ವಿವರಣ : ಈ ಯೋಜನೆಯು ಗ್ರಾಮೀಣ ಪ್ರದೇಶದ ಸ್ವಇಚ್ಛೆಯಿಂದ ಕೆಲಸ ಮಾಡಲು ಮುಂದಾಗುವ ಜನರಿಗೆ ಆರ್ಥಿಕ ವರ್ಷದಲ್ಲಿ 100 ದಿನಗಳ ಅಕೌಶಲ್ಯ ದೈಹಿಕ ಕೆಲಸ ಉದ್ಯೋಗದ ಖಾತರಿಯನ್ನು ಖಚಿತ ಪಡಿಸುತ್ತದೆ.ಕೂಲಿ ಬಯಸುವವರ ಬೇಡಿಕೆಯ ಆಧಾರದ ಮೇಲೆ ಕೆಲಸವನ್ನು ಕೊಡಲ್ಪಡುತ್ತದೆ.
ಅರ್ಹತೆ : 1.ಕರ್ನಾಟಕ ರಾಜ್ಯ ನಿವಾಸಿಯಾಗಿರಬೇಕು 2.18 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನವರಾಗಿರಬೇಕು 3.ಗ್ರಾಮೀಣ ಪ್ರದೇಶದವರಾಗಿರಬೇಕು
ಪ್ರಕ್ರಿಯೆ : 1.ನಿಮ್ಮ ಕುಟುಂಬವು ನೋಂದಾವಣೆಗೊಂಡಿರುವ ಗ್ರಾಮ ಪಂಚಾಯಿತಿ ಕಛೇರಿಗೆ ಬರವಣಿಗೆಯ ಮೂಲಕ ಅರ್ಜಿ ಸಲ್ಲಿಸುವುದು. ಅರ್ಜಿ ನೋದಾವಣೆಯು ಕುಟುಂಬದ ಯಾವುದಾದರೂ ವಯಸ್ಕ ಸದಸ್ಯನ ಪರವಾಗಿ ಮಾಡತಕ್ಕದ್ದು. 2.ನೀವು ಮೌಖಿಕ ಅರ್ಜಿಯನ್ನು ಸಹಾ ಕೊಡಬಹುದು. 3.ಗ್ರಾಮ ಪಂಚಾಯಿತಿಯು ಅರ್ಜಿಯನ್ನು ಪರಿಶೀಲಿಸಿ ಪೂರ್ಣ ಕುಟುಂಬಕ್ಕೆ ಕೆಲಸದ ಕಾರ್ಡನ್ನು ಕೊಡುತ್ತದೆ. 4.ಕುಟುಂಬದ ಪ್ರತಿಯೊಂದು ಕೆಲಸದ ಕಾರ್ಡಿಗೂ ಅದರದ್ದೇ ಆದ ನೋಂದಣಿ ಸಂಖ್ಯೆ ಕೊಡಲಾಗುವುದು. 5.ಅಭ್ಯರ್ಥಿಯು ಕೆಲಸಕ್ಕೆ ಅರ್ಜಿಯನ್ನು ಗ್ರಾಮ ಪಂಚಾಯತಿ ಅಥವಾ ಕ್ಷೇತ್ರ ಮಟ್ಟದ ಉದ್ಯೋಗ ಖಾತರಿ ಯೋಜನೆಯ ಕಾರ್ಯಕಾರಿ ಅಧಿಕಾರಿಗೆ ಸಲ್ಲಿಸತಕ್ಕದ್ದು. 6.ಅಭ್ಯರ್ಥಿಗಳಿಗೆ ಕೆಲಸಕ್ಕೆ ಎಲ್ಲಿ ಮತ್ತು ಯಾವಾಗ ಹಾಜರಾಗಬೇಕು ಎಂಬುದನ್ನು ಅರ್ಜಿಸಲ್ಲಿಸಿದ 15 ದಿನಗಳೊಳಗಾಗಿ ಹೇಳಲಾಗುತ್ತದೆ. ಮಾಹಿತಿಯನ್ನು ಪತ್ರದ ಮೂಲಕ ಹಾಗೂ ಗ್ರಾಮ ಪಂಚಾಯಿತಿ ಮತ್ತು ಕ್ಷೇತ್ರ ಮಟ್ಟದ ಅಧಿಕಾರಿಯ ಕಛೇರಿ ಪ್ರಕಟಣಾ ಹಲಗೆಯ ಮೇಲೆ ಪ್ರದರ್ಶಿಸುವ ಮೂಲಕ ಕೊಡಲಾಗುವುದು. 8.ಕೆಲಸದ ಕಾರ್ಡಿನ ಸಿಂಧುತ್ವದ ಅವಧಿ 5 ವರ್ಷಗಳು. ಕೆಲಸದ ಕಾರ್ಡಿನಿಂದ ಹೆಸರನ್ನು ತಗೆದು ಹಾಕಲು ಅವಕಾಶವಿದೆ. ಲಾಭ : ರೂ 30,900(100 ದಿನಗಳ ಉದ್ಯೋಗಕ್ಕೆ )