

ನೇರ ಬಿತ್ತನೆ ಭತ್ತವು ಭಾರತದ ಅನೇಕ ಪ್ರದೇಶಗಳಲ್ಲಿ ಜನಪ್ರಿಯವಾಗುತ್ತಿದೆ. ರೈತರ ಅನುಕೂಲಕ್ಕಾಗಿ ಹೊಲ ಸಜ್ಜುಗೊಳಿಸುವ ಮತ್ತು ಬೆಳೆಯ ಆರಂಭಿಕ ದಿನಗಳಲ್ಲಿನ ಪ್ರಮುಖ ಅಭ್ಯಾಸಗಳನ್ನು ನಾವು ಈ ಕೆಳಗಿನ ನೀಡುತ್ತಿದ್ದೇವೆ.
ಬಿತ್ತನೆಯ ಸಮಯ
ಬಿತ್ತನೆಯ ಸಮಯ
• ಮುಂಗಾರಿನಲ್ಲಿ ಜೂನ್ ನಿಂದ ಜುಲೈ ತಿಂಗಳವೇಳೆ ಮಳೆ ಪ್ರಾರಂಭವಾದ ಕೂಡಲೇ ಬಿತ್ತನೆ ಮಾಡಬೇಕು.
• ಹಿಂಗಾರಿನಲ್ಲಿ ನವೆಂಬರ್ ನಿಂದ ಡಿಸೆಂಬರ್ ತಿಂಗಳವೇಳೆ ಬಿತ್ತನೆ ಮಾಡಬೇಕು.
ಬಿತ್ತನೆ ವಿಧಾನ
ಬಿತ್ತನೆ ವಿಧಾನ
ನೇರ ಬಿತ್ತನೆಯ ಭತ್ತದಲ್ಲಿ ನಾಲ್ಕು ವಿಧದ ಬಿತ್ತನೆ ವಿಧಾನಗಳಿವೆ:
-
ತೇವವುಳ್ಳ ನೇರ ಬಿತ್ತನೆಯ ಭತ್ತ : ಲೈಚೋಪಿ
-
ಒಣ ನೇರ ಬಿತ್ತನೆಯ ಭತ್ತ : ಟ್ರಾಕ್ಟರ್ ಚಾಲಿತ ಸೀಡ್ ಡ್ರಿಲ್‌ನೊಂದಿಗೆ ಬಿತ್ತನೆ (ಟಾರ್ ವಟಾರ್)
-
ಒಣ ನೇರ ಬಿತ್ತನೆಯ ಭತ್ತ : ಬೊಟ್ಟಾ
-
ಒಣ ನೇರ ಬಿತ್ತನೆಯ ಭತ್ತ : ಖುರ್ರಾ
1) ತೇವವುಳ್ಳ ನೇರ ಬಿತ್ತನೆಯ ಭತ್ತ : ಲೈಚೋಪಿ
- ತೇವವುಳ್ಳ ನೇರ ಬಿತ್ತನೆಯ ಭತ್ತ : ಲೈಚೋಪಿ
• ಭೂಮಿಯನ್ನು ಚನ್ನಾಗಿ ಉಳುಮೆ ಮಾಡಿ, ಪಡ್ಲರ್ ಅನ್ನು ಚಲಾವನೆ ಮಾಡಿ ನಂತರ ಹಲಗೆ ಬಳಸಿ ಹೊಲವನ್ನು ಸಮನಾಗಿ ಮಾಡಬೇಕು.
• ಬಿತ್ತನೆ ಮಾಡುವ ಮೊದಲು, ಮೊದಲ ಡೋಸ್ (ಶಿಫಾರಸ್ಸಿನ 10% N, 100% P, 75% K) ಗೊಬ್ಬರವನ್ನು ಹಾಕಿ ಮತ್ತೊಮ್ಮೆ ಹಲಗೆ ಬಳಸಿ ಹೊಲವನ್ನು ಸಮನಾಗಿ ಮಾಡಬೇಕು.
• ಹೊಲಗಳಿಂದ ನೀರನ್ನು ಬಸಿದು, ನಂತರ ಮೊದಲೇ ಮೊಳಕೆಯೊಡೆದ ಭತ್ತವನ್ನು ಸಾಲುಗಳಲ್ಲಿ ಬಿತ್ತಿ / ಸಮವಾಗಿ ಚೆಲ್ಲುವ ಮುಲಕ ಬಿತ್ತನೆ ಮಾಡಬೇಕು.


