗೋ: ನಮ್ಮ ಆ್ಯಪ್ ನಲ್ಲಿ ಯಾವುದೇ ಸಮಯದಲ್ಲಿ, ಎಲ್ಲಿಂದಲಾದರೂ ಮಾರುಕಟ್ಟೆಯ ದಿನನಿತ್ಯದ ಮಾಹಿತಿಯನ್ನು ಪಡೆಯಿರಿ. ಇದು ನಿಮ್ಮ ಭಾಷೆಯಲ್ಲಿಯೂ ಲಭ್ಯವಿದೆ.

google play button
app_download
stars ಇತರ ಉಚಿತ ವೈಶಿಷ್ಟ್ಯಗಳು stars
ಈಗಲೇ ಆ್ಯಪ್ ಡೌನ್‌ಲೋಡ್ ಮಾಡಿ