2) ಒಣ ನೇರ ಬಿತ್ತನೆಯ ಭತ್ತ : ಟ್ರಾಕ್ಟರ್ ಚಾಲಿತ ಸೀಡ್ ಡ್ರಿಲ್‌ನೊಂದಿಗೆ ಬಿತ್ತನೆ (ಟಾರ್ ವಟಾರ್)
- ಒಣ ನೇರ ಬಿತ್ತನೆಯ ಭತ್ತ : ಟ್ರಾಕ್ಟರ್ ಚಾಲಿತ ಸೀಡ್ ಡ್ರಿಲ್‌ನೊಂದಿಗೆ ಬಿತ್ತನೆ (ಟಾರ್ ವಟಾರ್)
• ಹಿಂದಿನ ಬೆಳೆಯನ್ನು ಕೊಯ್ಲು ಮಾಡಿದ ನಂತರ 2-3 ಉಳುಮೆಗಳನ್ನು (ಹ್ಯಾರೋಯಿಂಗ್) ಮಾಡಿ.
• ಪೂರ್ವ-ಬಿತ್ತನೆಯ ನೀರಾವರಿಯನ್ನು ಭಾರೀ ಪ್ರಮಾಣದಲ್ಲಿ ಅನ್ವಯಿಸಿ.
• ಮಣ್ಣು ಬಿತ್ತನೆಯ ಸಾಮರ್ಥ್ಯಕ್ಕೆ ತಲುಪಿದಾಗ ಒಂದು ಲಘು ಉಳುಮೆಯನ್ನು ಮಾಡಿ, ಪ್ಲ್ಯಾಂಕಿಂಗ್ ಮತ್ತು ಲೇಸರ್ ಲೆವೆಲಿಂಗ್ ಅನ್ನು ಬಳಸಿ ಸಮನಾಗಿ ಮಾಡಿ.
• ಮಣ್ಣಿನಲ್ಲಿ 60-70% ತೇವಾಂಶವಿದ್ದಲ್ಲಿ, 10 ಕೆಜಿ ಹೈಬ್ರಿಡ್ ಬೀಜ + 30 ಕೆಜಿ ಡಿಎಪಿ ಮಿಶ್ರಣ ಮಾಡಿ, ಟ್ರ್ಯಾಕ್ಟರ್ ಚಾಲಿತ ಸೀಡ್ ಡ್ರಿಲ್‌ನೊಂದಿಗೆ ಬಿತ್ತನೆ ಮಾಡಬೇಕು.
• ಸೀಡ್ ಡ್ರಿಲ್‌ನಿಂದ ಬಿತ್ತನೆ ಮಾಡಿದಾಗ ಬೀಜಗಳು ಮಣ್ಣಿನಿಂದ ಅದಾಗಿಯೇ ಮುಚ್ಚಲ್ಪಡುತ್ತವೆ.
• 5-7 ದಿನಗಳ ನಂತರ ಅತ್ಯುತ್ತಮ ಮೊಳಕೆಯೊಡೆಯುವಿಕೆಯನ್ನು ಸಾಲುಗಳಲ್ಲಿ ಕಾಣಬಹುದು.


3) ಒಣ ನೇರ ಬಿತ್ತನೆಯ ಭತ್ತ : ಬೊಟ್ಟಾ
- ಒಣ ನೇರ ಬಿತ್ತನೆಯ ಭತ್ತ : ಬೊಟ್ಟಾ
• ಬೇಸಿಗೆಯಲ್ಲಿ ಭೂಮಿಯನ್ನು ಚನ್ನಾಗಿ ಉಳುಮೆ ಮಾಡಿ ಎಲ್ಲಾ ಕಳೆಗಳನ್ನು ತೆಗೆದು ಹೊಲವನ್ನು ಸಮತಟ್ಟ ಮಾಡಿ.
• ಮಳೆಯು ಪ್ರಾರಂಭವಾದ ನಂತರ ಹೊಲವನ್ನು ಅಂತಿಮವಾಗಿ ಉಳುಮೆ ಮಾಡಿ ಬೀಜವನ್ನು ಬಿತ್ತಬೇಕು.
• ಮಣ್ಣಿನ ತೇವಾಂಶವು 60-70% ಇದ್ದಾಗ ಬೀಜವನ್ನು ಸೀಡ್ ಡ್ರಿಲ್ ಮೂಲಕ / ಚೆಲ್ಲುವ ಮೂಲಕ ಬಿತ್ತಬೇಕು.
• ಹಕ್ಕಿಗಳು ಬೀಜವನ್ನು ತಿನ್ನುವುದನ್ನು ತಪ್ಪಿಸಲು ಮತ್ತು ಸರಿಯಾದ ಮೊಳಕೆಯೊಡೆಯುವಿಕೆಗಾಗಿ ಹ್ಯಾರೋಯಿಂಗ್ ಮಾಡಿ ಮಣ್ಣನ್ನು ಮುಚ್ಚಬೇಕು.


4) ಒಣ ನೇರ ಬಿತ್ತನೆಯ ಭತ್ತ : ಖುರ್ರಾ
- ಒಣ ನೇರ ಬಿತ್ತನೆಯ ಭತ್ತ : ಖುರ್ರಾ
• ಮಳೆಗಾಲ ಪ್ರಾರಂಭವಾಗುವ ಮೊದಲು ಹೊಲಗಳನ್ನು ಸಿದ್ಧಪಡಿಸಿ.
• ಮಳೆಗಾಲ ಪ್ರಾರಂಭವಾಗುವ 15 ದಿನಗಳ ಮೊದಲು ಒಣ ಮಣ್ಣಿನಲ್ಲಿ ಬೀಜವನ್ನು ಬಿತ್ತಬೇಕು.
• ಹಕ್ಕಿಗಳು ಬೀಜವನ್ನು ತಿನ್ನುವುದನ್ನು ತಪ್ಪಿಸಲು ಮತ್ತು ಸರಿಯಾದ ಮೊಳಕೆಯೊಡೆಯುವಿಕೆಗಾಗಿ ಹ್ಯಾರೋಯಿಂಗ್ ಮಾಡಿ ಮಣ್ಣನ್ನು ಮುಚ್ಚಬೇಕು.
• ಈ ವಿಧಾನದಲ್ಲಿ, ಹೈಬ್ರಿಡ್ ತಳಿಗಳನ್ನು ಶಿಫಾರಸು ಮಾಡಲಾಗುವುದಿಲ್ಲ.


ಕಳೆ ನಿರ್ವಹಣೆ
ಕಳೆ ನಿರ್ವಹಣೆ
ಅಂತರ ಬೇಸಾಯವು ಕಳೆ ನಿರ್ವಹಣೆಗೆ ಮತ್ತು ಉತ್ತಮ ಬೇರಿನ ಬೆಳವಣಿಗೆಗೆ ಮಣ್ಣನ್ನು ಸಡಿಲಗೊಳಿಸಲು ಸಹಾಯ ಮಾಡುತ್ತದೆ. ಭತ್ತದ ಸಸಿಗಳ ಕವಲುವಡೆಯುವ ಆರಂಭದ ಹಂತದಿಂದ ಗರಿಷ್ಠ ಕವಲುವಡೆಯುವ ಹಂತದವರೆಗೂ ಕಳೆ ನಿರ್ವಹಣೆಮಾಡಬೇಕು.
ಕಳೆ ನಿರ್ವಹಣೆಯನ್ನು 3 ವಿಧಗಳಲ್ಲಿ ಮಾಡಲಾಗುತ್ತದೆ:
i) ಕೈಯಿಂದ / ಕೈ ಸಲಕರಣೆಗಳಿಂದ ಕಳೆ ಕೀಳುವುದು
ii) ಯಂತ್ರದ ಮೂಲಕ: ಪರಿಣಾಮಕಾರಿ ಕಳೆ ನಿಯಂತ್ರಣಕ್ಕಾಗಿ ಯಂತ್ರ ಚಾಲಿತ ವೀಡರ್ ಬಳಸಿ.
iii) ರಾಸಾಯನಿಕದಿಂದ: ಶಿಫಾರಸು ಮಾಡಲಾದ ಕಳೆನಾಶಕಗಳನ್ನು ಸಿಂಪಡಿಸಿ.
• ಬಿತ್ತನೆ ಮಾಡಿದ 0-3 ದಿನಗಳ ನಂತರ ಒಂದು ಪ್ರಿಎಮ್ಮೆರ್ಜೆಂಟ್ ಕಳೆನಾಶಕ ಪೆಂಡಿಮೆಥಾಲಿನ್/ಪ್ರಿಟಿಲಾಕ್ಲೋರ್ ಅನ್ನು ಸಿಂಪಡಿಸಿ.
• ಬಿತ್ತನೆ ಮಾಡಿದ 8 - 15 ದಿನಗಳ ನಂತರ ಕಳೆಗಳು ಬೆಳೆದು 1 - 3 ಎಲೆಗಳ ಹಂತದಲ್ಲಿದ್ದಾಗ ಕೌನ್ಸಿಲ್ ಆಕ್ಟಿವ್ ಅನ್ನು ಪ್ರತಿ ಎಕರೆಗೆ 90 ಗ್ರಾಂ ಪ್ರಮಾಣದಲ್ಲಿ 150 ಲೀಟರ್ ನೀರಿನೊಂದಿಗೆ ಸಿಂಪಡಿಸಿ. ಇದು ಅಗಲವಾದ ಎಲೆ, ಹುಲ್ಲಿನ ಕಳೆಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
• ಈ ಎರಡು ಕಳೆನಾಶಕಗಳಿಂದ ತಪ್ಪಿಸಿಕೊಂಡ ಕಳೆಗಳಿಗೆ, ಅವುಗಳ ಎಲೆಗಳ ಪ್ರಕಾರವನ್ನು ಆಧರಿಸಿ ಮತ್ತೊಂದು ಸುತ್ತಿನ ಕಳೆನಾಶಕವನ್ನು ಸಿಂಪಡಿಸಿ.


ಸೂಕ್ಷ್ಮ ಪೋಷಕಾಂಶಗಳ ಅನ್ವಯಿಸುವಿಕೆ
ಸೂಕ್ಷ್ಮ ಪೋಷಕಾಂಶಗಳ ಅನ್ವಯಿಸುವಿಕೆ
ಸತು:
ಲಕ್ಷಣಗಳು:
• ನಾಟಿ ಮಾಡಿದ 2-3 ವಾರಗಳ ನಂತರ ತುಕ್ಕಿನಂತ ಕಂದು ಬಣ್ಣದ ಚುಕ್ಕೆಗಳಾಗುತ್ತವೆ ಮತ್ತು ಹಳೆಯ ಎಲೆಗಳ ಬಣ್ಣ ಬದಲಾಗುತ್ತದೆ. ತೀವ್ರವಾದ ಪರಿಸ್ಥಿತಿಗಳಲ್ಲಿ ಹಳೆಯ ಎಲೆಗಳ ಅಂಚುಗಳು ಒಣಗುತ್ತವೆ, ಮತ್ತು ಹೊಸ ಎಲೆಗಳು ಗಾತ್ರದಲ್ಲಿ ಚಿಕ್ಕದಾಗಿರುತ್ತವೆ. ಬೆಳೆ ಪಕ್ವತೆಯು ಏಕರೂಪವಾಗಿರುವುದಿಲ್ಲ ಮತ್ತು ವಿಳಂಬವಾಗುತ್ತವೆ.
• ಸತು ಕೊರತೆಯ ಲಕ್ಷಣಗಳು ಕಂಡುಬಂದರೆ, ಜಿಂಕ್ ಸಲ್ಫೇಟ್ @ 0.5% ದ್ರಾವಣವನ್ನು ಕನಿಷ್ಠ 2 ಬಾರಿ ಸಿಂಪಡಿಸಿ.


ಕಬ್ಬಿಣ:
ಲಕ್ಷಣಗಳು:
• ಎಲೆಯ ನಾಳಗಳ ನಡುವೆ ಹಳದಿಯಾಗುತ್ತವೆ ಮತ್ತು ಎಲೆಗಳು ತುದಿಯಿಂದ ಮತ್ತು ಅಂಚುಗಳಿಂದ ಒಣಗಲು ಪ್ರಾರಂಭವಾಗುತ್ತದೆ. ತೀವ್ರವಾದ ಪರಿಸ್ಥಿತಿಗಳಲ್ಲಿ, ಎಲೆಗಳು ಬಿಳಿಯಾಗುತ್ತವೆ ಮತ್ತು ಸಾಯುತ್ತವೆ.
• ಕಬ್ಬಿಣದ ಕೊರತೆಯ ಲಕ್ಷಣಗಳು ಕಂಡುಬಂದರೆ, ಎಲೆಗಳ ಬಣ್ಣವು ಸಾಮಾನ್ಯ ಹಸಿರು ಬಣ್ಣಕ್ಕೆ ಬರುವವರೆಗೆ ಫೆರಸ್ ಸಲ್ಫೇಟ್ 1% ದ್ರಾವಣವನ್ನು 2-3 ಬಾರಿ ಸಿಂಪಡಿಸಬೇಕು.


ಈ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು, ಲೇಖನವನ್ನು ಇಷ್ಟಪಡಲು ನೀವು ♡ ಐಕಾನ್ ಕ್ಲಿಕ್ ಮಾಡಿದ್ದೀರಿ ಮತ್ತು ಲೇಖನವನ್ನು ಈಗ ನಿಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಹಂಚಿಕೊಳ್ಳುತ್ತೇವೆ ಎಂದು ನಾವು ಭಾವಿಸುತ್ತೇವೆ!